ಮ್ಯಾಡ್ರಿಡ್: ಕರೋನಾದಿಂದ ಸ್ಪೇನ್ನಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಬಳಿಕ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಆಸ್ಪತ್ರೆಯ ಆಡಳಿತವು ಕರೋನಾ ಶಿಷ್ಟಾಚಾರದಡಿಯಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿತು. ಆದರೆ ಕೆಲದಿನಗಳ ಬಳಿಕ ಮೃತ ವೃದ್ಧ ಮಹಿಳೆ ಕಣ್ಣೆದುರು ಬಂದರೆ ಹೇಗಾಗುತ್ತದೆ....
ಆಘಾತಕ್ಕೊಳಗಾದ ಕುಟುಂಬ -
ವಾಸ್ತವವಾಗಿ, ಕರೋನಾವೈರಸ್ (Coronavirus) ಸೋಂಕಿಗೆ ಒಳಗಾಗಿದ್ದರಿಂದ ರೋಜೆಲಿಯಾ ಬ್ಲಾಂಕೊ (85) ಎಂಬ ವೃದ್ಧ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ವೃದ್ಧ ಮಹಿಳೆಯೊಂದಿಗೆ ಇನ್ನೋರ್ವ ಮಹಿಳೆ ಕೂಡ ಇದ್ದರು. ಆದರೆ ಕೆಲವು ದಿನಗಳ ಹಿಂದೆ ಅಂದರೆ ಜನವರಿ 13 ರಂದು ಅವರು ನಿಧನರಾದರು ಎಂದು ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತದಿಂದ ತಿಳಿಸಲಾಯಿತು. ಕರೋನಾ ಶಿಷ್ಟಾಚಾರದ ಅಡಿಯಲ್ಲಿ ಅವರ ಅಂತ್ಯಕ್ರಿಯೆ ಮಾಡಲಾಯಿತು, ಇದರಲ್ಲಿ ಕುಟುಂಬ ಸದಸ್ಯರಿಗೆ ಹಾಜರಾಗಲು ಅವಕಾಶವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರಿಗೂ ಯಾವುದೇ ಆತಂಕವಿರಲಿಲ್ಲ. ಆದರೆ ಅಂತ್ಯಕ್ರಿಯೆಯ 10 ದಿನಗಳ ನಂತರ, ರೊಸಾಲಿಯಾ ಬ್ಲಾಂಕೊ ತನ್ನ ಮನೆಗೆ ತಲುಪಿದರು.
ಇದನ್ನೂ ಓದಿ - ಭಾರತದಲ್ಲಿ 150 ಜನರಿಗೆ ಬ್ರಿಟನ್ ರೂಪಾಂತರಿ ಕೊರೊನಾವೈರಸ್ !
ಕೇರ್ ಹೋಂನಲ್ಲಿದ್ದ ಮಹಿಳೆ :
ರೊಸಾಲಿಯಾ ಬ್ಲಾಂಕೊ ಜೋವ್ ಸಿಟಿಯಲ್ಲಿ ಕೇರ್ ಹೋಂನಲ್ಲಿ ವಾಸಿಸುತ್ತಿದ್ದರು. ಅದಕ್ಕಾಗಿಯೇ ಅವರ ಕುಟುಂಬಕ್ಕೆ ಆಕೆ ಕರೋನಾ ಸೋಂಕಿಗೆ ತುತ್ತಾಗಿರುವ ಬಗ್ಗೆ ಮಾತ್ರ ತಿಳಿಸಲಾಯಿತು ಮತ್ತು ಇಡೀ ದೇಶದಲ್ಲಿ ಲಾಕ್ಡೌನ್ (Lockdown) ಇದ್ದ ಕಾರಣ ಕುಟುಂಬವನ್ನು ಭೇಟಿಯಾಗಲು ಸಹ ಅವರಿಗೆ ಅವಕಾಶವಿರಲಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ರೋಜೆಲಿಯಾ ಅವರ ಪತಿ ನನ್ನ ಪತ್ನಿ ಹಿಂದಿರುಗಿ ಬರುವುದನ್ನು ನೋಡಿದಾಗ ನನಗೆ ನನ್ನನ್ನು ತಡೆಯಲು ಸಾಧ್ಯವಾಗಲಿಲ್ಲ. ನನ್ನ ಕಣ್ತುಂಬಿ ಬಂದಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ - ಭಾರತಕ್ಕೆ ಥ್ಯಾಂಕ್ಸ್ ಹೇಳಿದ WHO ಮುಖ್ಯಸ್ಥ ಅಧಾನೊಮ್ ಘೆಬ್ರೆಯೆಸಸ್
ಗುರುತಿಸುವಲ್ಲಿ ವೈಫಲ್ಯ, ರೂಂ ಮೆಟ್ ಸಾವು :
ವಾಸ್ತವವಾಗಿ ತನ್ನ ರೂಂ ಮೆಟ್ ಸಾವನ್ನಪ್ಪಿರುವುದಾಗಿ ಬ್ಲಾಂಕೊ ಮಾಹಿತಿ ನೀಡಿದ್ದಾರೆ. ಆದರೆ ಇದನ್ನು ತಪ್ಪಾಗಿ ಅರ್ಥಮಾಡಿಕೊಂಡ ಅಧಿಕಾರಿಗಳು ರೊಸಾಲಿಯಾ ಬ್ಲಾಂಕೊ ಅವರೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಆದಾಗ್ಯೂ, ಸ್ಥಳೀಯ ಆಡಳಿತವು ಬ್ಲಾಂಕೊ ಹಿಂದಿರುಗಿದ ಬಗ್ಗೆ ಮಾಹಿತಿ ಪಡೆದಾಗ ಅವರು ಆಡಳಿತದ ವೈಫಲ್ಯದ ಬಗ್ಗೆ ವಿಷಾದಿಸಿದರು ಮತ್ತು ಗುರುತಿನ ತಪ್ಪಿನಿಂದಾಗಿ ಅದು ಸಂಭವಿಸಿದೆ ಎಂದು ಒಪ್ಪಿಕೊಂಡರು. ನಂತರ ಆಡಳಿತವು ತನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದು ಅಂತಹ ಘಟನೆಗಳನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.