ಹಾಲಿನ ದರದಲ್ಲಿ ಮೂರು ರೂಪಾಯಿ ಹೆಚ್ಚಳ!

Milk Price Increase:ಬೆಲೆ ಏರಿಕೆಯ ಲಿಸ್ಟ್ ನಲ್ಲಿ ಇದೀಗ ಹಾಲಿನ ದರದ ಸರದಿ.  ಪ್ರತಿ ಲೀಟರ್ ಹಾಲಿನ ಬೆಲೆ ಮೂರು ರೂಪಾಯಿಯಷ್ಟು ಹೆಚ್ಚಾಗಿದೆ.  

Written by - Ranjitha R K | Last Updated : Feb 3, 2023, 11:23 AM IST
  • ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನೇದಿನೇ ಏರುತ್ತಿದೆ.
  • ಬೆಲೆ ಏರಿಕೆಯ ಲಿಸ್ಟ್ ನಲ್ಲಿ ಇದೀಗ ಹಾಲಿನ ದರದ ಸರದಿ.
  • ಲೀಟರ್ ಹಾಲಿನ ಬೆಲೆ ಮೂರು ರೂಪಾಯಿಯಷ್ಟು ಹೆಚ್ಚಾಗಿದೆ.
ಹಾಲಿನ  ದರದಲ್ಲಿ ಮೂರು ರೂಪಾಯಿ ಹೆಚ್ಚಳ!

Milk Price Increase: ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ  ದಿನೇದಿನೇ ಏರುತ್ತಿದೆ. ಬೆಲೆ ಏರಿಕೆಯ ಲಿಸ್ಟ್ ನಲ್ಲಿ ಇದೀಗ ಹಾಲಿನ ದರದ ಸರದಿ. ಪ್ರತಿ ಲೀಟರ್ ಹಾಲಿನ ಬೆಲೆ ಮೂರು ರೂಪಾಯಿಯಷ್ಟು ಹೆಚ್ಚಾಗಿದೆ. ಹೌದು  ಅಮುಲ್ ಹಾಲಿನ ದರವನ್ನು ಲೀಟರ್‌ಗೆ 3 ರೂ.ವರೆಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ ಒಂದು ಲೀಟರ್ ಅಮುಲ್ ಗೋಲ್ಡ್ ಬೆಲೆ 63 ರೂಪಾಯಿಯಿಂದ  66 ರೂಪಾಯಿಗೆ ಏರಿಕೆಯಾಗಿದೆ. 1 ಲೀಟರ್ ಅಮುಲ್ ತಾಜಾ ಬೆಲೆ  54 ರೂಪಾಯಿ ಆಗಿದೆ. ಇನ್ನು ಮುಂದೆ ಅಮುಲ್ ಹಸುವಿನ ಹಾಲಿಗೆ 56 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಎ2 ಹಾಲಿಗೆ 70 ರೂ :
ಅಮುಲ್ ಎ2 ಎಮ್ಮೆಯ ಹಾಲಿನ ದರ ಲೀಟರ್‌ಗೆ 70 ರೂ.ಗೆ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಈ ವರ್ಷ ಮೊದಲ ಬಾರಿಗೆ ಅಮುಲ್ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಅಮುಲ್ 2022ರಲ್ಲಿ ಹಾಲಿನ ದರವನ್ನು ಮೂರು ಬಾರಿ ಹೆಚ್ಚಿಸಿತ್ತು. ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ದರ ಹೆಚ್ಚಳ ಮಾಡಿತ್ತು. ಈ ಹಿಂದೆ ಸಾಮಾನ್ಯವಾಗಿ ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಕೆಯಾಗುತ್ತಿತ್ತು, ಆದರೆ ಈ ಬಾರಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿದೆ.

ಇದನ್ನೂ ಓದಿ : Pension News : ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ : ಮೋದಿ ಸರ್ಕಾರದಿಂದ ಮಹತ್ವದ ಮಾಹಿತಿ!

ಡಿಸೆಂಬರ್‌ನಲ್ಲಿ ಮದರ್ ಡೈರಿ ದರ ಹೆಚ್ಚಳ : 
ಇದಕ್ಕೂ ಮೊದಲು, ಮದರ್ ಡೈರಿ ಡಿಸೆಂಬರ್‌ನಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 2 ರೂಪಾಯಿ ಯಷ್ಟು ಹೆಚ್ಚಿಸಿತ್ತು. ಮದರ್ ಡೈರಿ ಪ್ರತಿದಿನ 30 ಲಕ್ಷ ಲೀಟರ್‌ಗಿಂತಲೂ ಹೆಚ್ಚು ಹಾಲನ್ನು ಮಾರಾಟ ಮಾಡುತ್ತದೆ ಎಂದು ಹೇಳಲಾಗಿದೆ. ಈ ಬೆಲೆ ಏರಿಕೆಯ ನಂತರ ಮದರ್ ಡೈರಿಯ ಫುಲ್ ಕ್ರೀಮ್ ಹಾಲಿನ ದರ ಲೀಟರ್ ಗೆ 66 ರೂ.ಗೆ ಏರಿಕೆಯಾಗಿದೆ. ಇದಲ್ಲದೇ ಟೋನ್ಡ್ ಹಾಲು ಲೀಟರ್ ಗೆ 53 ರೂ.ಗೆ ಮಾರಾಟವಾಗುತ್ತಿದೆ. ಡಬಲ್ ಟೋನ್ಡ್ ಹಾಲಿನ ದರ ಲೀಟರ್‌ಗೆ 47 ರೂ. ಆಗಿದೆ. 

ಇದನ್ನೂ ಓದಿ : RBI : 100, 200, 500 ರೂ. ನೋಟುಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ ಆರ್‌ಬಿಐ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News