Amazonನೊಂದಿಗೆ ದಿನಕ್ಕೆ ಕೇವಲ 4 ಗಂಟೆ ಕೆಲಸ ಮಾಡಿ ತಿಂಗಳಿಗೆ 60 ಸಾವಿರ ಸಂಪಾದಿಸಿ, ಹೇಗೆ ಅಂತಿರಾ?

Amazon Delivery Boy Job - ನಿರುದ್ಯೋಗಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ವಿಶೇಷವೆಂದರೆ ಕೆಲಸದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ನಿಮ್ಮ ಇಚ್ಛೆಯಂತೆ ಪೂರ್ಣ ಸಮಯ, ಪಾರ್ಟ್ ಟೈಮ್ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು.

Written by - Nitin Tabib | Last Updated : Jul 17, 2021, 08:32 PM IST
  • ನಿರುದ್ಯೋಗಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.
  • ವಿಶೇಷವೆಂದರೆ ಈ ಕೆಲಸದಲ್ಲಿ ಯಾವುದೇ ಹೆಚ್ಚಿನ ನಿರ್ಬಂಧನೆಗಳಿಲ್ಲ.
  • ನಿಮ್ಮ ಇಚ್ಛೆಯಂತೆ ಫುಲ್ ಟೈಮ್ ಅಥವಾ ಪಾರ್ಟ್ ಟೈಮ್ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು.
Amazonನೊಂದಿಗೆ ದಿನಕ್ಕೆ ಕೇವಲ 4 ಗಂಟೆ ಕೆಲಸ ಮಾಡಿ ತಿಂಗಳಿಗೆ 60 ಸಾವಿರ ಸಂಪಾದಿಸಿ, ಹೇಗೆ ಅಂತಿರಾ? title=
Amazon Delivery Boy Job (File Photo)

ನವದೆಹಲಿ: Amazon Delivery Boy Job - ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಕನಸು ಬಹುತೇಕ ಮಂದಿಗೆ ಇರುತ್ತದೆ. ಹೀಗಿರುವಾಗ Amazon ಕಂಪನಿ ತನ್ನೊಂದಿಗೆ ಸೇರಿ ಕೆಲಸ ಮಾಡುವ ಈ ಅವಕಾಶ ನಿಮಗೆ ಕಲ್ಪಿಸುತ್ತಿದೆ.  ಒಂದು ವೇಳೆ ನೀವೂ ಕೂಡ ನೌಕರಿಯ ಹುಡುಕಾಟದಲ್ಲಿದ್ದು ಮತ್ತು ವೇಳೆಯ ಬಂಧನವಿರಬಾರದು ಎಂದು ಬಯಸುತ್ತಿದ್ದರೆ, ಈ ಅವಕಾಶ ನಿಮ್ಮ ಪಾಲಿಗೆ ಸುವರ್ಣಾವಕಾಶ ಸಾಬೀತಾಗಲ್ಲಿದೆ. ಇಲ್ಲಿ ನೀವು ನಿಮ್ಮ ಅನಕೂಲಕ್ಕೆ ತಕ್ಕಂತೆ ಕೆಲಸ ಮಾಡಿ ತಿಂಗಳಿಗೆ ರೂ.55 ರಿಂದ ರೂ 60 ಸಾವಿರ ಸಂಪಾದಿಸಬಹುದು. ಹಾಗಾದರೆ ಬನ್ನಿ ಹೇಗೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ. 

ಡೆಲಿವರಿ ಹುಡುಗರ ನೌಕರಿ (Amazon Delivery Boy Job)
ಆನ್‌ಲೈನ್ ಚಿಲ್ಲರೆ ಕಂಪನಿಗಳ ಉತ್ಪನ್ನಗಳನ್ನು ಅಥವಾ ಪ್ಯಾಕೇಜ್ ಅನ್ನು ಗ್ರಾಹಕರಿಗೆ ತಲುಪಿಸುವವರನ್ನು ಡೆಲಿವರಿ ಬಾಯ್ (Delivery Boy) ಎಂದು ಕರೆಯಲಾಗುತ್ತದೆ. ಡೆಲಿವರಿ ಬಾಯ್ ಪ್ಯಾಕೇಜ್ ಅನ್ನು ಅಮೆಜಾನ್‌ನ (Amazon) ಗೋದಾಮಿನಿಂದ ಕೊಂಡೊಯ್ದು ಗ್ರಾಹಕರಿಗೆ ತಲುಪಿಸುತ್ತಾರೆ.  ದೇಶಾದ್ಯಂತ ಡೆಲಿವರಿ ಬಾಯ್ಸ್  ಪ್ರತಿದಿನ ಲಕ್ಷಾಂತರ ಪ್ಯಾಕೇಜ್‌ಗಳನ್ನು ತಲುಪಿಸುತ್ತಾರೆ. ಡೆಲಿವರಿ ಬಾಯ್  ದಿನದಲ್ಲಿ 100 ರಿಂದ 150 ಪ್ಯಾಕೇಜ್‌ಗಳನ್ನು ತಲುಪಿಸಬೇಕಾಗುತ್ತದೆ.

10-15 ಕಿ.ಮೀ ವ್ಯಾಪ್ತಿಯಲ್ಲಿ ವಿತರಣೆ  (Delivery in just 10-15 KM range)
ಅಮೆಜಾನ್ ದೆಹಲಿಯಲ್ಲಿ ಸುಮಾರು 18 ಕೇಂದ್ರಗಳನ್ನು ಹೊಂದಿದೆ. ಇದೇ ರೀತಿ ದೇಶದ ಪ್ರತಿ ಭಾಗದಲ್ಲೂ ಅಮೆಜಾನ್ ಕೇಂದ್ರಗಳಿವೆ. ಎಲ್ಲಾ ಪ್ಯಾಕೇಜುಗಳನ್ನು ಗ್ರಾಹಕರ ವಿಳಾಸಕ್ಕೆ ತಲುಪಿಸಲಾಗುತ್ತದೆ. ಪ್ಯಾಕೇಜ್ ಅನ್ನು ಅಮೆಜಾನ್ ಕೇಂದ್ರದಿಂದ ಸುಮಾರು 10-15 ಕಿ.ಮೀ ಪ್ರದೇಶದಲ್ಲಿ ತಲುಪಿಸಲಾಗುತ್ತದೆ.

ಶಿಫ್ಟ್ ಎಷ್ಟು ಗಂಟೆಗಳು? (Amazon Shift timings)
ಡೆಲಿವರಿ ಬಾಯ್ ಇಡೀ ದಿನ ಕೆಲಸ ಮಾಡಬೇಕಾಗಿಲ್ಲ. ಡೆಲಿವರಿ ಬೋಯ ಅವರಿರುವ ಪ್ರದೇಶದಲ್ಲಿ ಡೆಲಿವರಿ ಮಾಡಬೇಕಿರುವ ಪ್ಯಾಕೇಜ್‌ಗಳು ಮಾತ್ರ ಡೆಲಿವರಿ ಮಾಡಬೇಕು. ಆದಾಗ್ಯೂ ಅಮೆಜಾನ್ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಡೆಲಿವರಿ ಸೌಲಭ್ಯವನ್ನು ಒದಗಿಸುತ್ತದೆ. ಉದಾಹರಣೆಗೆ ದೆಹಲಿಯ ಡೆಲಿವರಿ ಹುಡುಗರು ದಿನಕ್ಕೆ ಸುಮಾರು 4 ಗಂಟೆಗಳಲ್ಲಿ 100-150 ಪ್ಯಾಕೇಜ್‌ಗಳನ್ನು ತಲುಪಿಸುವುದಾಗಿ ಹೇಳುತ್ತಾರೆ.

ಡೆಲಿವರಿ ಬಾಯ್ ಆಗಲು ಇರಬೇಕಾದ ಅರ್ಹತೆ: (How to become a delivery boy?)
ಡೆಲಿವರಿ ಬಾಯ್ ಆಗು ನೀವು ಪದವಿ ಹೊಂದಿರಬೇಕು. ಶಾಲೆ ಅಥವಾ ಕಾಲೇಜು ಪಾಸ್ ಆಗಿದ್ದರೆ ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯ. ವಿತರಣೆಗೆ ನಿಮ್ಮ ಸ್ವಂತ ಬೈಕು ಅಥವಾ ಸ್ಕೂಟರ್ ಇರಬೇಕು. ಬೈಕ್ ಅಥವಾ ಸ್ಕೂಟರ್ ವಿಮೆ, ಆರ್ಸಿ ಮಾನ್ಯವಾಗಿರಬೇಕು. ಅಲ್ಲದೆ ಅರ್ಜಿದಾರರಿಗೆ ಚಾಲನಾ ಪರವಾನಗಿ ಇರಬೇಕು.

ಅಮೆಜಾನ್‌ನಲ್ಲಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ? (How to apply for job in Amazon?)
ಡೆಲಿವರಿ ಬಾಯ್‌ನ ಕೆಲಸಕ್ಕಾಗಿ, ನೀವು ನೇರವಾಗಿ ಅಮೆಜಾನ್‌ನ (Amazon India) ಸೈಟ್ https://logistics.amazon.in/applynow ನಲ್ಲಿ ಅರ್ಜಿ ಸಲ್ಲಿಸಬಹುದು. ಇದಲ್ಲದೆ  ಅಮೆಜಾನ್‌ನ ಯಾವುದೇ ಕೇಂದ್ರಕ್ಕೆ ಭೇಟಿ ನೀಡಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಕೇಂದ್ರಗಳಲ್ಲಿ ಡೆಲಿವರಿ ಬಾಯ್ ಕೆಲಸ ಯಾವಾಗಲೂ ಖಾಲಿಯಾಗಿರುತ್ತದೆ. ಆದರೆ ಕೆಲವು ಬಾರಿ ಪ್ರಸ್ತುತ ಕೆಲಸ ಖಾಲಿ ಇಲ್ಲದಿದ್ದರೂ ಭವಿಷ್ಯದ ದೃಷ್ಟಿಯಿಂದ ನಿಮ್ಮ ಹೆಸರನ್ನು ನೋಂದಾಯಿಸಬಹುದು. 

ಅಮೆಜಾನ್ ಡೆಲಿವರಿ ಹುಡುಗನ ಸಂಬಳ ಎಷ್ಟು? ( Salary of Amazon delivery boy?)
ಅಮೆಜಾನ್ ಡೆಲಿವರಿ ಬಾಯ್ ಪ್ರತಿ ತಿಂಗಳು ನಿಯಮಿತ ಸಂಬಳ ಪಡೆಯುತ್ತಾರೆ. ಅಮೆಜಾನ್‌ನಲ್ಲಿ ಡೆಲಿವರಿ ಹುಡುಗರಿಗೆ ನಿಗದಿತ ಸಂಬಳ 12 ರಿಂದ 15 ಸಾವಿರ ರೂಪಾಯಿ. ಪೆಟ್ರೋಲ್ ಖರ್ಚು ನಿಮಗೆ ನೀಡಲಾಗುತ್ತದೆ. ಆದರೆ ಉತ್ಪನ್ನ ಅಥವಾ ಪ್ಯಾಕೇಜ್ ವಿತರಿಸಿದಾಗ ನೀವು 15 ರಿಂದ 20 ರೂಪಾಯಿಗಳನ್ನು ಪಡೆಯುತ್ತೀರಿ. ವಿತರಣಾ ಸೇವಾ ಕಂಪನಿಯ ಪ್ರಕಾರ ಯಾರಾದರೂ ಒಂದು ತಿಂಗಳು ಕೆಲಸ ಮಾಡಿ ಪ್ರತಿದಿನ 100-150 ಪ್ಯಾಕೇಜ್‌ಗಳನ್ನು ವಿತರಿಸಿದರೆ, ಅವರು ಸುಲಭವಾಗಿ ತಿಂಗಳಿಗೆ 60000ರೂ.ಗಳನ್ನು ಗಳಿಸಬಹುದು.

ಆನ್‌ಲೈನ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ (Online registration for Amazon Job)
ಅಮೆಜಾನ್‌ನಲ್ಲಿ ಡೆಲಿವರಿ ಬಾಯ್ ಕೆಲಸ ಪಡೆಯಲು ನೀವು ನಿಮ್ಮ ಇಮೇಲ್ ಐಡಿ ಮೂಲಕ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಸಂಪೂರ್ಣ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ, ಯಾವುದೇ ಮಾಹಿತಿಯನ್ನು ಬಿಡಬೇಡಿ. ಸೇವಾ ನಿಯಮಗಳನ್ನು ಎಚ್ಚರಿಕೆಯಿಂದ ಓದಿ. ಕಂಪನಿ ನಿಮ್ಮ ಹಿನ್ನೆಲೆ ಪರಿಶೀಲನೆಗಾಗಿ ಕೇಳುತ್ತದೆ, ಅದನ್ನು ನಿರಾಕರಿಸಬೇಡಿ.

ಕಂಪನಿಯು ನಿಮಗೆ ವಾಹನವನ್ನು ನೀಡುತ್ತದೆಯೇ? (Company provide delivery vehicle)
ನಿಮ್ಮ ಸ್ವಂತ ಸ್ಕೂಟರ್ ಮತ್ತು ಬೈಕು ಇದ್ದರೆ, ಆಯ್ದ ಉತ್ಪನ್ನಗಳ ವಿತರಣೆಗೆ ನೀವು ನಿಮ್ಮ ಸ್ವಂತ ವಾಹನವನ್ನು ಬಳಸಬೇಕಾಗುತ್ತದೆ. ನೀವು ದೊಡ್ಡ ಉತ್ಪನ್ನಗಳನ್ನು ತಲುಪಿಸಲು ಬಯಸಿದರೆ, ಕಂಪನಿಯು ಕೆಲವು ಷರತ್ತುಗಳ ಮೇಲೆ ನಿಮಗೆ ದೊಡ್ಡ ವಾಹನಗಳನ್ನು ಸಹ ಒದಗಿಸುತ್ತದೆ.

ನಿಮ್ಮ ನೆಚ್ಚಿನ ಕೆಲಸವನ್ನು ನೀವು ಮಾಡಬಹುದು (Choice of products to deliver)
ಡೆಲಿವರಿ ಬಾಯ್ ಕಚೇರಿ/ಮನೆ ಎರಡೂ ಕಡೆಗೆ ಸರಕುಗಳನ್ನು ತಲುಪಿಸಬೇಕು. ಆದರೆ ಯಾವ ಉತ್ಪನ್ನಗಳನ್ನು ಡೆಲಿವರಿ ಮಾಡಬೇಕು ಎಂಬುದನ್ನು ಡೆಲಿವರಿ ಬಾಯ್  ನಿರ್ಧರಿಸುತ್ತಾರೆ. ಸಣ್ಣ ವಸ್ತುಗಳಿಂದ ಫ್ರಿಜ್, ಟಿವಿ, ಎಸಿ ವರೆಗೆ ತಲುಪಿಸಬಹುದು. ಇದಕ್ಕಾಗಿ ದೊಡ್ಡ ವಾಹನ ಅಗತ್ಯವಿದೆ, ಅಮೆಜಾನ್ ದೊಡ್ಡ ವಾಹನಗಳನ್ನು ಒದಗಿಸುತ್ತದೆ.

ಇದನ್ನೂ ಓದಿ-SBI Yono App Updates: SBI ಗ್ರಾಹಕರಿಗೊಂದು ಸಂತಸದ ಸುದ್ದಿ

ಕಂಪನಿಯು ಕೆಲಸವನ್ನು ಸಹ ಕಲಿಸುತ್ತದೆ (Training for logistics department)
ನೇಮಕ ಮಾಡಿದ ನಂತರ ಉತ್ಪನ್ನವನ್ನು ಹೇಗೆ ತಲುಪಿಸುವುದು ಎಂಬುದರ ಕುರಿತು ಕಂಪನಿಯು ನಿಮಗೆ ಮಾಹಿತಿಯನ್ನು ನೀಡುತ್ತದೆ. ಸಮಯಕ್ಕೆ ಅನುಗುಣವಾಗಿ ಯಾವ ಉತ್ಪನ್ನಗಳನ್ನು ತಲುಪಿಸಬೇಕು ಇತ್ಯಾದಿ. ಅಂದರೆ ವಿತರಣೆಗೆ ಸಂಬಂಧಿಸಿದ ಸಂಪೂರ್ಣ ತರಬೇತಿಯನ್ನು ಅಮೆಜಾನ್ ನೀಡಲಿದೆ.

ಇದನ್ನೂ ಓದಿ-FD Interest Rates : FD ಮೇಲಿನ ಬಡ್ಡಿದರಗಳನ್ನು ಬದಲಸಿದ ಈ ಬ್ಯಾಂಕ್ : ಹೊಸ ದರಗಳು ಯಾವವು ಇಲ್ಲಿ ನೋಡಿ!

ಕೆಲಸ ಶಾಶ್ವತವೇ ಅಥವಾ ಒಪ್ಪಂದವೇ?
ಅಮೆಜಾನ್‌ನಲ್ಲಿ ಡೆಲಿವರಿ ಹುಡುಗನ ಕೆಲಸ ಶಾಶ್ವತ ಅಥವಾ ಒಪ್ಪಂದವಲ್ಲ. ನಿಮಗೆ ಬೇಕಾದಾಗ ನೀವು ಕೆಲಸವನ್ನು ಬಿಡಬಹುದು. ಇದೇ ವೇಳೆ ನಿಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದುಹಾಕಬಹುದು ಎಂಬುದನ್ನು ನೆನಪಿಡಿ.

ಇದನ್ನೂ ಓದಿ-Bank Holiday : 5 ದಿನ ಈ ರಾಜ್ಯಗಳಲ್ಲಿ ಬ್ಯಾಂಕ್ ಬಂದ್ : ನಿಮ್ಮ ನಗರವು ಈ ಪಟ್ಟಿಯಲ್ಲಿಲ್ಲದೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News