Russia Ukraine Tension - UNSC ನಲ್ಲಿ ವಿಟೋ ಪಾವರ್ ಅಂದರೇನು? ಎಷ್ಟು ಬಾರಿ ರಷ್ಯಾ ಅದನ್ನು ಭಾರತದ ಪರ ಬಳಸಿದೆ?

Ukraine Crisis - ಉಕ್ರೇನ್ ಆಕ್ರಮಣದಿಂದಾಗಿ, ರಷ್ಯಾ ವಿರುದ್ಧ ಅನೇಕ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ರಷ್ಯಾ ವಿರುದ್ಧ ನಿರ್ಣಯವನ್ನು ಮಂಡಿಸಿವೆ. ಆದರೆ ಅದನ್ನು ತಡೆಯಲು ರಷ್ಯಾ ಮತ್ತೊಮ್ಮೆ ತನ್ನ ವಿಟೋ ಅಧಿಕಾರವನ್ನು ಬಳಸಿದೆ (What Is Veto Power). ಉಕ್ರೇನ್ 

Written by - Nitin Tabib | Last Updated : Feb 26, 2022, 05:29 PM IST
  • UNSCಯಲ್ಲಿ ವಿಟೋ ಪಾವರ್ ಅಂದರೇನು?
  • ಯಾರು ಅದನ್ನು ಯಾವಾಗ ಬಳಸುತ್ತಾರೆ?
  • ಭಾರತದ ಪರ ರಷ್ಯಾ ಎಷ್ಟು ಬಾರಿ ತನ್ನ ವಿಟೋ ಅಧಿಕಾರ ಬಳಸಿದೆ?
Russia Ukraine Tension - UNSC ನಲ್ಲಿ ವಿಟೋ ಪಾವರ್ ಅಂದರೇನು? ಎಷ್ಟು ಬಾರಿ ರಷ್ಯಾ ಅದನ್ನು ಭಾರತದ ಪರ ಬಳಸಿದೆ? title=
UNSC Veto Power (File Photo)

Ukraine Crisis - ಉಕ್ರೇನ್ ಆಕ್ರಮಣದಿಂದಾಗಿ, ರಷ್ಯಾ ವಿರುದ್ಧ ಅನೇಕ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ರಷ್ಯಾ ವಿರುದ್ಧ ನಿರ್ಣಯವನ್ನು ಮಂಡಿಸಿವೆ. ಆದರೆ ಅದನ್ನು ತಡೆಯಲು ರಷ್ಯಾ ಮತ್ತೊಮ್ಮೆ ತನ್ನ ವಿಟೋ ಅಧಿಕಾರವನ್ನು ಬಳಸಿದೆ (What Is Veto Power). ಉಕ್ರೇನ್ (Ukraine) ಮೇಲಿನ ತನ್ನ ಆಕ್ರಮಣವನ್ನು (Ukraine Russia War) ನಿಲ್ಲಿಸಲು ಮತ್ತು ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಮಾಸ್ಕೋಗೆ ಕರೆ ನೀಡುವ ಯುಎನ್ ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ವೀಟೋ ಮಾಡಿದೆ.

ರಷ್ಯಾ (Russia) ಬಳಿ ವೀಟೋ (Russia And Its Veto Power) ಅಧಿಕಾರ ಇರುವುದರಿಂದ ಇದು ಸಾಧ್ಯವಾಗಲಿದೆ ಎಂದು ಈ ಮೊದಲೇ ಊಹಿಸಲಾಗಿತ್ತು. US ಮತ್ತು ಅದರ ಬೆಂಬಲಿಗರಿಗೆ ರಷ್ಯಾ ವಿರುದ್ಧದ  ಪ್ರಸ್ತಾಪವು ವಿಫಲಗೊಳ್ಳಲಿದೆ ಎಂಬುದು ಮೊದಲೇ ತಿಳಿದಿತ್ತು. ಆದರೆ ಅದು ರಷ್ಯಾವನ್ನು ಅಂತರಾಷ್ಟ್ರೀಯವಾಗಿ ಪ್ರತ್ಯೇಕಿಸುತ್ತದೆ ಎಂದು ವಾದಿಸಿದ್ದರು. ಶುಕ್ರವಾರ ವಿಶ್ವಸಂಸ್ಥೆಯ ಭದ್ರತಾ (United Nations Security Council) ಮಂಡಳಿಯಲ್ಲಿ, ಈ ನಿರ್ಣಯದ ಪರವಾಗಿ 11 ಮತಗಳು ಮತ್ತು ವಿರೋಧವಾಗಿ ಒಂದು ಮತ (Russia) ಚಲಾವಣೆಯಾಗಿದೆ. ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತದಾನದಿಂದ ದೂರ ಉಳಿದಿವೆ.

ಈ ನಿರ್ಣಯದ ವೈಫಲ್ಯವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದೇ ರೀತಿಯ ನಿರ್ಣಯದ ಮೇಲೆ ಶೀಘ್ರವಾಗಿ ಮತ ಚಲಾಯಿಸುವಂತೆ ಬೆಂಬಲಿಗರಿಗೆ ಒತ್ತಾಯಿಸಲು ದಾರಿ ಮಾಡಿಕೊಟ್ಟಿದೆ. ಅಂದಹಾಗೆ, 193 ಸದಸ್ಯರ ಸಾಮಾನ್ಯ ಸಭೆಯಲ್ಲಿ ವೀಟೋ ನಿಬಂಧನೆ ಇಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಮತದಾನ ಯಾವಾಗ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈಗ ಅಂತಹ ಪರಿಸ್ಥಿತಿಯಲ್ಲಿ ವೀಟೋ ಪವರ್ ಎಂದರೇನು ಮತ್ತು ಕೆಲವು ದೇಶಗಳು ನಿರ್ಬಂಧಗಳಿಂದ ತಮ್ಮನ್ನು ಹೇಗೆ ಉಳಿಸಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು  ಪ್ರಮುಖ ವಿಷಯವಾಗುತ್ತದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಎಂದರೇನು? ಅದರ ಸದಸ್ಯರ ಸಂಖ್ಯೆ ಎಷ್ಟು?
ವಿಶ್ವಾದ್ಯಂತ ಶಾಂತಿ, ಸೌಹಾರ್ದತೆ ಮತ್ತು ಭದ್ರತೆಯನ್ನು ಕಾಪಾಡುವ ಕಾರ್ಯವನ್ನು UNSCಗೆ ವಹಿಸಲಾಗಿದೆ. UNSC 15 ಸದಸ್ಯರನ್ನು ಒಳಗೊಂಡಿದೆ ಮತ್ತು ಪ್ರತಿ ಸದಸ್ಯರಿಗೆ ಒಂದು ಮತ ಚಲಾಯಿಸುವ ಹಕ್ಕಿದೆ. ಭದ್ರತಾ ಮಂಡಳಿಯ ನಿರ್ಣಯಗಳು ಬದ್ಧವಾಗಿರುತ್ತವೆ ಮತ್ತು ಪ್ರತಿ ಸದಸ್ಯ ರಾಷ್ಟ್ರಗಳು ಅವುಗಳನ್ನು ಅನುಸರಿಸಬೇಕು. ವಿಶ್ವ ಶಾಂತಿಗೆ ಧಕ್ಕೆ ಉಂಟಾದಾಗ, ಸದಸ್ಯ ರಾಷ್ಟ್ರಗಳು ಮತ್ತು ಆಕ್ರಮಣಕಾರಿ ಕೃತ್ಯದಲ್ಲಿ ತೊಡಗಿರುವ ಪಕ್ಷಗಳೊಂದಿಗೆ ಚರ್ಚೆಯ ನಂತರ ಆಕ್ರಮಣವನ್ನು ಹೇಗೆ ತಡೆಯಲಾಗುತ್ತದೆ ಎಂಬುದನ್ನು ನಿರ್ಧರಿಸಲು UNSC ಉಪಕ್ರಮವನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ, UNSC ನಿರ್ಬಂಧಗಳನ್ನು ವಿಧಿಸುತ್ತದೆ ಮತ್ತು ಶಾಂತಿಯನ್ನು ಕಾಪಾಡಲು ಅಗತ್ಯವಿರುವ ಬಲದ ಬಳಕೆಗೆ ಅನುಮತಿ ಕೂಡ ನೀಡುತ್ತದೆ. 

UNSC ನಲ್ಲಿ ವೀಟೋ ಪವರ್ ಎಂದರೇನು?
ಐದು ರಾಷ್ಟ್ರಗಳು - ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಚೀನಾ, ಫ್ರಾನ್ಸ್ ಮತ್ತು ಸೋವಿಯತ್ ರಿಪಬ್ಲಿಕ್ ಅಂದರೆ USSR (1990 ರಲ್ಲಿ ಯುಎಸ್ಎಸ್ಆರ್) - ವಿಶ್ವಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ ಮತ್ತು ಇದೆ ಕಾರಣಕ್ಕಾಗಿ ಈ ರಾಷ್ಟ್ರಗಳಿಗೆ ಯುನೈಟೆಡ್ ನೇಶನ್ಸ್ ನಲ್ಲಿ ಕೆಲ ವಿಶೇಷಾಧಿಕಾರಗಳು ದೊರೆತಿವೆ. ಈ ಐದು ದೇಶಗಳು UNSC ಯಲ್ಲಿ ಶಾಶ್ವತ ಸದಸ್ಯ ರಾಷ್ಟ್ರಗಳಾಗಿವೆ ಮತ್ತು ಅವುಗಳು 'ವೀಟೋ ಹಕ್ಕು' ಅಥವಾ ವೀಟೋ ಅಧಿಕಾರ ಎಂದು ಕರೆಯಲ್ಪಡುವ ವಿಶೇಷ ಮತದಾನದ ಅಧಿಕಾರವನ್ನು ಹೊಂದಿವೆ. ಅವರಲ್ಲಿ ಯಾರಾದರೂ UNSCಯಲ್ಲಿ ನಕಾರಾತ್ಮಕ ಮತವನ್ನು ಚಲಾಯಿಸಿದರೆ, ಚಲನೆ ಅಥವಾ ನಿರ್ಧಾರವನ್ನು ಅನುಮೋದಿಸಲಾಗುವುದಿಲ್ಲ. ಸರಳವಾಗಿ ಹೇಳುವುದಾದರೆ, US, ಯುನೈಟೆಡ್ ಕಿಂಗ್‌ಡಮ್, ಚೀನಾ, ಫ್ರಾನ್ಸ್ ಮತ್ತು ರಷ್ಯಾದಲ್ಲಿ ಯಾರಾದರೂ ಯಾವುದೇ UNSC ನಿರ್ಣಯಕ್ಕೆ ವಿರೋಧವಾಗಿ ಮತ ಚಲಾಯಿಸಿದರೆ, ಆ ನಿರ್ಣಯವು ಅಂಗೀಕಾರವಾಗುವುದಿಲ್ಲ. ಎಲ್ಲಾ ಐದು ಖಾಯಂ ಸದಸ್ಯರು ವಿವಿಧ ಸಂದರ್ಭಗಳಲ್ಲಿ ವೀಟೋ ಹಕ್ಕನ್ನು ಚಲಾಯಿಸಿವೆ. 

ವೀಟೋ ಅಧಿಕಾರ ಹೊಂದಿರುವ ದೇಶವು ಮತ ​​ಚಲಾಯಿಸದಿದ್ದರೆ ಏನು?
ಖಾಯಂ ಸದಸ್ಯ ಅಂದರೆ ವೀಟೋ ಅಧಿಕಾರ ಹೊಂದಿರುವ ದೇಶವು ಪ್ರಸ್ತಾವಿತ ನಿರ್ಣಯವನ್ನು ಸಂಪೂರ್ಣವಾಗಿ ಒಪ್ಪದಿದ್ದರೆ, ಆದರೆ ವೀಟೋ ಚಲಾಯಿಸಲು ಬಯಸದಿದ್ದರೆ, ಅದು ದೂರ ಉಳಿಯಲು ಆಯ್ಕೆ ಮಾಡಬಹುದು. ಹೀಗಾಗಿ ಪ್ರಸ್ತಾವನೆ ಪರವಾಗಿ ಒಂಬತ್ತು ಮತಗಳನ್ನು ಪಡೆದರೆ ಅದನ್ನು ಅಂಗೀಕರಿಸಲಾಗುತ್ತದೆ.

ಶಾಶ್ವತ ಸದಸ್ಯ ಮತ್ತು ಶಾಶ್ವತವಲ್ಲದ ಸದಸ್ಯರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅದುವೇ ವೀಟೋ ಅಧಿಕಾರ. ವಿಶ್ವಸಂಸ್ಥೆಯ ಚಾರ್ಟರ್ನ ಆರ್ಟಿಕಲ್ 27(3) ರ ಪ್ರಕಾರ, ಭದ್ರತಾ ಮಂಡಳಿಯು "ಶಾಶ್ವತ ಸದಸ್ಯರ ಒಮ್ಮತದ ಮತಗಳೊಂದಿಗೆ" ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ವೀಟೋ ಅಧಿಕಾರದ ವಿಷಯವು ಹೆಚ್ಚು ವಿವಾದಾತ್ಮಕವಾಗಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಯುಎನ್ ಸಭೆಗಳಲ್ಲಿ ಚರ್ಚೆಯ ವಿಷಯವಾಗಿದೆ. ಪರಿಷತ್ತಿನ ಕಾರ್ಯಚಟುವಟಿಕೆಗಳ ಬಹುತೇಕ ಎಲ್ಲಾ ಚರ್ಚೆಗಳ ಸಂದರ್ಭದಲ್ಲಿ ಇದು ಆಗಾಗ್ಗೆ ತಲೆ ಎತ್ತುವ ವಿಷಯಗಳಲ್ಲಿ ಒಂದಾಗಿದೆ. ಈ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಹಲವು ಬಾರಿ ಸುಧಾರಣೆಗೆ ಪ್ರತಿಪಾದಿಸುತ್ತಿದೆ.

ಭಾರತದ ಪರವಾಗಿ ರಷ್ಯಾದ ವೀಟೋ
ಆರಂಭಿಕ ವರ್ಷಗಳಲ್ಲಿ, ಯುಎಸ್ಎಸ್ಆರ್ ಆಗಾಗ್ಗೆ ವೀಟೋ ಅಧಿಕಾರವನ್ನು ಚಲಾಯಿಸಿದೆ. ವರದಿಗಳ ಪ್ರಕಾರ, ಆಗಿನ ಸೋವಿಯತ್ ರಾಯಭಾರಿ ಆಂಡ್ರೇ ಗ್ರೊಮಿಕೊ ಅವರು ಮಿಸ್ಟರ್ ನೈಟ್ ಮತ್ತು ವ್ಯಾಚೆಸ್ಲಾವ್ ಮೊಲೊಟೊವ್ ಅವರನ್ನು ಮಿಸ್ಟರ್ ವೆಟೊ ಎಂದೇ ಕರೆಯಲಾಗುತ್ತಿತ್ತು. ವರ್ಷಗಳಲ್ಲಿ, USSR/ರಷ್ಯಾ ಒಟ್ಟು 146 ವಿಟೋಗಳಲ್ಲಿ ಅಥವಾ ಎಲ್ಲಾ ವೀಟೋಗಳಲ್ಲಿ ಅರ್ಧದಷ್ಟನ್ನು ಚಲಾಯಿಸಿದೆ.

1946 ರಿಂದ, ಯುಎಸ್ಎಸ್ಆರ್ ಲೆಬನಾನ್ ಮತ್ತು ಸಿರಿಯಾದಿಂದ ವಿದೇಶಿ ಪಡೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕರಡು ನಿರ್ಣಯದ ಮೇಲೆ ವೀಟೋ ಅಧಿಕಾರವನ್ನು ಬಳಸಿದಾಗ, ಈ ಅಧಿಕಾರವನ್ನು 294 ನೇ ಬಾರಿ ಬಳಸಲಾಯಿತು.

ಕಳೆದ ಕೆಲ ವರ್ಷಗಳಲ್ಲಿ, USSR/ರಷ್ಯಾ ಕೂಡ ಭಾರತದ ಪರವಾಗಿ ವೀಟೋ ಅಧಿಕಾರವನ್ನು ಬಳಸಿದೆ. ಒಟ್ಟಾರೆಯಾಗಿ, ಯುಎನ್‌ಎಸ್‌ಸಿಯ ಖಾಯಂ ಸದಸ್ಯ ರಷ್ಯಾ, ಭಾರತವನ್ನು ಬೆಂಬಲಿಸಲು  ಒಟ್ಟು ನಾಲ್ಕು ಬಾರಿ ವೀಟೋ ಅಧಿಕಾರವನ್ನು ಬಳಸಿದೆ.
ರಷ್ಯಾ 1957ರಲ್ಲಿ ಭಾರತದ ಪರವಾಗಿ ವೀಟೋ ಅಧಿಕಾರ ಚಲಾಯಿಸಿತ್ತು

USSR 1957 ರಲ್ಲಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಪರವಾಗಿ  ಮೊದಲ ಬಾರಿಗೆ ವೀಟೋ ಅಧಿಕಾರವನ್ನು ಬಳಸಿದೆ. ಸೋವಿಯತ್ ಒಕ್ಕೂಟದ ಅಂದಿನ ನಾಯಕಿ ನಿಕಿತಾ ಕ್ರುಶ್ಚೇವ್ ಅವರು 1955 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಮಾಸ್ಕೋ ಕೇವಲ 'ಗಡಿ ದಾಟಿದೆ' ಮತ್ತು ಕಾಶ್ಮೀರದಲ್ಲಿ ಯಾವುದೇ ತೊಂದರೆಯಾದರೆ, ದೆಹಲಿ ಯುಎಸ್ಎಸ್ಆರ್ಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದರು ಮತ್ತು ನಂತರದ ದಿನಗಳಲ್ಲಿ ಅವರು ತಮ್ಮ ಮಾತುಗಳಿಗೆ ಬದ್ಧರಾಗಿ ನಿಲ್ಲುತ್ತಾರೆ ಮತ್ತು ಪಾಕಿಸ್ತಾನವು ಸಶಸ್ತ್ರೀಕರಣದ ಬಗ್ಗೆ ತಾತ್ಕಾಲಿಕ UN ಪಡೆಯ ಬಳಕೆಯನ್ನು ಪ್ರಸ್ತಾಪಿಸಿದಾಗ ಮತ್ತು ದ್ವಿಪಕ್ಷೀಯ ವಿಷಯವು ಅಂತರರಾಷ್ಟ್ರೀಯ ಸಮಸ್ಯೆಯಾಗಲು ಮುಂದಾದಾಗ, USSR ಭಾರತದ ಪರವಾಗಿ ವೀಟೋ ಅಧಿಕಾರವನ್ನು ಬಳಸುತ್ತದೆ ಮತ್ತು ಪ್ರಸ್ತಾಪವನ್ನು ತಿರಸ್ಕರಿಸಲಾಗುತ್ತದೆ..

1961 ರಲ್ಲಿ ರಷ್ಯಾ ಭಾರತದ ಪರವಾಗಿ ಮತ್ತೂಮೆ ವಿಟೋ ಅಧಿಕಾರವನ್ನು ಬಳಸಿದ ಕಾರಣ ಗೋವಾ ಸ್ವತಂತ್ರವಾಗುತ್ತದೆ
1961 ರಲ್ಲಿ ಪೋರ್ಚುಗಲ್ ಗೋವಾ ಕುರಿತು ಯುಎನ್‌ಎಸ್‌ಸಿಗೆ ಪತ್ರವನ್ನು ಕಳುಹಿಸಿತ್ತು. ಆ ಸಮಯದಲ್ಲಿ, ಗೋವಾ ಇನ್ನೂ ಪೋರ್ಚುಗಲ್ ಅಡಿಯಲ್ಲಿತ್ತು ಮತ್ತು ಭಾರತವು ಈ ಪ್ರದೇಶವನ್ನು ಮುಕ್ತಗೊಳಿಸಲು ಮತ್ತು ಅದನ್ನು ತನ್ನ ರಾಷ್ಟ್ರದ ಭಾಗವಾಗಿಸಲು ಪ್ರಯತ್ನಿಸುತ್ತಿತ್ತು. ಫ್ರಾನ್ಸ್ ಗೆ ವಿಪರೀತ ಎಂಬಂತೆ, ಪೋರ್ಚುಗಲ್ ಭಾರತದಲ್ಲಿ ತನ್ನ ಪ್ರದೇಶಗಳನ್ನು ಬಿಡಲು ನಿರಾಕರಿಸಿತ್ತು ಮತ್ತು ಗೋವಾದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿತ್ತು.

ವರದಿಗಳ ಪ್ರಕಾರ, ನಿಕಿತಾ ಕ್ರುಶ್ಚೇವ್ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಟೆಲಿಗ್ರಾಮ್ ಕಳುಹಿಸಿ, "ತನ್ನ ಭೂಪ್ರದೇಶದಲ್ಲಿ ವಸಾಹತುಶಾಹಿ ಹುದ್ದೆಗಳನ್ನು ತೊಡೆದುಹಾಕಲು ಭಾರತ ಕೈಗೊಂಡ ಕ್ರಮ ಸಂಪೂರ್ಣವಾಗಿ ನ್ಯಾಯಸಮ್ಮತವಾಗಿದೆ ಮತ್ತು ಸಮರ್ಥನೀಯವಾಗಿದೆ" ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಪೋರ್ಚುಗಲ್ ವಿಶ್ವಸಂಸ್ಥೆಯ ಚಾರ್ಟರ್ ಅನ್ನು ಜಾರಿಗೆ ತರಲು ಪ್ದ್ರಯತ್ನಿಸಿತ್ತು ಮತ್ತು ಭಾರತ ಗೋವಾದಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ನಿರ್ಣಯವನ್ನು ಪ್ರಸ್ತಾಪಿಸಿತ್ತು.

ಆದರೆ, ಆ ಸಂದರ್ಭದಲ್ಲಿ ಪೋರ್ಚುಗಲ್ ನ ಈ ಪ್ರಸ್ತಾಪವನ್ನು ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್ ಬೆಂಬಲಿಸಿದ್ದವು ಎಂದು ಕೇಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ಇನ್ನೊಂದೆಡೆ ರಷ್ಯಾ ಮಾತ್ರ ಭಾರತದ ರಕ್ಷಣೆಗೆ ಬಂದು ತನ್ನ ಬಳಿ ಇರುವ ವಿಟೋ ಅಧಿಕಾರ ಬಳಸಿ ಪ್ರಸ್ತಾವನೆಯನ್ನು ಗಾಳಿಗೆ ತೂರಿತು. ಇದರಿಂದ ಭಾರತದ ಉದ್ದೇಶಕ್ಕೆ ಮತ್ತಷ್ಟು ಬಲ ಬಂತು ಮತ್ತು ಗೋವಾ ಅಂತಿಮವಾಗಿ ಡಿಸೆಂಬರ್ 19, 1961 ರಂದು ಪೋರ್ಚುಗೀಸ್ ಆಳ್ವಿಕೆಯಿಂದ ಮುಕ್ತವಾಯಿತು. ಇದು 'ರಷ್ಯಾ'ದ 99 ನೇ ವಿಟೋ ಆಗಿತ್ತು.

1962 ರಲ್ಲಿ ರಷ್ಯಾ ಭಾರತದ ಪರವಾಗಿ ವೀಟೋ ಮಾಡಿತು
USSR 1962 ರಲ್ಲಿ ತನ್ನ 100 ನೇ ವೀಟೋವನ್ನು ಬಳಸಿತ್ತು ಮತ್ತು ಈ ಬಾರಿ ಮತ್ತೊಮ್ಮೆ ಭಾರತದ ಪರವಾಗಿ. ಯುಎನ್‌ಎಸ್‌ಸಿಯಲ್ಲಿನ ಐರಿಶ್ ನಿರ್ಣಯವು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಪಾಕಿಸ್ತಾನವು ಪರಸ್ಪರ ನೇರವಾಗಿ ತೊಡಗಿಸಿಕೊಳ್ಳಲು ಒತ್ತಾಯಿಸಿತ್ತು. ಏಳು UNSC ಸದಸ್ಯರು ಅದನ್ನು ಬೆಂಬಲಿಸಿದ್ದವು ಮತ್ತು ಅವರಲ್ಲಿ ನಾಲ್ಕು ರಾಷ್ಟ್ರಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿದ್ದವು - US, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ. ಭಾರತೀಯ ನಿಯೋಗವು ಪ್ರಸ್ತಾವನೆಯನ್ನು ಸ್ವೀಕರಿಸಲು ನಿರಾಕರಿಸಿತು ಮತ್ತು ನಂತರ, ರಷ್ಯಾದ ಪ್ರತಿನಿಧಿ ಪ್ಲಾಟನ್ ಡಿಮಿಟ್ರಿವಿಚ್ ಮೊರೊಜೊವ್ ಅವರು ವೀಟೋ ಅಧಿಕಾರವನ್ನು ಬಳಸಿಕೊಂಡು ಆ ಪ್ರಸ್ತಾಪವನ್ನು ಅನೂರ್ಜಿತಗೊಳಿಸುತ್ತಾರೆ.

1971ರಲ್ಲಿ ರಷ್ಯಾ ಭಾರತದ ಪರವಾಗಿ ವೀಟೋ ಮಾಡಿತು
1965 ರಲ್ಲಿ, ಭಾರತ-ಪಾಕಿಸ್ತಾನ ಯುದ್ಧ ಪ್ರಾರಂಭವಾದ ನಂತರ, ಆಗಿನ ಪಾಕಿಸ್ತಾನದ ವಿದೇಶಾಂಗ ಸಚಿವ ಜುಲ್ಫಿಕರ್ ಅಲಿ ಭುಟ್ಟೊ ಅವರು ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಸಮಸ್ಯೆಯನ್ನು ಪ್ರತಾಪಿಸಿದ್ದರು ಮತ್ತು ಭಾರತೀಯ ನಿಯೋಗವು ಪ್ರತಿಭಟನೆಯಲ್ಲಿ ವಾಕ್‌ಔಟ್ ನಡೆಸಿತ್ತು. ವರದಿಗಳ ಪ್ರಕಾರ, ಮಾಜಿ ವಿದೇಶಾಂಗ ಸಚಿವ ಕುಂವರ್  ನಟವರ್ ಸಿಂಗ್ ಕಾಶ್ಮೀರ ಸಮಸ್ಯೆಯ ಮೇಲಿನ ವಾಕ್‌ಔಟ್ ವಿಶ್ವಸಂಸ್ಥೆಗೆ 'ಟರ್ನಿಂಗ್ ಪಾಯಿಂಟ್' ಎಂದು ಬಣ್ಣಿಸಿದ್ದರು.

ಇದನ್ನೂ ಓದಿ-Ukraine President : ಉಕ್ರೇನ್ ಬಿಟ್ಟು ಓಡಿ ಹೋದರಾ ಅಧ್ಯಕ್ಷ ಝೆಲೆನ್ಸ್ಕಿ? ವಿಡಿಯೋ ಮೂಲಕ ಹೊರಬಿತ್ತು ಸತ್ಯ 

1971 ರಲ್ಲಿ ಕಾಶ್ಮೀರ ಸಮಸ್ಯೆಯ ಬಗ್ಗೆ ನಿರ್ಣಯಗಳನ್ನು ಪ್ರಸ್ತಾಪಿಸಿದಾಗ, ಆಗಲೂ ಕೂಡ ಕಾಶ್ಮೀರ ಸಮಸ್ಯೆ UNSCಯಲ್ಲಿ  ನಿಷ್ಕ್ರೀಯವಾಗಿತ್ತು, ಆದರೆ ಡಿಸೆಂಬರ್ 1971 ರಲ್ಲಿ, ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಲು ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ತೊಡಗಿದಾಗ, ಯುಎಸ್‌ಎಸ್‌ಆರ್ ತನ್ನ ಬೆಂಬಲ ವ್ಯಕ್ತಪಡಿಸಿತ್ತು ಮತ್ತು ಅದನ್ನು ಖಚಿತಪಡಿಸಲು ಮೂರು ಬಾರಿ ತನ್ನ ವಿಟೋ ಅಧಿಕಾರವನ್ನು ಚಲಾಯಿಸಿತ್ತು. ಇದೆ ಕಾರಣ ಇಂದಿಗೂ ಕೂಡ ಕಾಶ್ಮೀರ ವಿಷಯ ಒಂದು ಜಾಗತಿಕ ವಿಷಯವಾಗಿರದೇ ಒಂದು ದ್ವಿಪಕ್ಷೀಯ ವಿಷಯವಾಗಿ ಮುಂದುವರೆದಿದೆ. 

ಇದನ್ನೂ ಓದಿ-Ukraine-Russia War: ಭಾರತಕ್ಕೆ ಧನ್ಯವಾದ ಹೇಳಿದ ರಷ್ಯಾ, ಕಾರಣ ಇಲ್ಲಿದೆ

ಯುಎನ್‌ಎಸ್‌ಸಿಯ ಇತರ ಖಾಯಂ ಸದಸ್ಯರಾದ ಯುಎಸ್, ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು ಫ್ರಾನ್ಸ್ ರಾಷ್ಟ್ರಗಳು ಕೂಡ ಹಲವು ಬಾರಿ ತನ್ನ ವಿಟೋ ಅಧಿಕಾರಗಳನ್ನು ಬಳಸಿವೆ. 1970 ರಲ್ಲಿ ಅಮೆರಿಕಾ ತನ್ನ ಮೊದಲ ವೀಟೋವನ್ನು ಚಲಾಯಿಸಿತು ಮತ್ತು ಇದುವರೆಗೆ 82 ಬಾರಿ ವೀಟೋ ಅದು ತನ್ನ ಅಧಿಕಾರವನ್ನು ಬಳಸಿದೆ.

ಇದನ್ನೂ ಓದಿ-Worlds Most Powerful Militaries : ಜಗತ್ತಿನ ಅತೀ ಬಲಿಷ್ಠ ಮಿಲಿಟರಿ ಯಾವುದು? ಭಾರತ ಯಾವ ಸ್ಥಾನದಲ್ಲಿದೆ? ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News