ಕೊನೆಗೂ ಅಗ್ಗವಾಯಿತು ಚಿನ್ನ ! ಬೆಳ್ಳಿ ಮಾತ್ರ ಇನ್ನೂ ದುಬಾರಿ

Gold Price 10th May:ಇದೀಗ ಚಿನ್ನದ ಬೆಲೆ ಕುಸಿದಿದ್ದು, ಚಿನ್ನಾಭರಣ ಖರೀದಿಗೆ ಮುಂದಾಗಿದ್ದವರು  ನಿರಾಳವಾಗುವಂತೆ ಮಾಡಿದೆ. ತಜ್ಞರು ಅಂದಾಜಿಸುವಂತೆ ಚಿನ್ನದ ದರ ಶೀಘ್ರದಲ್ಲೇ ಪ್ರತಿ 10 ಗ್ರಾಂಗೆ 65,000 ರೂ. ಮತ್ತು ಬೆಳ್ಳಿ ಕೆ.ಜಿಗೆ 80,000 ರೂ.ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ.  

Written by - Ranjitha R K | Last Updated : May 10, 2023, 02:36 PM IST
  • ಬುಧವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
  • ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿಯೂ ಬಂಗಾರದ ಬೆಲೆಯಲ್ಲಿ ಇಳಿಕೆ
  • ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?
ಕೊನೆಗೂ ಅಗ್ಗವಾಯಿತು ಚಿನ್ನ ! ಬೆಳ್ಳಿ ಮಾತ್ರ ಇನ್ನೂ  ದುಬಾರಿ  title=

Gold Price 10th May : ಕಳೆದ ಕೆಲವು ದಿನಗಳಿಂದ ಬುಲಿಯನ್ ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಈ ನಡುವೆ, ಬುಧವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಬುಲಿಯನ್ ಮಾರುಕಟ್ಟೆಯ ಹೊರತಾಗಿ, ಇಂದು ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿಯೂ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ.  ನಿನ್ನೆ  ಚಿನ್ನ, ಬೆಳ್ಳಿ ಎರಡರ ದರದಲ್ಲಿಯೂ  ಏರಿಕೆ ಕಂಡು ಬಂದಿತ್ತು. ಇದೀಗ ಚಿನ್ನದ ಬೆಲೆ ಕುಸಿದಿದ್ದು, ಚಿನ್ನಾಭರಣ ಖರೀದಿಗೆ ಮುಂದಾಗಿದ್ದವರು  ನಿರಾಳವಾಗುವಂತೆ ಮಾಡಿದೆ. ತಜ್ಞರು ಅಂದಾಜಿಸುವಂತೆ ಚಿನ್ನದ ದರ ಶೀಘ್ರದಲ್ಲೇ ಪ್ರತಿ 10 ಗ್ರಾಂಗೆ 65,000 ರೂ. ಮತ್ತು ಬೆಳ್ಳಿ ಕೆ.ಜಿಗೆ 80,000 ರೂ.ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ? : 
ಬುಧವಾರ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಕುಸಿತ ಕಂಡುಬಂದಿದೆ. ಆದರೆ ನಾವು ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್ ನಲ್ಲಿ ಮಾತ್ರ  ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದರೆ ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಬುಧವಾರ ಎಂಸಿಎಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯಲ್ಲಿ ಮಿಶ್ರ ಪ್ರವೃತ್ತಿ ಕಂಡುಬರುತ್ತಿದೆ. ಮಧ್ಯಾಹ್ನ ಬೆಳ್ಳಿ ದರದಲ್ಲಿ 30 ರೂಪಾಯಿ ಏರಿಕೆ ಕಂಡು ಪ್ರತಿ ಕೆಜಿಗೆ 77,486 ರೂಪಾಯಿಯಲ್ಲಿ ವಹಿವಾಟು  ನಡೆಸುತ್ತಿದೆ. ಇದಲ್ಲದೇ ಚಿನ್ನ 170 ರೂಪಾಯಿಯಷ್ಟು ಇಳಿಕೆ ಕಂಡು 61249 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.  

ಇದನ್ನೂ ಓದಿ : ಜನ ಸಾಮಾನ್ಯರಿಗೆ ಮತ್ತೊಂದು ಹೊರೆ ! ಶೀಘ್ರದಲ್ಲೇ ದುಬಾರಿಯಾಗಲಿದೆ ಇನ್ಶುರೆನ್ಸ್ ಪ್ರಿಮಿಯಂ!

ಬುಲಿಯನ್ ಮಾರುಕಟ್ಟೆ ದರಗಳಲ್ಲಿ ಹೆಚ್ಚಳ : 
ಬುಲಿಯನ್ ಮಾರುಕಟ್ಟೆ ದರಗಳನ್ನು ಪ್ರತಿದಿನ ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ​​( https://ibjarates.com ) ಬಿಡುಗಡೆ ಮಾಡುತ್ತದೆ . ಬುಧವಾರ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾದ ದರದ ಪ್ರಕಾರ ಚಿನ್ನ 10 ಗ್ರಾಂಗೆ 103 ರೂಪಾಯಿ ಇಳಿಕೆಯಾಗಿ 61430 ರೂಪಾಯಿಗಳಿಗೆ ಮತ್ತು ಬೆಳ್ಳಿ ಕೆಜಿಗೆ 48 ರೂಪಾಯಿ ಇಳಿಕೆಯಾಗಿ 76351 ರೂಪಾಯಿಗಳಿಗೆ ತಲುಪಿದೆ. 

ಬುಧವಾರ 23 ಕ್ಯಾರೆಟ್ ಚಿನ್ನ 61185 ರೂ., 22 ಕ್ಯಾರೆಟ್ ಚಿನ್ನ 56269 ರೂ., 20 ಕ್ಯಾರೆಟ್ ಚಿನ್ನ 10 ಗ್ರಾಂಗೆ 46072 ರೂ. ಆಗಿದೆ. ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಫೆಬ್ರವರಿಯಲ್ಲಿ ಚಿನ್ನದ ದರ 10 ಗ್ರಾಂಗೆ 55,000 ರೂ. ಆಗಿತ್ತು. ದೀಪಾವಳಿ ಸಂದರ್ಭದಲ್ಲಿ 10 ಗ್ರಾಂ  ಚಿನ್ನದ ದರ 65,000 ರೂ.ಗೆ ಮತ್ತು ಬೆಳ್ಳಿಯ ದರ 80,000 ರೂ.ಗೆ ಏರಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ : Go First ಎಲ್ಲಾ ವಿಮಾನಗಳ ಹಾರಾಟ ಮೇ 19 ರವರೆಗೆ ರದ್ದು

ಈ ರೀತಿಯಾಗಿ ಚಿನ್ನದ ಶುದ್ಧತೆ ಪರಿಶೀಲಿಸಬಹುದು:

ಗ್ರಾಹಕರು ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಬಯಸುವುದಾದರೆ ಇದಕ್ಕಾಗಿ ಸರ್ಕಾರದಿಂದ ಅಪ್ಲಿಕೇಶನ್ ಅನ್ನು ಮಾಡಲಾಗಿದೆ. 'ಬಿಐಎಸ್ ಕೇರ್ ಆಪ್' ಮೂಲಕ ಗ್ರಾಹಕರು ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಬಹುದು. ಈ ಆ್ಯಪ್ ಮೂಲಕ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವುದು ಮಾತ್ರವಲ್ಲದೆ ಅದಕ್ಕೆ ಸಂಬಂಧಿಸಿದ ಯಾವುದೇ ದೂರು ಕೂಡಾ ನೀಡಬಹುದು.

ಮಿಸ್ಡ್ ಕಾಲ್ ನೀಡುವ ಮೂಲಕ ಚಿನ್ನದ ದರ ತಿಳಿದುಕೊಳ್ಳಬಹುದು : 

ಮನೆಯಲ್ಲಿ ಕುಳಿತು ಸುಲಭವಾಗಿ ಇಂದಿನ ಚಿನ್ಕಂನದ ದರವನ್ನು ಕಂಡು ಹಿಡಿಯಬಹುದು. ಇದಕ್ಕಾಗಿ ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ ಸಾಕು. ನೀವು ಮಿಸ್ಡ್ ಕಾಲ್  ನೀಡುತ್ತಿದ್ದಂತೆಯೇ ಇಂದಿನ ಚಿನ್ನದ ದರ ಎಷ್ಟು ಎನ್ನುವ ಸಂದೇಶ ನಿಮ್ಮ ಫೋನ್‌ಗೆ ಸಂದೇಶ ಬರುತ್ತದೆ. ಈ ಮೆಸೇಜ್ ನಲ್ಲಿ ನೀವು ಇತ್ತೀಚಿನ ದರಗಳನ್ನು ಪರಿಶೀಲಿಸಬಹುದು.

ಇದನ್ನೂ ಓದಿ :  Oil Price : ಈ ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ, ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News