Dangerous Recipe: ಇಂತಹ ಖಾದ್ಯ ಪದಾರ್ಥ ನೀವು ನಿಮ್ಮ ಜೀವನದಲ್ಲಿ ನೋಡಿರಲಿಕ್ಕಿಲ್ಲ

Scorpion-Snake Soup In China - ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಭಯಾನಕ  ಖಾದ್ಯವನ್ನು  ತಯಾರಿಸಲಾಗುತ್ತದೆ ಮತ್ತು ಮಾರಾಟ ಕೂಡ  ಮಾಡಲಾಗುತ್ತದೆ. ಈ ಸೂಪ್ ನಲ್ಲಿ ಎರಡು ಅತ್ಯಂತ ವಿಷಕಾರಿ ಜಂತುಗಳಾದ ಹಾವು ಮತ್ತು ಚೇಳುಗಳನ್ನು  ಬಳಸಲಾಗುತ್ತದೆ. ಹಂದಿ ಮಾಂಸವನ್ನು ಕೂಡ ಇದಕ್ಕೆ ಬೆರೆಸಲಾಗುತ್ತದೆ.  

Written by - Nitin Tabib | Last Updated : Jan 7, 2023, 10:32 PM IST
  • ಚೀನಾದಲ್ಲಿ ಸಿಗುತ್ತದೆ ಈ ಭಯ ಹುಟ್ಟಿಸುವ ಡಿಷ್
  • ಹಾವು ಮತ್ತು ಚೇಳುಗಳನ್ನು ಇದರಲ್ಲಿ ಬಳಸಲಾಗುತ್ತದೆ.
  • ಹಂದಿಯ ಮಾಂಸವನ್ನು ಕೂಡ ಇದಕ್ಕೆ ಬೇರೆಸಲಾಗುತ್ತದೆ
Dangerous Recipe: ಇಂತಹ ಖಾದ್ಯ ಪದಾರ್ಥ ನೀವು ನಿಮ್ಮ ಜೀವನದಲ್ಲಿ ನೋಡಿರಲಿಕ್ಕಿಲ್ಲ  title=
Bizarre Food

Scorpion Snake Soup:ನೀವು ಅನೇಕ ವಿಚಿತ್ರ ಮತ್ತು ವಿಲಕ್ಷಣ ಭಕ್ಷ್ಯಗಳ ಕುರಿತು ಕೇಳಿರಬಹುದು. ಆದರೆ ಇಂದು ನಾವು ನಿಮಗೆ ಒಂದು ಭೀಕರ ಡಿಷ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದನ್ನು ಓದಿದರೆ ನಿಮ್ಮ ಮೈಮೇಲಿನ ರೋಮಗಳು ಕೂಡ ನೆಟ್ಟಗಾಗಲಿವೆ. ಬೇಸಿಗೆಯ ಆಗಮನದೊಂದಿಗೆ, ಚೀನಾದಲ್ಲಿ ಈ ಖಾದ್ಯಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಈ ಖಾದ್ಯವನ್ನು ಮಾಡಲು ವಿಷಕಾರಿ ಹಾವು ಮತ್ತು ಚೇಳುಗಳನ್ನು ಬಳಸುತ್ತಾರೆ ಎಂಬುದನ್ನು ನಿಮಗೆ ತಿಳಿದರೆ ನೀವೂ ಕೂಡ ಬೆಚ್ಚಿಬೀಳಬಹುದು

ಹಾವು ಮತ್ತು ಚೇಳುಗಳನ್ನು ಬೆರೆಸಿ ತಯಾರಿಸಲಾಗುತ್ತದೆ ಈ ಸೂಪ್
ವೆಬ್‌ಸೈಟ್ ವೊಂದರಲ್ಲಿ ಪ್ರಕಟಗೊಂಡ ಮಾಹಿತಿಯ ಪ್ರಕಾರ, ಈ ಭಯಾನಕ ಖಾದ್ಯವನ್ನು ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ತಯಾರಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಈ ಭಕ್ಷ್ಯದಲ್ಲಿ ಎರಡು ಅತ್ಯಂತ ವಿಷಕಾರಿ ಜಂತುಗಳಾಗಿರುವ ಹಾವು ಮತ್ತು ಚೇಳುಗಳನ್ನು ಬಳಸಲಾಗುತ್ತದೆ. ಹಾವು ಮತ್ತು ಚೇಳುಗಳನ್ನು ಬೆರೆಸಿ ತಯಾರಿಸಿದ ಈ ಸೂಪ್ ದಕ್ಷಿಣ ಚೀನಾದಲ್ಲಿ ಕಂಡುಬರುತ್ತದೆ. ಹಂದಿ ಮಾಂಸವನ್ನು ಸಹ ಇದಕ್ಕೆ ಸೇರಿಸಲಾಗುತ್ತದೆ. ಇದಲ್ಲದೆ, ಇದಕ್ಕೆ ವಿಶೇಷ ಮಸಾಲೆಗಳನ್ನು ಸೇರಿಸಲಾಗುತ್ತದೆ.

ಇದನ್ನೂ ಓದಿ-

ಈ ವಿಶೇಷ ಸೂಪ್ ಕುಡಿಯುವುದರಿಂದ ದೇಹವು ನಿರ್ವಿಶೀಕರಣಗೊಳ್ಳುತ್ತದೆ ಎಂದು ಚೀನಾದ ಜನರು ನಂಬುತ್ತಾರೆ. ಈ ಸೂಪ್ ಅಲ್ಲಿನ ಪಾಕಪದ್ಧತಿ ಮತ್ತು ಸಂಸ್ಕೃತಿಯ ಭಾಗವಾಗಿದೆ ಎಂದು ತಿಳಿದರೆ ನಿಮಗೂ ಕೂಡ ಆಶ್ಚರ್ಯವಾದೀತು. ಆದರೆ ಇದು ಅಲ್ಲಿನ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ಕಂಡುಬರುವುದಿಲ್ಲ. ಈ ಖಾದ್ಯವು ಕೆಲವು ವಿಶೇಷ ರೆಸ್ಟಾರೆಂಟ್ ಗಳಲ್ಲಿ ಮಾತ್ರ ನೋಡಬಹುದು.  ಇದನ್ನು ಸಾಕಷ್ಟು ಅನುಭವ ಹೊಂದಿರುವ ಬಾಣಸಿಗರು ಮಾತ್ರ ತಯಾರಿಸುತ್ತಾರೆ. ಈ ಅಡುಗೆಯವರು ಚೇಳು ಹಾಗೂ ಹಾವನ್ನು ಬಳಸುವ ಮೊದಲು ಅದರೊಳಗಿನ ವಿಷವನ್ನು ಹೇಗೆ ತೆಗೆದುಹಾಕಬೇಕೆಂದು ತಿಳಿದಿರುತ್ತಾರೆ.

ಇದನ್ನೂ ಓದಿ-

ಈ ಸೂಪ್ ಹೇಗೆ ತಯಾರಿಸಲಾಗುತ್ತದೆ?
ಈ ಖಾದ್ಯವನ್ನು ತಯಾರಿಸುವ ಮೊದಲು ಹಾವು ಮತ್ತು ಚೇಳಿನ ವಿಷವನ್ನು ಹೊರತೆಗೆಯಲಾಗುತ್ತದೆ. ಇದಕ್ಕಾಗಿ, ಹಾವು ಮತ್ತು ಚೇಳುಗಳನ್ನು ಸುಮಾರು 3 ಗಂಟೆಗಳ ಕಾಲ ಬೇಯಿಸಲಾಗುತ್ತದೆ. ಇದರ ನಂತರ ಹಂದಿ ಮತ್ತು ಹಾವುಗಳನ್ನು ಶುಂಠಿ, ಬೆಳ್ಳುಳ್ಳಿ ಮತ್ತು ವಿಶೇಷ ಮಸಾಲೆಗಳೊಂದಿಗೆ ಮಡಕೆಯಲ್ಲಿ ಹಾಕಲಾಗುತ್ತದೆ. ಇದಕ್ಕೆ ಕೆಲವು ತರಕಾರಿಗಳನ್ನು ಕೂಡ ಸೇರಿಸಲಾಗುತ್ತದೆ. ಇದರ ನಂತರ, ಚೇಳಿನ ರಸವನ್ನು ಅದರಲ್ಲಿ ಬೆರೆಸಲಾಗುತ್ತದೆ. ಚೀನಾದ ಜನರಿಗೆ ಇದರ ರುಚಿ ತುಂಬಾ ಇಷ್ಟವಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News