WhatsApp ಮೇಲೆ Fake News ತಡೆಗೆ ಬಂತು ಹೊಸ ವೈಶಿಷ್ಟ್ಯ

ಫೇಕ್ ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ, ಮುಂದಿನ ಕೆಲವು ವಾರಗಳಲ್ಲಿ ಈ ವೈಶಿಷ್ಟ್ಯವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

Last Updated : Aug 5, 2020, 08:47 PM IST
WhatsApp ಮೇಲೆ Fake News ತಡೆಗೆ ಬಂತು ಹೊಸ ವೈಶಿಷ್ಟ್ಯ title=

ನವದೆಹಲಿ: ನಕಲಿ ಸುದ್ದಿಗಳಿಂದಾಗಿ ಸಾಮಾಜಿಕ ಜಾಲತಾಣ ವಾಟ್ಸಾಪ್ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಆದರೆ, ಇದೀಗ ನಕಲಿ ಸುದ್ದಿಗಳ ಪ್ರಭಾವವನ್ನು ಕಡಿಮೆ ಮಾಡಲು, ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ವಾಟ್ಸಾಪ್ನ ಈ ವೈಶಿಷ್ಟ್ಯವನ್ನು ಬಳಸಿ, ನೀವು ವಾಟ್ಸ್ ಆಪ್ ನಲ್ಲಿ ಫಾರ್ವರ್ಡ್ ಗೊಂಡ ಯಾವುದೇ ಸಂದೇಶವನ್ನು ನೇರವಾಗಿ ಗೂಗಲ್ ನಲ್ಲಿ ಸರ್ಚ್ ಮಾಡಬಹುದು ಮತ್ತು ಆ ಸುದ್ದಿಯ ವಾಸ್ತವತೆಯನ್ನು ನೀವು ಗೂಗಲ್ ಮೂಲಕ ಕಂಡುಹಿಡಿಯಬಹುದು.

ವಾಟ್ಸಾಪ್ ಇತ್ತೀಚೆಗಷ್ಟೇ ತನ್ನ ಹೊಸ ವೈಶಿಷ್ಟ್ಯ ಸರ್ಚ್ ದಿ ವೆಬ್ ಬಗ್ಗೆ ಮಾಹಿತಿ ನೀಡಿತ್ತು. ವಾಟ್ಸ್ ಆಪ್ ನಿರಂತರವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ಸುದ್ದಿಗಳನ್ನು ತಡೆಯುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದೆ. ಇದರದೇ ಒಂದು ಭಾಗವಾಗಿ ಇಂದಿನಿಂದ, ವಾಟ್ಸಾಪ್ ತನ್ನ ಬಳಕೆದಾರರಿಗೆ ಫಾರ್ವರ್ಡ್ ಸಂದೇಶವನ್ನು ಪರಿಶೀಲಿಸಲು ಗೂಗಲ್‌ನಲ್ಲಿ ಹುಡುಕುವ ಆಯ್ಕೆಯನ್ನು ನೀಡಿದೆ. ಇದರಿಂದ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು.

ವಾಟ್ಸ್ ಆಪ್ ನ ಈ ನೂತನ ವೈಶಿಷ್ಟ್ಯದ ವಿಶೇಷತೆ ಎಂದರೆ, ಇದಕ್ಕಾಗಿ ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ಬಂದ್ ಮಾಡುವ ಅವಶ್ಯಕತೆ ಇಲ್ಲ. ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಬಳಕೆದಾರರಿಗೆ ಫೇಕ್ ನ್ಯೂಸ ತಡೆಗಟ್ಟಲು ವಿಕಲ್ಪ ಎಂದು ಸಾಬೀತಾಗಲಿದೆ. ಬಳಕೆದಾರರು ತಮಗೆ ಫಾರ್ವರ್ಡ್ ಮಾಡಲಾಗಿರುವ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅದನ್ನು ಡಿಲೀಟ್ ಮಾಡಬಹುದಾಗಿದೆ. ಈ ರೀತಿ ಮಾಡುವುದರಿಂದ ಫೇಕ್ ನ್ಯೂಸ್ ಇತರರಿಗೆ ಹರಡುವುದು ತಪ್ಪಲಿದೆ.

ಆದರೆ, ಈ ವೈಶಿಷ್ಟ್ಯ ಬಳಕೆ ಮಾಡಲು ಗೂಗಲ್ ಪ್ಲೇ ಸ್ಟೋರ್ ನಿಂದ ನೀವು ನಿಮ್ಮ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ರೀತಿ ನೂತನ ವೈಶಿಷ್ಟ್ಯವನ್ನು ಬಳಸಿ
ಸುದ್ದಿಗೆ ಸಂಬಂಧಿಸಿದ ಯಾವುದೇ ಫಾರ್ವರ್ಡ್ ಸಂದೇಶ ನಿಮ್ಮ ಮೊಬೈಲ್ ಗೆ ಬಂದಾಗ, ಅದರೊಂದಿಗೆ ಹುಡುಕಾಟ ಐಕಾನ್ ಸಹ ಇರಲಿದೆ.
ನೀವು ಆ ಐಕಾನ್ ಮೇಲೆ ಕ್ಲಿಕ್ ಮಾಡಿದರೆ, ನಿಮಗೆ Google ನಲ್ಲಿ ಹುಡುಕಾಟ ಆಯ್ಕೆ ಸಿಗಲಿದೆ.
ಈ ಆಯ್ಕೆಯ ಮೇಲೆ ನೀವು ಓಕೆ ಎಂದು ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ಫೋನ್‌ನ ಬ್ರೌಸರ್ ಬಳಸಿ ನೀವು Google ನಲ್ಲಿ ಆ WhatsApp ಸಂದೇಶವನ್ನು ಹುಡುಕಾಟ ನಡೆಸಲಿರುವಿರಿ. ಅದಕ್ಕೆ ಸಂಬಂಧಿಸಿದ ಸುದ್ದಿ ಲೇಖನಗಳು ನಿಮ್ಮ ಮುಂದೆ ಪ್ರಕಟವಾಗಲಿದೆ.

ಆದರೆ, ಪ್ರಸ್ತುತ ಈ ವೈಶಿಷ್ಟ್ಯವನ್ನು ಕೇವಲ ಬ್ರೆಜಿಲ್, ಇಟಲಿ, ಐರ್ಲೆಂಡ್, ಸ್ಪೇನ್, ಇಂಗ್ಲೆಂಡ್ ಹಾಗೂ ಅಮೆರಿಕಾದಲ್ಲಿ ಮಾತ್ರ ಪರಿಚಯಿಸಲಾಗಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಇದನ್ನು ಭಾರತಕ್ಕೆ ಪರಿಚಯಿಸಲಾಗುವುದು ಎನ್ನಲಾಗುತ್ತಿದೆ.

Trending News