7th Pay Commission : ದೀಪಾವಳಿಗೂ ಮುನ್ನವೇ ಸಿಗಲಿದೆ ಗಿಫ್ಟ್ , ಸರ್ಕಾರಿ ನೌಕರರ ಸೆಪ್ಟೆಂಬರ್ ವೇತನದಲ್ಲಿ ಆಗಲಿದೆ ಇಷ್ಟೊಂದು ಹೆಚ್ಚಳ

7th Pay Commission : ಸೆಪ್ಟೆಂಬರ್ ತಿಂಗಳ ವೇತನದಲ್ಲಿ, ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಹೆಚ್ಚಿದ ತುಟ್ಟಿ  ಭತ್ಯೆ  ಮತ್ತು ಡಿಆರ್ ಜೊತೆಗೆ, ಕೊನೆಯ ಮೂರು ಬಾಕಿ ಸಹ ಬರಲಿದೆ. ಅಂದರೆ, ಸೆಪ್ಟೆಂಬರ್ ತಿಂಗಳಲ್ಲಿ, ಕೇಂದ್ರ ನೌಕರರ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತ ಬಂದು ಸೇರಲಿದೆ. 

Written by - Ranjitha R K | Last Updated : Jul 5, 2021, 03:51 PM IST
  • ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನವೇ ಸಿಗಲಿದೆ ಗಿಫ್ಟ್
  • ಸೆಪ್ಟೆಂಬರ್‌ನಲ್ಲಿ ಕೈ ಸೇರಲಿದೆ ದೊಡ್ಡ ಮೊತ್ತ
  • ಬಾಕಿ ಡಿಎ ಸೇರಿದರೆ ಎಷ್ಟಾಗಲಿದೆ ವೇತನ
7th Pay Commission : ದೀಪಾವಳಿಗೂ ಮುನ್ನವೇ ಸಿಗಲಿದೆ ಗಿಫ್ಟ್ , ಸರ್ಕಾರಿ ನೌಕರರ ಸೆಪ್ಟೆಂಬರ್ ವೇತನದಲ್ಲಿ ಆಗಲಿದೆ ಇಷ್ಟೊಂದು  ಹೆಚ್ಚಳ title=
ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನವೇ ಸಿಗಲಿದೆ ಗಿಫ್ಟ್ (photo zee news)

7th Pay Commission : 52 ಲಕ್ಷ ಕೇಂದ್ರ ನೌಕರರು ಮತ್ತು 61 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಇನ್ನೇನು ಒಳ್ಳೆಯ ದಿನಗಳು ಹತ್ತಿರವಾಗುತ್ತಿವೆ. ಕಳೆದ ಒಂದೂವರೆ ವರ್ಷಗಳಿಂದ ತಡೆ ಹಿಡಿಯಲಾಗಿದ್ದ ತುಟ್ಟಿಭತ್ಯೆ (DA Hike) ಸೆಪ್ಟೆಂಬರ್ ಅಂತ್ಯದಲ್ಲಿ ಬರುವ ನೀರೀಕ್ಷೆ  ಇದೆ. ಅಂದರೆ ದೀಪಾವಳಿಯ ಮುಂಚೆಯೇ ಕೇಂದ್ರ ನೌಕರರಿಗೆ ದೀಪಾವಳಿ ಉಡುಗೊರೆ ಸಿಗಲಿದೆ. 

ಸೆಪ್ಟೆಂಬರ್‌ನಲ್ಲಿ ಕೈ ಸೇರಲಿದೆ  ದೊಡ್ಡ ಮೊತ್ತ :  
ಸೆಪ್ಟೆಂಬರ್ ತಿಂಗಳ ವೇತನದಲ್ಲಿ (Salary), ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಹೆಚ್ಚಿದ ತುಟ್ಟಿ  ಭತ್ಯೆ  (DA) ಮತ್ತು ಡಿಆರ್ (DR) ಜೊತೆಗೆ, ಕೊನೆಯ ಮೂರು ಬಾಕಿ ಸಹ ಬರಲಿದೆ. ಅಂದರೆ, ಸೆಪ್ಟೆಂಬರ್ ತಿಂಗಳಲ್ಲಿ, ಕೇಂದ್ರ ನೌಕರರ ಬ್ಯಾಂಕ್ (Central government employee) ಖಾತೆಗೆ ದೊಡ್ಡ ಮೊತ್ತ ಬಂದು ಸೇರಲಿದೆ. 

ಇದನ್ನೂ ಓದಿ : Inflation: ಶ್ರೀಸಾಮಾನ್ಯರ ಮೇಲೆ ಹಣದುಬ್ಬರದ ಹೊಡೆತ, ಗಗನಮುಖಿಯಾದ ಅಗತ್ಯ ವಸ್ತುಗಳ ಬೆಲೆ

11% ದಷ್ಟು ಹೆಚ್ಚಾಗಲಿದೆ ಡಿಎ : 
ಪ್ರಸ್ತುತ, ಕೇಂದ್ರ ನೌಕರರು 17% ದರದಲ್ಲಿ ತುಟ್ಟಿ ಭತ್ಯೆ (DA) ಪಡೆಯುತ್ತಿದ್ದಾರೆ. ಆದರೆ ಡಿಎ ಹೆಚ್ಚಳದ ನಂತರ ಇದು 11ರಿಂದ 28 ಪ್ರತಿಶತಕ್ಕೆ ಹೆಚ್ಚಾಗಲಿದೆ. ಅಂದರೆ, ಜುಲೈ 1, 2021 ರ ಮೂಲ ವೇತನದಿಂದ ಡಿಎಯಲ್ಲಿ ಶೇಕಡಾ 11 ರಷ್ಟು ಹೆಚ್ಚಳವಾಗಲಿದೆ. ಅದೇ ಸೂತ್ರವು ಡಿಆರ್‌ಗೂ ಅನ್ವಯಿಸುತ್ತದೆ.

ಸೆಪ್ಟೆಂಬರ್‌ನಲ್ಲಿ ಕೈ ಸೇರಲಿದೆ ಇಷ್ಟು ಡಿಎ :
ಕೇಂದ್ರ ನೌಕರರಿಗೆ ಸೆಪ್ಟೆಂಬರ್ ವೇತನದಲ್ಲಿ  ಹೆಚ್ಚಳವಾಗಲಿದೆ. ಜನವರಿ 2021 ಮತ್ತು ಜುಲೈ 2021 ರ ತುಟ್ಟಿ ಭತ್ಯೆಗಳನ್ನು ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಾಗುವುದು ಎಂದು ಜೆಸಿಎಂನ (JCM) ರಾಷ್ಟ್ರೀಯ ಮಂಡಳಿಯ ಶಿವ ಗೋಪಾಲ್ ಮಿಶ್ರಾ ತಿಳಿಸಿದ್ದಾರೆ. ಹಾಗಾಗಿ, ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಇನ್ನು ಎರಡು ತಿಂಗಳು ಕಾಯಬೇಕಾಗುತ್ತದೆ.

ಇದನ್ನೂ ಓದಿ : Indian Railways: ಒಬ್ಬರ ರೈಲು ಟಿಕೆಟ್ ನಲ್ಲಿ ಇನ್ನೊಬ್ಬರ ಪ್ರಯಾಣಕ್ಕೆ ಅವಕಾಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News