Russian President Vladimir Putin: ಮೆಟ್ರೋದಲ್ಲಿನ ವರದಿಯ ಪ್ರಕಾರ, ರಷ್ಯಾದ ಪ್ರಸ್ತುತ ಫರ್ಟಿಲಿಟಿ ರೇಟ್ ಪ್ರತಿ ಮಹಿಳೆಗೆ ಸರಿಸುಮಾರು 1.5 ಮಕ್ಕಳಷ್ಟಿದ್ದು, ಜನಸಂಖ್ಯೆಯ ಸ್ಥಿರತೆಗೆ ಅಗತ್ಯವಿರುವ 2.1 ಕ್ಕಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ಉಕ್ರೇನ್ನೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶದ ಜನಸಂಖ್ಯೆಯು ಕುಸಿದಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಹೆಚ್ಚಿಸಲು ಈ ಸಲಗೆ ನೀಡಿದ್ದಾರೆ.
New rules : ರಷ್ಯಾ ಅಧ್ಯಕ್ಷರು ಮಾಡಿದ ಕಾಮೆಂಟ್ಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕಚೇರಿಯಲ್ಲಿ ಕೆಲಸ ಮಾಡುವಾಗ ಅಂತರವನ್ನು ಕಂಡುಕೊಳ್ಳುವ ಬದಲು ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವಂತೆ ವ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸದಲ್ಲಿದ್ದು ನಿನ್ನೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿಯಾಗಿದ್ದಾರೆ. ನಿನ್ನೆ ಪುಟಿನ್ ಏರ್ಪಡಿಸಿದ್ದ ಔತಣಾಕೂಟದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು.
ಕೆಲವು ಪಾಶ್ಚಿಮಾತ್ಯ ದೇಶಗಳು ಹಣಕಾಸು ಸಂಬಂಧಗಳ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಕಾರಣದಿಂದಾಗಿ ಜಾಗತಿಕ ಆರ್ಥಿಕತೆಯು ಹೆಚ್ಚಿನ ಬದಲಾವಣೆಗಳಿಗೆ ಒಳಗಾಗುತ್ತಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ವಾಲ್ಡೈ ಚರ್ಚಾ ಕ್ಲಬ್ನಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರ ಭಾರತದ ದೃಷ್ಟಿಕೋನ ಮತ್ತು ಅವರ ವಿದೇಶಾಂಗ ನೀತಿಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿಯವರ 'ಇಂಡಿಯಾ ಫಸ್ಟ್' ವಿದೇಶಾಂಗ ನೀತಿಯ ಅಡಿಯಲ್ಲಿ ರಾಷ್ಟ್ರವು ವಿಶ್ವದಲ್ಲಿ ತನ್ನ ಸ್ಥಾನದ ಬಗ್ಗೆ ಹೇಗೆ ವಿಶ್ವಾಸವನ್ನು ಬೆಳೆಸಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
SCO Summit Modi: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ಸಮರ್ಕಂದ್ ನಲ್ಲಿ ನಡೆಯುತ್ತಿದೆ. ಈ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ, ಇರಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ.
Russian President Vladimir Putin:ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಕುಟುಂಬಕ್ಕೆ ಮತ್ತೋರ್ವ ಅತಿಥಿಯನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಆ ಅತಿಥಿ ಬೇರೆ ಯಾರೂ ಅಲ್ಲ ಅವರ ಮಗು. ಹೌದು 69 ನೇ ವಯಸ್ಸಿನಲ್ಲಿ, ಪುಟಿನ್ ಮತ್ತೊಂದು ಮಗುವಿನ ತಂದೆಯಾಗಲಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿ ಬಾರಿ ಮಲ ಮೂತ್ರ ವಿಸರ್ಜನೆ ಮಾಡಿದಾಗಲು ಅದನ್ನು ಸೂಟ್ಕೇಸ್ನಲ್ಲಿ ಶೇಖರಿಸಿಲಾಗುತ್ತದೆ. ಬಳಿಕ ಸೂಟ್ಕೇಸ್ನ್ನು ಪುಟಿನ್ ಹೋದ ಕಡೆಯಲೆಲ್ಲಾ ತೆಗೆದುಕೊಂಡು ಹೋಗಲಾಗುತ್ತದೆ. ಇದಕ್ಕೆ ಕಾರಣವೂ ಬಹರಂಗವಾಗಿದೆ. ಪುಟಿನ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದು ನಿಜವಾಗಿದೆ.
ಪುಟಿನ್ ಮಗಳು ಕ್ಯಾಥರಿನಾ ಟಿಕೊನೊವಾ ಈ ಹಿಂದೆ ನರ್ತಕಿಯಾಗಿ ಕೆಲಸ ಮಾಡುತ್ತಿದ್ದರು. ಕ್ಯಾತೆರಿನಾ ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡಿದವು.
Russia-Ukraine Tension - ರಷ್ಯಾದ ಪಡೆಗಳು ನಿರಂತರವಾಗಿ ಉಕ್ರೇನಿಯನ್ ನೆಲದಲ್ಲಿ ಮುನ್ನುಗ್ಗುತ್ತಲೇ ಇವೆ. ಎರಡು ದಿನಗಳ ಕಾಲ, ಕ್ಷಿಪಣಿಗಳು, ರಾಕೆಟ್ ಲಾಂಚರ್ಗಳು ಮತ್ತು ಸೈನ್ಯದೊಂದಿಗೆ ಎಲ್ಲಾ ರಂಗಗಳಲ್ಲಿ ರಷ್ಯಾದ (Russia) ಸೈನಿಕರು ಮತ್ತು ಉಕ್ರೇನಿಯನ್ ಸೈನಿಕರ ನಡುವೆ ಯುದ್ಧ ನಡೆಯುತ್ತಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆಯ ಉದ್ದೇಶವು ರಷ್ಯಾವನ್ನು ರಕ್ಷಿಸುವುದು ಮತ್ತು ಉಕ್ರೇನ್ ಅನ್ನು ಸಶಸ್ತ್ರೀಕರಣಗೊಳಿಸುವುದು ಎಂದು ಹೇಳಿದ್ದಾದರೂ ಕೂಡ ಅವರ ಮುಖ್ಯ ಉದ್ದೇಶ, ಈಗ ಈ ಹಿಂದಿನ ಯುಎಸ್ಎಸ್ಆರ್ ಪ್ರದೇಶದ ಮೇಲೆ ಪ್ರಾಬಲ್ಯವನ್ನು ಸಾಧಿಸುವುದಾಗಿದೆ.ಈ ಹಿನ್ನಲೆಯಲ್ಲಿ ಈಗ ಒಟ್ಟಾರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಹಾದಿಯನ್ನು ಏಳು ಪ್ರಶ್ನೆಗಳ ಮೂಲಕ ಇಲ್ಲಿ ಉತ್ತರಿಸುವ ಪ್ರಯತ್ನವನ್ನು ಮಾಡಲಾಗಿದೆ.
ರಷ್ಯಾ ಉಕ್ರೇನ್ ನ್ನು ದ್ವೇಷಿಸುತ್ತಿರುವುದೇಕೆ?
Russia-Ukraine War: ಉಕ್ರೇನ್ನೊಂದಿಗೆ ನಡೆಯುತ್ತಿರುವ ಬಿಕ್ಕಟ್ಟಿನ ನಡುವೆ ರಷ್ಯಾ ಯುದ್ಧ ಘೋಷಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ಈ ಘೋಷಣೆ ಮಾಡಿದ್ದಾರೆ. ಏತನ್ಮಧ್ಯೆ, ಉಕ್ರೇನ್ ರಾಜಧಾನಿ ಕೀವ್ನಲ್ಲಿ ಸ್ಫೋಟಗಳ ಸುದ್ದಿ ಕೂಡ ವರದಿಯಾಗಿದೆ.
Afghanistan Crisis- ಅಫ್ಘಾನಿಸ್ತಾನ ಇದೀಗ ತಾಲಿಬಾನ್ (Taliban) ನಿಯಂತ್ರಣದಲ್ಲಿದೆ. ಅಫಘಾನ್ ಬಿಕ್ಕಟ್ಟು (Afghanistan Crisis) ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಿದೆ. ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ (PM Narendra Modi), ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin)ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದಾರೆ.
Vladimir Putin On Third World War: ಕಪ್ಪು ಸಮುದ್ರಕ್ಕೆ (Black Sea Incident) ನುಸುಳಿದ ಬ್ರಿಟನ್ ಶಿಪ್ ಕುರಿತು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾಡಿಮೀರ್ ಪುತಿನ್ ಬ್ರಿಟನ್ ಹಾಗೂ ಅಮೆರಿಕಾಗೆ ಎಚ್ಚರಿಕೆ ನೀಡಿದ್ದಾರೆ. ಪ್ರದೇಶದಲ್ಲಿ ಅಮೆರಿಕಾದ ಬೇಹುಗಾರಿಕಾ ವಿಮಾನವನ್ನು ಕೂಡ ಗುರುತಿಸಲಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇಬ್ಬರೂ ಜವಾಬ್ದಾರಿಯುತ ನಾಯಕರು ಎಂದು ಪ್ರತಿಪಾದಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಬ್ಬರೂ ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಯಾವುದೇ ಹೆಚ್ಚುವರಿ ಪ್ರಾದೇಶಿಕ ಶಕ್ತಿಯ ಹಸ್ತಕ್ಷೇಪವಿಲ್ಲದಿರುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.