Leicester: ಯುಕೆಯಲ್ಲಿ ಭಾರತೀಯರ ವಿರುದ್ಧದ ಹಿಂಸಾಚಾರ: ಈ ಕೃತ್ಯ ಮೊದಲು ಎಸಗಿದ್ದು ಯಾರು ಗೊತ್ತಾ?

ಭಾನುವಾರ, ಲೀಸೆಸ್ಟರ್ ಪೊಲೀಸರು ಟ್ವಿಟ್ಟರ್‌ನಲ್ಲಿ ಈಸ್ಟ್ ಲೀಸೆಸ್ಟರ್‌ನ ಕೆಲವು ಭಾಗಗಳಲ್ಲಿ ಶನಿವಾರ ಅಂದರೆ ಸೆಪ್ಟೆಂಬರ್  17 ರಿಂದ ಭಾನುವಾರ ಅಂದರೆ ಸೆಪ್ಟೆಂಬರ್ 18ರವರೆಗೆ ಗಂಭೀರ ಅಡಚಣೆಗಳನ್ನು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ. ಯುವ ಸಮೂಹ ಪ್ರತಿಭಟನೆ ಆರಂಭಿಸಿದ ಬಳಿಕ ರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು.

Written by - Bhavishya Shetty | Last Updated : Sep 19, 2022, 10:41 PM IST
    • ಈಸ್ಟ್ ಲೀಸೆಸ್ಟರ್‌ನ ಕೆಲವು ಭಾಗಗಳಲ್ಲಿ ಭಾರತೀಯರ ವಿರುದ್ಧ ಹಿಂಸಾಚಾರ
    • ವಾಯುವ್ಯ ಲಂಡನ್‌ನ ಲೀಸೆಸ್ಟರ್ ನಗರದಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರ
    • ಅನೇಕ ವಿದೇಶಿ ಮಾಧ್ಯಮ ಸಂಸ್ಥೆಗಳು ಇದನ್ನು ಭಾರಿ ವಿಪತ್ತು ಎಂದು ಕರೆದಿವೆ
Leicester: ಯುಕೆಯಲ್ಲಿ ಭಾರತೀಯರ ವಿರುದ್ಧದ ಹಿಂಸಾಚಾರ: ಈ ಕೃತ್ಯ ಮೊದಲು ಎಸಗಿದ್ದು ಯಾರು ಗೊತ್ತಾ? title=
Leicester

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಪ್ರಾರಂಭವಾದ ಉದ್ವಿಗ್ನತೆ ಮತ್ತು ಜಗಳ ಈಗ ಬೀದಿಗಳಲ್ಲಿ ಗೋಚರಿಸುತ್ತದೆ. ವಾಯುವ್ಯ ಲಂಡನ್‌ನ ಲೀಸೆಸ್ಟರ್ ನಗರದಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರದ ಹಲವಾರು ವರದಿಗಳನ್ನು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ಹಿಂದೂಗಳು ಮತ್ತು ಮುಸ್ಲಿಮರ ಗುಂಪಿನ ನಡುವಿನ ಬೀದಿ ಘರ್ಷಣೆಯ ನಂತರ, ಅನೇಕ ವಿದೇಶಿ ಮಾಧ್ಯಮ ಸಂಸ್ಥೆಗಳು ಇದನ್ನು ಭಾರಿ ವಿಪತ್ತು ಎಂದು ಕರೆದಿವೆ.

ಇದನ್ನೂ ಓದಿ:  China Taiwan conflict: ಅಮೆರಿಕದ ಹೇಳಿಕೆ ಕೇಳಿ ಹೆಚ್ಚಾಯಿತು ಚೀನಾದ 'ಟೆನ್ಷನ್'.!

ಲೀಸೆಸ್ಟರ್‌ನಲ್ಲಿ ಏನಾಗುತ್ತಿದೆ?

ಭಾನುವಾರ, ಲೀಸೆಸ್ಟರ್ ಪೊಲೀಸರು ಟ್ವಿಟ್ಟರ್‌ನಲ್ಲಿ ಈಸ್ಟ್ ಲೀಸೆಸ್ಟರ್‌ನ ಕೆಲವು ಭಾಗಗಳಲ್ಲಿ ಶನಿವಾರ ಅಂದರೆ ಸೆಪ್ಟೆಂಬರ್  17 ರಿಂದ ಭಾನುವಾರ ಅಂದರೆ ಸೆಪ್ಟೆಂಬರ್ 18ರವರೆಗೆ ಗಂಭೀರ ಅಡಚಣೆಗಳನ್ನು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ. ಯುವ ಸಮೂಹ ಪ್ರತಿಭಟನೆ ಆರಂಭಿಸಿದ ಬಳಿಕ ರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು. ಶಾಂತಿಗಾಗಿ ಮನವಿ ಮಾಡಿದ ಪೊಲೀಸರು, ನಮ್ಮ ನಗರದಲ್ಲಿ ಹಿಂಸಾಚಾರ ಅಥವಾ ಅವ್ಯವಸ್ಥೆಯನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಘಟನೆಗಳಲ್ಲಿ ಈವರೆಗೆ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಶಾಂತಿಗೆ ಕಾರಣವೇನು?

ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಟಿ20 ಕ್ರಿಕೆಟ್ ಪಂದ್ಯದ ನಂತರ ಆಗಸ್ಟ್ 28 ರಿಂದ ಲೀಸೆಸ್ಟರ್‌ನ ಕೆಲವು ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಪಂದ್ಯದಲ್ಲಿ ಭಾರತ ಎರಡು ಎಸೆತಗಳು ಬಾಕಿ ಇರುವಂತೆಯೇ ಜಯ ಸಾಧಿಸಿತು. ಲೀಸೆಸ್ಟರ್‌ನ ಬೆಲ್‌ಗ್ರೇವ್‌ನಲ್ಲಿ ವಿಜಯೋತ್ಸವ ಆಚರಿಸಲು ಭಾರತದ ಜನರು ಜಮಾಯಿಸಿದಾಗ ಹಿಂಸಾಚಾರ ಭುಗಿಲೆದ್ದಿತು. ಒಬ್ಬ ವ್ಯಕ್ತಿಯ ಟೀ ಶರ್ಟ್ ಹರಿದ ನಂತರ ಈ ಎಲ್ಲಾ ಗಲಭೆಗಳು ಪ್ರಾರಂಭವಾಯಿತು. ಕೆಲವರು ಆತನಿಗೆ ಗುದ್ದುವುದು ಕೂಡ ಕಂಡು ಬಂತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಟೀಂ ಇಂಡಿಯಾ ಜೆರ್ಸಿ ಧರಿಸಿರುವ ಅಭಿಮಾನಿಗಳು ರಸ್ತೆಯಲ್ಲಿ ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತಿರುವುದು ಕಂಡು ಬಂದಿದೆ. ಈ ಸಮಯದಲ್ಲಿ, ಒಬ್ಬ ಪೊಲೀಸ್ ಅಧಿಕಾರಿ, ವ್ಯಕ್ತಿಯನ್ನು ಬಂಧಿಸುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ ಗುಂಪು ವ್ಯಕ್ತಿಯನ್ನು ಥಳಿಸುವುದನ್ನು ಮತ್ತು ಅವನ ಅಂಗಿಯನ್ನು ಹರಿದು ಹಾಕುವುದನ್ನು ತೋರಿಸಲಾಗಿದೆ.

ಇತ್ತೀಚಿನ ಹಿಂಸಾಚಾರಕ್ಕೆ ಕಾರಣವೇನು?

ಸೆಪ್ಟೆಂಬರ್ 18 ರಂದು ಪೋಸ್ಟ್ ಮಾಡಿದ ವೀಡಿಯೊದಲ್ಲಿ ದೇವಾಲಯವನ್ನು ಕೆಡವುತ್ತಿರುವುದನ್ನು ತೋರಿಸುತ್ತದೆ. ಹಿಂದೂ ಮಾನವ ಹಕ್ಕುಗಳ ಕಾರ್ಯಕರ್ತೆ ರಶ್ಮಿ ಸಾವಂತ್ ಪ್ರಕಾರ, ಹಿಂದೂಗಳ ಕಾರುಗಳು ಮತ್ತು ಇತರ ಆಸ್ತಿಗಳನ್ನು ಸಹ ನಾಶಪಡಿಸಲಾಗಿದೆ. ಈ ಎಲ್ಲಾ ಉದ್ವಿಗ್ನತೆಗಳು ಈ ಹಿಂಸಾಚಾರಕ್ಕೆ ಪೂರಕವಾಗಿವೆ ಎಂದು ತಿಳಿದುಬಂದಿದೆ

ಪೂರ್ವ ಇಂಗ್ಲೆಂಡ್‌ನ ಲೀಸೆಸ್ಟರ್ ನಗರದಲ್ಲಿ ಭಾರತೀಯ ಸಮುದಾಯದ ವಿರುದ್ಧ ನಡೆದ ಹಿಂಸಾಚಾರ ಮತ್ತು ಹಿಂದೂ ಆವರಣದ ಧ್ವಂಸವನ್ನು ಭಾರತ ತೀವ್ರವಾಗಿ ಖಂಡಿಸಿದೆ. ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಘರ್ಷಣೆಗಳ ವರದಿ ಪಡೆದ ನಂತರ ಯುಕೆ ಅಧಿಕಾರಿಗಳಿಂದ ತೊಂದರೆಗೊಳಗಾದವರಿಗೆ ರಕ್ಷಣೆ ನೀಡುವಂತೆ ಈ ಸಮಸ್ಯೆಯನ್ನು "ಬಲವಾಗಿ" ಕೈಗೆತ್ತಿಕೊಂಡಿರುವುದಾಗಿ ಇಲ್ಲಿನ ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದ ಮೇಲಿನ ಹಿಂಸಾಚಾರ, ಹಿಂದೂ ಧಾರ್ಮಿಕ ಸಂಕೀರ್ಣಗಳು ಮತ್ತು ಧಾರ್ಮಿಕ ಚಿಹ್ನೆಗಳ ಧ್ವಂಸವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೈಕಮಿಷನ್ ಹೇಳಿದೆ. ನಾವು ಯುಕೆ ಅಧಿಕಾರಿಗಳೊಂದಿಗೆ ಈ ವಿಷಯವನ್ನು ತೀವ್ರವಾಗಿ ಪ್ರಸ್ತಾಪಿಸಿದ್ದೇವೆ ಮತ್ತು ಈ ದಾಳಿಗಳಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣದ ಕ್ರಮಕ್ಕೆ ಕರೆ ನೀಡಿದ್ದೇವೆ. ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ನಾವು ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಹೇಳಿದೆ. 

ಇದನ್ನೂ ಓದಿ:  WATCH : ತೈವಾನ್‌ ಭೀಕರ ಭೂಕಂಪದ ವಿಡಿಯೋ ನೋಡಿ.. ಆಟಿಕೆಯಂತೆ ಅಲುಗಾಡಿದ ರೈಲು

ಲೀಸೆಸ್ಟರ್‌ನಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಶೇಕಡಾವಾರು ಎಷ್ಟು?

ಮಾಧ್ಯಮ ವರದಿಗಳ ಪ್ರಕಾರ, ಲೀಸೆಸ್ಟರ್‌ನಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ಸಂಖ್ಯೆ ಬಹುತೇಕ ಸಮಾನವಾಗಿತ್ತು. ಲೀಸೆಸ್ಟರ್‌ನಲ್ಲಿ ಮುಸ್ಲಿಮರು ಶೇಕಡಾ 7.4 ಮತ್ತು ಹಿಂದೂಗಳು ಶೇಕಡಾ 7.2 ರಷ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದೇ ಸಮಯದಲ್ಲಿ, ಇಲ್ಲಿ ಸಿಖ್ಖರ ಜನಸಂಖ್ಯೆಯು 2.4 ಪ್ರತಿಶತ ಮತ್ತು 55 ಪ್ರತಿಶತ ಕ್ರಿಶ್ಚಿಯನ್ನರು ಇದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News