ಅಮೇರಿಕಾದಲ್ಲಿ TikTok ಹಾಗೂ WeChat ಅನ್ನು ನಿಷೇಧಿಸಿದ ಟ್ರಂಪ್ ಸರ್ಕಾರ

TikTok ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ Executive Order ಹೊರಡಿಸಿದ್ದಾರೆ. ಅಲ್ಲಿನ ಫೆಡರಲ್ ಉದ್ಯೋಗಿಗಳಿಗೆ ಸರ್ಕಾರ ನೀಡಿರುವ ಸಾಧನಗಳಲ್ಲಿ TikTok ಬಳಕೆಯನ್ನು ಯುಎಸ್ ಸೆನೆಟ್ ಸರ್ವಾನುಮತದಿಂದ ನಿಷೇಧಿಸಿದೆ.

Updated: Aug 7, 2020 , 10:36 AM IST
ಅಮೇರಿಕಾದಲ್ಲಿ TikTok ಹಾಗೂ WeChat ಅನ್ನು ನಿಷೇಧಿಸಿದ ಟ್ರಂಪ್ ಸರ್ಕಾರ

ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೇರಿಕಾದಲ್ಲಿ ಟಿಕ್ ಟಾಕ್ ಹಾಗೂ ವೀಚಾಟ್ ಅಪ್ಲಿಕೇಶನ್ಗಳನ್ನು ನಿಷೇಧಿಸಿದ್ದಾರೆ. ಟಿಕ್ ಟಾಕ್‌ನ ಮೂಲ ಕಂಪನಿಯ ವಿರುದ್ಧ ಟ್ರಂಪ್ ಕಾರ್ಯನಿರ್ವಾಹಕ ಆದೇಶ ಹೊರಡಿಸಿದ್ದಾರೆ. ಈ ಆದೇಶವು 45 ದಿನಗಳವರೆಗೆ ಪರಿಣಾಮಕಾರಿಯಾಗಿರಲಿದೆ. ಚೀನಾದ ಮೂಲ ಕಂಪನಿಯಾದ ಬೈಟ್‌ಡ್ಯಾನ್ಸ್‌ನೊಂದಿಗಿನ ಯಾವುದೇ ವ್ಯವಹಾರಕ್ಕಾಗಿ ಅಮೆರಿಕನ್ ಕಂಪನಿ ಅಥವಾ ವ್ಯಕ್ತಿಗೆ ಈ ಆದೇಶ ಅನ್ವಯಿಸಲಿದೆ. " ಅಮೆರಿಕಾದ ರಾಷ್ಟ್ರೀಯ ಭದ್ರತೆ ರಕ್ಷಿಸಲು ಯುನೈಟೆಡ್ ಸ್ಟೇಟ್ಸ್ ಟಿಕ್ ಟಾಕ್ ಮಾಲೀಕರ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳಬೇಕು" ಎಂದು ಆದೇಶದಲ್ಲಿ ಹೇಳಲಾಗಿದೆ.

ಟಿಕ್ಟಾಕ್ ಅಮೆರಿಕಾದ ಭದ್ರತೆಗೆ ಅಪಾಯ ಎಂದು ಟ್ರಂಪ್ ಹೇಳಿದ್ದಾರೆ. ಆದೇಶದ ಪ್ರಕಾರ, "ಇದು ಡೇಟಾ ಸಂಗ್ರಹಣೆಗಾಗಿ ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಅಮೆರಿಕನ್ನರ ವೈಯಕ್ತಿಕ ಮತ್ತು ಸ್ವಾಮ್ಯದ ಮಾಹಿತಿಯನ್ನು ಪ್ರವೇಶಿಸಲು ಅನುಮತಿ ನೀಡುತ್ತದೆ. ಈ ಚೀನೀ ಅಪ್ಲಿಕೇಶನ್‌ಗಳು ಫೆಡರಲ್ ಉದ್ಯೋಗಿಗಳು ಮತ್ತು ಗುತ್ತಿಗೆದಾರರ ಸ್ಥಳಗಳನ್ನು ಪತ್ತೆಹಚ್ಚುತ್ತವೆ, ಬ್ಲ್ಯಾಕ್‌ಮೇಲ್‌ಗಾಗಿ ವೈಯಕ್ತಿಕ ಮಾಹಿತಿಯ ದಾಖಲೆಗಳನ್ನು ರಚಿಸುತ್ತವೆ ಮತ್ತು ಕಾರ್ಪೊರೇಟ್ ಬೇಹುಗಾರಿಕೆಗೆ ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ" ಎನ್ನಲಾಗಿದೆ.

ಸೆಪ್ಟೆಂಬರ್ 15 ನಂತರ ಇಡೀ ದೇಶಾದ್ಯಂತ ಬ್ಯಾನ್ ಮಾಡಲಾಗುವುದು
ಸೆಪ್ಟೆಂಬರ್ 15ರವರೆಗೆ ಈ ಕಂಪನಿಯನ್ನು ಅಮೇರಿಕಾ ಮೂಲದ ಕಂಪನಿಗೆ ಮಾರಾಟಮಾಡದೆ ಹೋದಲ್ಲಿ ಇಡೀ ಅಮೇರಿಕಾದ್ಯಂತ ಆಪ್ ಅನ್ನು ಬ್ಯಾನ್ ಮಾಡಲಾಗುವುದು ಎಂದು ವೈಟ್ ಹೌಸ್ ನಲ್ಲಿ ಟ್ರಂಪ್ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಮಾರಾಟವಾದರೆ, ಅದರ ಒಂದು ಭಾಗ ಅಮೆರಿಕಾದ ಎಕ್ಸ್ ಪೆಯರ್ಸ್ ಗೂ ಸಹ ಸಿಗಬೇಕು ಎಂದು ಟ್ರಂಪ್ ಹೇಳಿದ್ದಾರೆ.

ಈ ಸಾಧನಗಳಲ್ಲಿ ಟಿಕ್ ಟಾಕ್ ಬ್ಯಾನ್
ಅಮೆರಿಕಾದ ಫೆಡರಲ್ ಉದ್ಯೋಗಿಗಳಿಗೆ ಸರ್ಕಾರ ನೀಡಿರುವ ಸಾಧನದಲ್ಲಿ ಟಿಕ್ ಟಾಕ್ ಬಳಕೆಯನ್ನು ಯುಎಸ್ ಸೆನೆಟ್ ಸರ್ವಾನುಮತದಿಂದ ನಿಷೇಧಿಸಿದೆ. ಗುರುವಾರ ಸೆನೆಟ್ನಲ್ಲಿ ಮತದಾನದ ಮೂಲಕ ಮಸೂದೆಯ ಅನುಮೋದನೆಯ ನಂತರ ನಿಷೇಧವನ್ನು ವಿಧಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಶ್ವೇತಭವನವು ಟಿಕ್ ಟಾಕ್ ಆಪ್ ಒಂದು ಬೆದರಿಕೆ ಎಂದು ಹೇಳಿದೆ.

ಮೈಕ್ರೋಸಾಫ್ಟ್ ಜೊತೆಗೆ ನಡೆಯಲಿದೆ ಡೀಲ್
ಈ ಕುರಿತು ಈ ಮೊದಲು ಹೇಳಿಕೆ ನೀಡಿರುವ ಮೈಕ್ರೋಸಾಫ್ಟ್, ಅಮೇರಿಕಾದಲ್ಲಿ ಟಿಕ್ ಟಾಕ್ ಜೊತೆಗೆ ಡೀಲ್ ನಡೆಸುವ ಗುರಿ ಹೊಂದಲಾಗಿದ್ದು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಗಳಲ್ಲಿಯೂ ಕೂಡ ಸೆಪ್ಟೆಂಬರ್ 15ರವರೆಗೆ ವ್ಯವಹಾರವನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೇ ಎಂದಿತ್ತು. ಇದಕ್ಕಾಗಿ ಟಿಕ್ ಟಾಕ್ ಗೆ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ.