Black Panther Attack Leopard Video: ಸಾಮಾಜಿಕ ಜಾಲತಾಣಗಳಲ್ಲಿ ಕಾಡು ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಇವುಗಳಲ್ಲಿ ಕೆಲವು ವೀಡಿಯೋಗಳು ಭಯ ಹುಟ್ಟಿಸುವಂತಿರುತ್ತವೆ. ಅವುಗಳನ್ನು ನೋಡುತ್ತಲೇ ಮೈಮೇಲಿನ ರೋಮಗಳು ಒಂದು ಕ್ಷಣ ಎದ್ದು ನಿಲ್ಲುತ್ತವೆ. ಕಾಡು ಪ್ರಾಣಿಗಳ ಕಾದಾಟದ ಈ ವಿಡಿಯೋಗಳು ಕೆಲ ಸಾರಿ ನಂಬಲು ಕಷ್ಟ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಪ್ಪು ಪ್ಯಾಂಥರ್ ಚಿರತೆಯನ್ನು ಬೇಟೆಯಾಡಲು ಮರವನ್ನು (Black Panther Attack On Leopard) ಏರಿದೆ.
ಇದನ್ನೂ ಓದಿ-Child With Snake Video: ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು, ಮುಂದೇನಾಯ್ತು... ಈ ವಿಡಿಯೋ ನೋಡಿ...
ಚಿರತೆಯ ಮೇಲೆ ದಾಳಿ ಮಾಡಲು ಮರ ಹತ್ತಿದ ಬ್ಲ್ಯಾಕ್ ಪ್ಯಾಂಥರ್ (Black Panther Leopard Fight)
ಚಿರತೆಯ ಮುಂದೆ ಕಪ್ಪು ಪ್ಯಾಂಥರ್‌ನ ಈ ರೂಪವನ್ನು ನೋಡಿ ಜನರು ನಿಬ್ಬೇರಗಾಗಿದ್ದಾರೆ. ಆದರೆ, ಇದಾದ ಬಳಿಕ ಆಘಾತಕಾರಿ ಘಟನೆ ನಡೆದಿದೆ. ಚಿರತೆಯನ್ನು ಬೇಟೆಯಾಡಲು ಬ್ಲಾಕ್ ಪ್ಯಾಂಥರ್ ವೇಗವಾಗಿ ಮರವನ್ನು ಏರುತ್ತಿರುವುದನ್ನು ವಿಡಿಯೋದಲ್ಲಿ (Viral Video) ನೀವು ಕಾಣಬಹುದು. ಈ ಸಂದರ್ಭದಲ್ಲಿ ಕಾಡು ಸುತ್ತಲು ಹೋದ ಹಲವು ಜನರು ಅಲ್ಲಿ ನೆರೆದಿದ್ದಾರೆ. ಬ್ಲ್ಯಾಕ್ ಪ್ಯಾಂಥರ್ ಕೋಪದಿಂದ ಓಡೋಡಿ ಬಂದು ನೇರವಾಗಿ ಮರದ ಮೇಲೆ ಏರುತ್ತಿರುವುದನ್ನು ನೀವು ನೋಡಬಹುದು. ಬ್ಲ್ಯಾಕ್ ಪ್ಯಾಂಥರ್ ಘರ್ಜನೆಯಿಂದಲೇ ನೀವು ಅದರ ಕೋಪವನ್ನು ಊಹಿಸಬಹುದು. ವೀಡಿಯೊ ನೋಡಿ...
#DYK
It seems a fight for territory between two matured male leopards, black panther although a great hero in Movies seemed to be losing to another alpha male.#wildlifephotography #wildlife@rameshpandeyifs @ParveenKaswan @Saket_Badola @surenmehra @trikansh_sharma pic.twitter.com/YGSQiyckRI— Saurabh Gupta (@GuptaIfs) March 23, 2022
ಇದನ್ನೂ ಓದಿ-Viral Video : ಎಷ್ಟು ದೂರ ಸರಿದರೂ ಮತ್ತೆ ಮತ್ತೆ ಸಿಂಹಕ್ಕೆ ಮುತ್ತಿಕ್ಕುತ್ತಿರುವ ಆಮೆ
ಈ ಕಪ್ಪು ಪ್ಯಾಂಥರ್ ಚಿರತೆಯ ಎದುರಿಗೆ ಹೋಗಿ ನಿಲ್ಲುತ್ತದೆ. ಆದರೆ, ಚಿರತೆಯ ಒಂದೇ ಒಂದು ಘರ್ಜನೆಯಿಂದ ಬ್ಲ್ಯಾಕ್ ಪ್ಯಾಂಥರ್ ನ ತಲ್ಲಣಗೊಂಡು, ಬಾಲ ಒತ್ತಿಕೊಂಡು ಅಲ್ಲಿಂದ ಓದಿ ಹೋಗುವುದನ್ನು ನೀವು ವಿಡಿಯೋದಲ್ಲಿ (Animal Viral Video) ವೀಕ್ಷಿಸಬಹುದು. @GuptaIfs ಹೆಸರಿನ Twitter ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದುವರೆಗೆ 18 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ನೋಡಿದ್ದಾರೆ. ಹೆಚ್ಚಿನ ಜನರು ವೀಡಿಯೊವನ್ನು ನೋಡಿ ಕಪ್ಪು ಪ್ಯಾಂಥರ್ ಕುರಿತು ತಮಾಷೆಯ ಕಾಮೆಂಟ್ ಮಾಡುತಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.