ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದ ಸಾಮಾಜಿಕ ಮಾಧ್ಯಮಗಳ ದಿಗ್ಗಜ ಕಂಪನಿಯಾಗಿರುವ ಟ್ವಿಟ್ಟರ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯಾಕ್ ಡೋರ್ಸಿ ತಮ್ಮ ಆಹಾರ ಪದ್ಧತಿಯ ಕುರಿತು ಕೆಲ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ತಾವು ವಾರದಲ್ಲಿ ಕೇವಲ ಏಳು ಊಟಗಳನ್ನು ಮಾತ್ರ ಮಾಡುತ್ತಿದ್ದು, ಅವು ಕೂಡ ರಾತ್ರಿಯ ವೇಳೆಯ ಭೋಜನವಾಗಿರುತ್ತವೆ ಎಂದಿದ್ದಾರೆ. ಬುಧವಾರ ವಾಯರ್ಡ್ ಗಾಗಿ ಯುಟ್ಯೂಬ್ ನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಡೋರ್ಸಿ, ತಮ್ಮ ವಿಚಿತ್ರ ಜೀವನಶೈಲಿಯ ದೊಡ್ಡ ಲಿಸ್ಟ್ ನಲ್ಲಿ ಅನ್ಯ ಅಂಶಗಳೂ ಕೂಡ ಶಾಮೀಲಾಗಿವೆ ಎಂದಿದ್ದಾರೆ. ಅವುಗಳಲ್ಲಿಯೂ ಕೂಡ ವಿಶೇಷವಾಗಿ ಐಸ್ ನೀರಿನಿಂದ ಸ್ನಾನ ಮಾಡುವುದೂ ಕೂಡ ಶಾಮೀಲಾಗಿದೆ.
ಟ್ವಿಟ್ಟರ್ ಸಿಇಓ ವಿಪಸನ ಧ್ಯಾನ ಹಾಗೂ ಇಂಟರ್ಮಿಟೆಂಟ್(ನಿಂತು-ನಿಂತು ಭೋಜನ ಸೇವನೆ) ಫಾಸ್ಟಿಂಗ್ ಪದ್ಧತಿ ಅನುಸರಿಸುತ್ತಾರೆ. ಡಿನ್ನರ್ ನಲ್ಲ್ಲಿ ಅವರು ಮೀನು, ಚಿಕನ್, ಸ್ಟಿಕ್ಸ ಹಾಗೂ ತರಕಾರಿ ಸೇವಿಸುತ್ತಾರೆ. ಮಾರ್ಚ್ ತಿಂಗಳಿನಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಡೆಸರ್ಟ್ ನಲ್ಲಿ ಅವರು ಬೌರಿಜ್ ಹಾಗೂ ಡಾರ್ಕ್ ಚಾಕ್ಲೆಟ್ ಸೇವಿಸುತ್ತಾರೆ ಎಂದಿದ್ದರು. ಅಷ್ಟೇ ಅಲ್ಲ ನಿತ್ಯ ಎರಡು ಗಂಟೆ ಮೆಡಿಟೇಶನ್ ಕೂಡ ಮಾಡುತ್ತಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಅವರು ನಾನು ಐಸ್ ನೀರಿನಿಂದ ಸ್ನಾನ ಮಾಡುತ್ತೇನೆ ಆದರೆ, ಪ್ರತಿ ನಿತ್ಯ ಅಲ್ಲ ಎಂದು ಹೇಳಿದ್ದಾರೆ.