ಚೀನಾದ ಮುಸ್ಲಿಮರ ಬಗ್ಗೆ ಪಾಕಿಸ್ತಾನ ಏಕೆ ಚಿಂತಿಸುತ್ತಿಲ್ಲ? ಇಮ್ರಾನ್ ಖಾನ್‍ಗೆ ಅಮೆರಿಕ

ಚೀನಾದಲ್ಲಿ ಮುಸ್ಲಿಮರೊಂದಿಗಿನ ದೌರ್ಜನ್ಯದ ಬಗ್ಗೆ ಪಾಕಿಸ್ತಾನ ಮೌನ ವಹಿಸಿದ್ದಕ್ಕಾಗಿ ಅಮೆರಿಕ ಇಮ್ರಾನ್ ಖಾನ್ ಅವರನ್ನು ಪ್ರಶ್ನಿಸಿದೆ.

Last Updated : Sep 28, 2019, 12:53 PM IST
ಚೀನಾದ ಮುಸ್ಲಿಮರ ಬಗ್ಗೆ ಪಾಕಿಸ್ತಾನ ಏಕೆ ಚಿಂತಿಸುತ್ತಿಲ್ಲ? ಇಮ್ರಾನ್ ಖಾನ್‍ಗೆ ಅಮೆರಿಕ title=
File Image

ನವದೆಹಲಿ: ಕಾಶ್ಮೀರಿ ಮುಸ್ಲಿಮರ ಮಾನವ ಹಕ್ಕುಗಳ ಬಗ್ಗೆ ಮಾತ್ರ ಏಕೆ ಕಾಳಜಿ ವಹಿಸುತ್ತಿದೆ ಮತ್ತು ಚೀನಾದಲ್ಲಿ ವಾಸಿಸುತ್ತಿರುವ ಈ ಸಮುದಾಯದವರ "ಭಯಾನಕ ಪರಿಸ್ಥಿತಿಗಳನ್ನು" ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಅಮೆರಿಕ ಪಾಕಿಸ್ತಾನವನ್ನು ಕೇಳಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74 ನೇ ಅಧಿವೇಶನದಲ್ಲಿ ವಿಶೇಷ ಸಮಾವೇಶದಲ್ಲಿ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಕಾರ್ಯಕಾರಿ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಚೀನಾ ವಿರುದ್ಧ ಮಾತನಾಡುತ್ತಿಲ್ಲ ಎಂದು ಟೀಕಿಸಿದರು. ಚೀನಾ ತನ್ನ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಒಂದು ಮಿಲಿಯನ್ ಉಯಿಗರ್ ಮತ್ತು ತುರ್ಕಿಕ್ ಮಾತನಾಡುವ ಮುಸ್ಲಿಮರನ್ನು ಬಂಧಿಸಿದೆ ಎಂಬುದನ್ನು ಅವರು ಪ್ರಸ್ತಾಪಿಸಿದರು.

ಚೀನಾ ಪಾಕಿಸ್ತಾನದ ಮಿತ್ರ ರಾಷ್ಟ್ರ. ಪಾಕಿಸ್ತಾನದ ಭಯೋತ್ಪಾದಕರಾದ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರ ವಿರುದ್ಧ ನಿರ್ಬಂಧ ಹೇರುವ ಜಾಗತಿಕ ಪ್ರಯತ್ನಗಳ ಹಿನ್ನೆಲೆಯಲ್ಲಿ ಬೀಜಿಂಗ್ ಇಸ್ಲಾಮಾಬಾದ್ ಅನ್ನು ಸಮರ್ಥಿಸಿಕೊಂಡಿದೆ.

ಯುಎನ್‌ನಲ್ಲಿ ಕಾಶ್ಮೀರ ಸಮಸ್ಯೆ ಪ್ರಸ್ತಾಪಿಸಿದ ಚೀನಾ:
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ಕಾಶ್ಮೀರ ವಿಷಯವು ಹಿಂದಿನ ವಿವಾದವಾಗಿದೆ ಮತ್ತು ಯುಎನ್ ಚಾರ್ಟರ್, ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಪ್ರಕಾರ ಅದನ್ನು ನ್ಯಾಯಯುತವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಬೇಕು ಎಂದು ಅವರು ಹೇಳಿದರು. "ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ವಿಧಿ ರದ್ಧತಿ ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು, ಅದು ಯಥಾಸ್ಥಿತಿಯನ್ನು ಬದಲಾಯಿಸುತ್ತದೆ" ಎಂದು ಅವರು ಹೇಳಿದರು. "ಭಾರತ ಮತ್ತು ಪಾಕಿಸ್ತಾನದ ನೆರೆಯವರಾಗಿ, ಎರಡೂ ಕಡೆಯ ನಡುವಿನ ವಿವಾದವು ಇತ್ಯರ್ಥವಾಗುವುದನ್ನು ಮತ್ತು ಸಂಬಂಧದಲ್ಲಿನ ಸ್ಥಿರತೆಯನ್ನು ಪುನಃಸ್ಥಾಪಿಸಲು ಚೀನಾ ಆಶಿಸುತ್ತಿದೆ" ಎಂದು ಯಿ ಹೇಳಿದರು.

ಮತ್ತೆ ಕಾಶ್ಮೀರ ರಾಗಾ ಹಾಡಿದ ಇಮ್ರಾನ್:
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕಾಶ್ಮೀರ ವಿಷಯದ ಬಗ್ಗೆ ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ಕಳೆದ ಕೆಲವು ವಾರಗಳಿಂದ ಮಾಡುತ್ತಿದ್ದ ಎಲ್ಲ ಕೆಲಸಗಳನ್ನು ತಮ್ಮ ಭಾಷಣದಲ್ಲಿ ಪುನರಾವರ್ತಿಸಿದರು. ಇಮ್ರಾನ್ ಖಾನ್ ಉನ್ನತ ವಿಶ್ವ ವೇದಿಕೆಯಲ್ಲೂ ಸಹ ತಮ್ಮ ಕೋಮು ದೃಷ್ಟಿಕೋನವನ್ನು ಬಿಡಲಿಲ್ಲ. 

ತನ್ನ ದೇಶ ಮತ್ತು ಅದರ ಸಮಸ್ಯೆಯನ್ನು ಕಡೆಗಣಿಸಿದ ಇಮ್ರಾನ್ ಖಾನ್ ತನ್ನ ಗಮನವನ್ನು ಸಂಪೂರ್ಣವಾಗಿ ಕಾಶ್ಮೀರದತ್ತ ಕೇಂದ್ರೀಕರಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ವಿಧಿಸಲಾಗಿರುವ ಕರ್ಫ್ಯೂ ತೆಗೆದುಹಾಕಿದರೆ ರಾಜ್ಯದಲ್ಲಿ ರಕ್ತದೋಕುಳಿ ಆಗಲಿದೆ. ಆಗ ಏನಾಗುತ್ತದೆ ಈ ಬಗ್ಗೆ ಯಾರಾದರೂ ಯೋಚಿಸಿದ್ದೀರಾ? ಎಂದು ಇಮ್ರಾನ್ ಎಚ್ಚರಿಸಿದ್ದಾರೆ. 
 

Trending News