ಇನ್ಮುಂದೆ Android ಫೋನೇ ನಿಮ್ಮ POS ! SBI Payments-NPCIನಿಂದ ಹೊಸ ಸೇವೆ ಆರಂಭ

National Payments Corporation Of India(NPCI)-SBI Payments  - SBI Payments ಒಡಂಬಡಿಕೆಗೆ ಸಹಿ ಹಾಕುವ ಮೂಲಕ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI), 'RuPay SoftPoS' ಸೇವೆ ಬಿಡುಗಡೆಗೊಳಿಸಿದೆ.

Written by - Nitin Tabib | Last Updated : Mar 5, 2021, 08:46 PM IST
  • SBI ಜೊತೆ ಸೇರಿ ನೂತನ ಸೇವೆ ಆರಂಭಿಸಿದ NPCI.
  • 'RuPay SoftPoS' ಸೇವೆ ಒದಗಿಸಲು NPCI-SBI ಪೇಮೆಂಟ್ಸ್ ಒಪ್ಪಂದ.
  • ಅರೆನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ MSMEs ಗಳಿಗೆ ಇದರಿಂದ ಪ್ರಯೋಜನ.
ಇನ್ಮುಂದೆ Android ಫೋನೇ ನಿಮ್ಮ POS ! SBI Payments-NPCIನಿಂದ ಹೊಸ ಸೇವೆ ಆರಂಭ title=
National Payments Corporation Of India(NPCI)-SBI Payments (File Photo))

ನವದೆಹಲಿ: National Payments Corporation Of India(NPCI)-SBI Payments ಸಹಭಾಗಿತ್ವದಲ್ಲಿ 'RuPay SoftPoS' ಸೇವೆಯನ್ನು ಆರಂಭಿಸಿದೆ.. ರುಪೇ ಸಾಫ್ಟ್‌ಪೋಸ್‌ನಿಂದ ಲಕ್ಷಾಂತರ ಅಂಗಡಿಯವರು ಪ್ರಯೋಜನ ಪಡೆಯಲಿದ್ದಾರೆ. ಇದರಿಂದ ಅಂಗಡಿ ವ್ಯಾಪಾರಿಗಳು ತಮ್ಮ NFC (ನಿಯರ್ ಫೀಲ್ಡ್ ಕಮ್ಯುನಿಕೇಷನ್) ಸೌಕರ್ಯ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮರ್ಚೆಂಟ್ ಪಾಯಿಂಟ್ ಆಫ್ ಸೇಲ್ (POS) ಟರ್ಮಿನಲ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿದೆ. NPCIನ ಈ ಉಪಕ್ರಮದಿಂದ, ಅಂಗಡಿಯವರು ಈಗ ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಕ್ಲಿಕ್‌ನಲ್ಲಿ 5 ಸಾವಿರ ರೂಪಾಯಿಗಳವರೆಗೆ ಸಂಪರ್ಕವಿಲ್ಲದ ಪಾವತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ.

RuPay SoftPoS ಮೂಲಕ, ಅಂಗಡಿಯವರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸಾಧನವನ್ನು ಪಾವತಿ ಟರ್ಮಿನಲ್ ಆಗಿ ಪರಿವರ್ತಿಸಲು ಸಾಧ್ಯವಾಗಲಿದೆ. ಇದಕ್ಕಾಗಿ, ಅವರು ಬೆಂಬಲಿತ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. NPCI ಮತ್ತು SBI Paymentsಗಳ  ಈ ಉಪಕ್ರಮವು ಭಾರತೀಯ MSMEಗಳಿಗೆ ಡಿಜಿಟಲ್ ಪಾವತಿಗಳನ್ನು ತೆಗೆದುಕೊಳ್ಳುವುದನ್ನು ಮತ್ತಷ್ಟು ಸುಲಭಗೊಳಿಸಲಿದೆ.

ಇದನ್ನೂ ಓದಿ- Home Loan: SBI, HDFC ಬಳಿಕ ಗೃಹಸಾಲ ಬಡ್ಡಿದರದಲ್ಲಿ ಇಳಿಕೆ ಮಾಡಿದ ಖಾಸಗಿವಲಯದ ಅತಿದೊಡ್ಡ ಬ್ಯಾಂಕ್

ಈ ರೀತಿ RuPay SoftPoS ಮೇಲೆ ಪೇಮೆಂಟ್ ಮಾಡಬಹುದು
RuPay SoftPoS ಒಂದು ಸಾಕಷ್ಟು ಸೌಕರ್ಯಗಳನ್ನು ಹೊಂದಿದ ಸೇವೆಯಾಗಿದೆ. ಕಾಂಟಾಕ್ಟ್ ಲೆಸ್ ಮೇನ್ಯೂ ಆಯ್ಕೆಯ ಬಳಿಕ ಎಷ್ಟು ಮೊತ್ತವನ್ನು ಪಾವತಿಸಬೇಕು ಎಂಬುದನ್ನು ಭರ್ತಿ ಮಾಡಬೇಕು. ಇದಾದ ಬಳಿಕ RuPay ಕಾರ್ಡ್ ಅನ್ನು ಅಂಗಡಿದಾರರ ಸ್ಮಾರ್ಟ್ ಫೋನ್ ಮೇಲೆ ಟ್ಯಾಪ್ ಮಾಡಬೇಕು. ಇದರಿಂದ ತಕ್ಷಣ ನಿಮ್ಮ ವ್ಯವಹಾರ ಪೂರ್ಣಗೊಳ್ಳಲಿದೆ. ಒಂದೊಮ್ಮೆ ವ್ಯವಹಾರ ಪೂರ್ಣಗೊಂಡ ತಕ್ಷಣ ರಿಯಲ್ ಟೈಮ್ ನಲ್ಲಿ ಅದರ ರಿಸಿಪ್ಟ್ ಕೂಡ ನಿಮಗೆ ಸಿಗಲಿದೆ. NPCI ನೀಡಿರುವ ಮಾಹಿತಿ ಪ್ರಕಾರ, ಈ ಸೌಕರ್ಯವನ್ನು NCMC (National Common Mobility Card) ಹಾಗೂ RuPay Technised Card ಮೂಲಕ ಬಲಸಬಹುದಾಗಿದೆ.

ಇದನ್ನೂ ಓದಿ-Home Loan: ಇಂದಿನಿಂದ ಈ ದೊಡ್ಡ ಖಾಸಗಿ ಬ್ಯಾಂಕ್ನಲ್ಲಿ ಅಗ್ಗದ ದರದಲ್ಲಿ ಗೃಹ ಸಾಲ ಲಭ್ಯ

RBI ನಿರ್ಣಯದಿಂದ ಲಾಭ
ಈ ಸೌಕರ್ಯದ ಕುರಿತು ಮಾಹಿತಿ ನೀಡಿರುವ SBI PAYMENTS  MD ಹಾಗೂ CEO ಗಿರಿ ಕುಮಾರ್ ನಾಯರ್, ಸರ್ಕಾರದ Digital India ಯೋಜನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿSBI Payments, NPCI ಜೊತೆಗೆ ಸೇರಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಈಶಾನ್ಯ ರಾಜ್ಯಗಳಲ್ಲಿನ ವ್ಯಾಪಾರಿಗಳತ್ತ ವಿಶೇಷ ಗಮನವನ್ನು ಹೊಂದಲಾಗಿದೆ ಎಂದು ನಾಯರ್ ಹೇಳಿದ್ದಾರೆ. SBI Payments ಮತ್ತು NPCI ನಡುವಿನ ಒಪ್ಪಂದದ ಈ ಉಪಕ್ರಮವು ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ಪ್ರಯೋಜನವನ್ನು ನೀಡಲಿದೆ. ಟ್ಯಾಪ್ ಅಂಡ್ ಗೋ ಸೌಲಭ್ಯದ ಅಡಿಯಲ್ಲಿ 5000 ರೂ.ಗಳವರೆಗೆ ಪಾವತಿಯನ್ನು ಸ್ವೀಕರಿಸಲು ಆರ್‌ಬಿಐ ಅನುಮೋದನೆ ನೀಡಿದ್ದು, ಇದರಿಂದ ಆದಷ್ಟು ಹೆಚ್ಚು ಅಂಗಡಿಯವರನ್ನು ಸಂಪರ್ಕಿಸಬಹುದು ಎಂದು ನಾಯರ್ ಹೇಳಿದ್ದಾರೆ .

ಇದನ್ನೂ ಓದಿ-SBI Mega E-Auction: ಅಗ್ಗದ ದರದಲ್ಲಿ ಮನೆ ಖರೀದಿಗೆ ಮಾ.5 ರಿಂದ SBI ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News