7th Pay Commission: ಸರ್ಕಾರಿ ನೌಕರರಿಗೆ ನಾಳೆ ಸಿಗಲಿದೆಯಾ ಈ ಸಿಹಿ ಸುದ್ದಿ!

7th Pay Commission News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ತುಟ್ಟಿಭತ್ಯೆಗಾಗಿ 12-ತಿಂಗಳ ಸೂಚ್ಯಂಕ ಸರಾಸರಿ 351.33 ರಷ್ಟಾಗಿದೆ. ಈ ಸರಾಸರಿ ಸೂಚ್ಯಂಕದಲ್ಲಿ ಒಟ್ಟು ತುಟ್ಟಿಭತ್ಯೆ ಶೇ.34.04 ರಾಷ್ತಾಗಲಿದೆ. ಈ ಹಣಕಾಸು ವರ್ಷದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ.  

Written by - Nitin Tabib | Last Updated : Mar 29, 2022, 02:33 PM IST

    ಕ್ಯಾಬಿನೆಟ್ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ ಕುರಿತು ನಿರ್ಣಯ ಹೊರಬೀಳುವ ಸಾಧ್ಯತೆ

  • ಜೊತೆಗೆ 18 ತಿಂಗಳ ಬಾಕಿ ಸಿಗುವ ಸಾಧ್ಯತೆ.
  • ಜನವರಿ 2022ರಿಂದ ಶೇ.3 ರಷ್ಟು ತುಟ್ಟಿಭತ್ಯೆಯ ಲಾಭ ಸಿಗಲಿದೆ

7th Pay Commission: ಸರ್ಕಾರಿ ನೌಕರರಿಗೆ ನಾಳೆ ಸಿಗಲಿದೆಯಾ ಈ ಸಿಹಿ ಸುದ್ದಿ! title=
7th Pay Commission

ನವದೆಹಲಿ: 7th Pay Commission News - ಕೇಂದ್ರ ಸರ್ಕಾರಿ ನೌಕರರು (Central government employees) ಮತ್ತು ಪಿಂಚಣಿದಾರರಿಗೆ (Pensioners)  ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ನಾಳೆ ಅಂದರೆ ಬುಧವಾರ, ಮಾರ್ಚ್ 30 ರಂದು ಕ್ಯಾಬಿನೆಟ್ ಸಭೆಯಲ್ಲಿ, ಸರ್ಕಾರವು (Central Government) DA ಹೆಚ್ಚಳವನ್ನು (Dearness allowance Hike) ಘೋಷಿಸುವ ನಿರೀಕ್ಷೆ ಇದೆ. ಇದಲ್ಲದೆ, 18 ತಿಂಗಳ ಬಾಕಿ ಇರುವ Dearness Allowance ಬಗ್ಗೆಯೂ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ-Video: Leopard ಬೇಟೆಯಾಡಲು ಮರ ಹತ್ತಿದ ಪ್ರಾಣಿ, ನಂತರ ನಡೆದಿದ್ದೆ ಬೇರೆ

ಚಾಲ್ತಿ ಆರ್ಥಿಕ ವರ್ಷದ ಕೊನೆಯ ಕ್ಯಾಬಿನೆಟ್ ಸಭೆ
ಈ ಹಣಕಾಸು ವರ್ಷದ ಕೊನೆಯ ಕ್ಯಾಬಿನೆಟ್ ಸಭೆಯು (Cabinet meeting) ಬುಧವಾರ 30 ಮಾರ್ಚ್ 2022 ರಂದು ನಡೆಯಲಿದೆ. ಈ ಸಚಿವ ಸಂಪುಟ ಸಭೆಯಲ್ಲಿ ಶೇ.3ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಇದು ಒಂದು ವೇಳೆ ಅನುಮೋದನೆಯಾದರೆ ಮಾರ್ಚ್ ತಿಂಗಳ ವೇತನದ ಜೊತೆಗೆ  ಹೊಸ DA ನೌಕರರ ಖಾತೆಗೆ ಜಮೆಯಾಗಲಿದೆ. ತುಟ್ಟಿ ಭತ್ಯೆ (Central government employee DA) ಹೆಚ್ಚಳದ ಜೊತೆಗೆ ಜನವರಿ-ಫೆಬ್ರವರಿ ತಿಂಗಳ ಬಾಕಿಯನ್ನೂ ನೀಡಲಾಗುವುದು. ತುಟ್ಟಿ ಭತ್ಯೆಯಲ್ಲಿ ಒಟ್ಟು ಶೇ.3ರಷ್ಟು ಹೆಚ್ಚಳವಾಗಿದೆ. ಸದ್ಯ ಶೇ.31ರಷ್ಟು ಡಿಎ ಸಿಗುತ್ತಿದೆ.

ಇದನ್ನೂ ಓದಿ-IMD Alert! ಮುಂದಿನ 5 ದಿನಗಳು ಆಕಾಶದಿಂದ ಬೆಂಕಿಯ ಸುರಿಮಳೆ, ಈ ರಾಜ್ಯಗಳಿಗೆ ಅಲರ್ಟ್ ಘೋಷಣೆ

ಈಗಾಗಲೇ ಶೇ.3ರಷ್ಟು DA ಹೆಚ್ಚಳ ನಿಗದಿಯಾಗಿದೆ
ಸುದೀರ್ಘ ಕಾಯುವಿಕೆಯ ನಂತರ, ತುಟ್ಟಿಭತ್ಯೆಯಲ್ಲಿ ಶೇ. 3 ಹೆಚ್ಚಳವನ್ನು ನಿಗದಿಪಡಿಸಲಾಗಿದೆ. ಇದೀಗ ನೌಕರರು ಮತ್ತು ಪಿಂಚಣಿದಾರರಿಗೆ ಶೇ.34 ದರದಲ್ಲಿ ತುಟ್ಟಿ ಭತ್ಯೆ ಸಿಗಲಿದೆ. ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (AICPI Index) ಡಿಸೆಂಬರ್ 2021 ರ ಸೂಚ್ಯಂಕದಲ್ಲಿ ಒಂದು ಅಂಶದ ಇಳಿಕೆ ಕಂಡುಬಂದಿದೆ. ತುಟ್ಟಿ ಭತ್ಯೆಗಾಗಿ ಸರಾಸರಿ 12 ತಿಂಗಳ ಸೂಚ್ಯಂಕವು 351.33 ಆಗಿದ್ದು, ಒಟ್ಟು ಶೇ.34.04% DA ಸಿಗಲಿದೆ. ಆದರೆ, ತುಟ್ಟಿಭತ್ಯೆಯನ್ನು ಯಾವಾಗಲೂ ಪೂರ್ಣ ಸಂಖ್ಯೆಯಲ್ಲಿ ಪರಿಗಣಿಸಲಾಗುವ ಕಾರಣ ಜನವರಿ 2022 ರಿಂದ, ಒಟ್ಟು ತುಟ್ಟಿ ಭತ್ಯೆಯನ್ನು 34% ಎಂದು ನಿಗದಿಪಡಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News