Gold Price Today : ಇಂದು ಕೂಡ ಚಿನ್ನ - ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ!

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 52,100 ರೂ., ಮುಂಬೈನಲ್ಲಿ 49,640 ರೂ.

Written by - Channabasava A Kashinakunti | Last Updated : Jan 22, 2022, 08:52 AM IST
  • ಶನಿವಾರ 10 ಗ್ರಾಂ ಚಿನ್ನದ ಬೆಲೆ 50 ರೂಪಾಯಿ ಏರಿಕೆ
  • ಒಂದು ಕೆಜಿ ಬೆಳ್ಳಿ ನಿನ್ನೆಗಿಂತ 800 ರೂಪಾಯಿ ಏರಿಕೆ
  • ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಲೋಹವು ಕೆಜಿಗೆ 69,300 ರೂ.ಗೆ ಮಾರಾಟ
Gold Price Today : ಇಂದು ಕೂಡ ಚಿನ್ನ - ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ! title=

ನವದೆಹಲಿ : ಶನಿವಾರ 10 ಗ್ರಾಂ ಚಿನ್ನದ ಬೆಲೆ 50 ರೂಪಾಯಿ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನ 49,640 ರೂ., 22 ಕ್ಯಾರೆಟ್ 47,640 ರೂ.

ಒಂದು ಕೆಜಿ ಬೆಳ್ಳಿ(Silver price) ನಿನ್ನೆಗಿಂತ 800 ರೂಪಾಯಿ ಏರಿಕೆಯಾಗಿ 65,400 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ : Petrol Price Today : ಇಂದಿನ ಪೆಟ್ರೋಲ್ - ಡೀಸೆಲ್‌ ಹೊಸ ದರ ಬಿಡುಗಡೆ ಮಾಡಿದ ಸರ್ಕಾರಿ ತೈಲ ಕಂಪನಿಗಳು!  

ಗುಡ್‌ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 52,100 ರೂ., ಮುಂಬೈನಲ್ಲಿ 49,640 ರೂ.

ದೆಹಲಿ ಮತ್ತು ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ(Gold Price) ಕ್ರಮವಾಗಿ ರೂ 47,800 ಮತ್ತು ರೂ 47,640 ಆಗಿದೆ.

ಚೆನ್ನೈನಲ್ಲಿ ಶನಿವಾರದಂದು 10 ಗ್ರಾಂ 24 ಕ್ಯಾರೆಟ್ ಚಿನ್ನ 50,120 ರೂ.ಗೆ ಮಾರಾಟವಾಗುತ್ತಿದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನ 45,940 ರೂ.ಗೆ ಮಾರಾಟವಾಗುತ್ತಿದೆ.

ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಚಾರ್ಜ್‌ಗಳಿಂದಾಗಿ ದೇಶದಾದ್ಯಂತ ಚಿನ್ನದ ಬೆಲೆ ಬದಲಾಗುತ್ತದೆ.

ಇದನ್ನೂ ಓದಿ : Gold price today : ಚಿನ್ನಾಭರಣ ಪ್ರಿಯರ ಗಮನಕ್ಕೆ : ಇಂದು ಮತ್ತೆ ಚಿನ್ನ - ಬೆಳ್ಳಿ ಬೆಲೆ ಏರಿಕೆ

ಚೆನ್ನೈನಲ್ಲಿ ಇಂದು 1 ಕೆಜಿ ಬೆಳ್ಳಿಯ ಬೆಲೆ(Silver price) 69,300 ರೂ., ದೆಹಲಿ ಮತ್ತು ಮುಂಬೈನಲ್ಲಿ ಬೆಳ್ಳಿ ಬೆಲೆ 65,400 ರೂ.ಗೆ ಮಾರಾಟವಾಗುತ್ತಿದೆ.

ಕೊಲ್ಕತ್ತಾದಲ್ಲಿ ಬೆಳ್ಳಿ ಕೆಜಿಗೆ 65,400 ರೂ.ಗೆ ಮಾರಾಟವಾಗುತ್ತಿದ್ದರೆ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಬೆಳ್ಳಿ ಕೆಜಿಗೆ 69,300 ರೂ.ಗೆ ಮಾರಾಟವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News