WATCH: ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಹೀರೋ ಎಂದ ಪರ್ವೇಜ್ ಮುಷರಫ್..!

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಂದರ್ಶನವೊಂದರಲ್ಲಿ ಕಾಶ್ಮೀರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ವಿರುದ್ಧ ಹೋರಾಡಲು ಮುಜಾಹಿದ್ದೀನ್ ಆಗಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

Updated: Nov 14, 2019 , 11:41 AM IST
WATCH: ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಹೀರೋ ಎಂದ ಪರ್ವೇಜ್ ಮುಷರಫ್..!
file photo

ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಂದರ್ಶನವೊಂದರಲ್ಲಿ ಕಾಶ್ಮೀರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ವಿರುದ್ಧ ಹೋರಾಡಲು ಮುಜಾಹಿದ್ದೀನ್ ಆಗಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ರಾಜಕಾರಣಿ ಫರ್ಹತುಲ್ಲಾ ಬಾಬರ್ ಅವರು ಟ್ವಿಟರ್‌ನಲ್ಲಿ ಬುಧವಾರ ಹಂಚಿಕೊಂಡ ಸಂದರ್ಶನ ಕ್ಲಿಪ್‌ನಲ್ಲಿ, ಪರ್ವೇಜ್ ಮುಷರಫ್ ಅವರು 'ಪಾಕಿಸ್ತಾನಕ್ಕೆ ಬಂದ ಕಾಶ್ಮೀರಿಗಳು ಇಲ್ಲಿ ಹಿರೋ ಸ್ವಾಗತವನ್ನು ಪಡೆದರು. ನಾವು ಅವರಿಗೆ ತರಬೇತಿ ನೀಡುತ್ತಿದ್ದೆವು ಮತ್ತು ಬೆಂಬಲಿಸುತ್ತಿದ್ದೆವು. ನಾವು ಅವರನ್ನು ಮುಜಾಹಿದ್ದೀನ್ ಎಂದು ಪರಿಗಣಿಸಿದ್ದೇವೆ, ಅವರು ಭಾರತೀಯ ಸೇನೆಯೊಂದಿಗೆ ಹೋರಾಡುತ್ತಿದ್ದರು. ಇದಾದ ನಂತರ, ಲಷ್ಕರ್-ಎ-ತೈಬಾದಂತಹ ವಿವಿಧ ಭಯೋತ್ಪಾದಕ ಸಂಘಟನೆಗಳು ಈ ಅವಧಿಯಲ್ಲಿ ಹುಟ್ಟಿಕೊಂಡವು. ಜಿಹಾದಿ ಭಯೋತ್ಪಾದಕರು ನಮ್ಮ ಹಿರೋಗಳಾಗಿದ್ದರು' ಎಂದು ಹೇಳಿದ್ದಾರೆ. 

ಸಂದರ್ಶನದಲ್ಲಿ, ಜನರಲ್ (ನಿವೃತ್ತ) ಮುಷರಫ್ ಅವರು 'ಭಯೋತ್ಪಾದಕರಾದ ಒಸಾಮಾ ಬಿನ್ ಲಾಡೆನ್, ಅಮಾನ್ ಅಲ್-ಜವಾಹರಿ, ಜಲಾಲುದ್ದೀನ್ ಹಕ್ಕಾನಿ ಮತ್ತು ಇತರರು ಪಾಕಿಸ್ತಾನದ ವೀರರು' ಎಂದು ಹೇಳಿದ್ದಾರೆ.