BMW G 310 RR: ವಿಶ್ವಾದ್ಯಂತ BMW Motorrad ಜನಪ್ರಿಯ ಐಷಾರಾಮಿ ವಾಹನಗಳ ಬ್ರಾಂಡ್ ಎಂದು ಗುರುತಿಸಲ್ಪಟ್ಟಿದೆ. ಈ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಪ್ರೀಮಿಯಂ ಕಾರುಗಳು ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. 2 ವರ್ಷಗಳ ಹಿಂದೆ ಕಂಪನಿಯು BMW G 310 RR ಪವರ್ ಪ್ಯಾಕ್ಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಕ್ರೇಜ್ ಸಿಕ್ಕಿತು. BMW ಇತ್ತೀಚೆಗೆ ನವೀಕರಿಸಿದ G 310 RR ಸರಣಿಯನ್ನು ಪ್ರಕಟಿಸಿದೆ.
ಕಂಪನಿಯು BMW G 310 RR ಬೈಕ್ ವಿವಿಧ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ವಾಹನದ ನೋಟವನ್ನು ಸುಧಾರಿಸಲು ಕೆಲವು ಕಾಸ್ಮೆಟಿಕ್ ಬದಲಾವಣೆ ಮಾಡಲಾಗಿದೆ. ಈ ಮೋಟಾರ್‌ಸೈಕಲ್ ಅನ್ನು ಇತ್ತೀಚೆಗೆ ರೇಸಿಂಗ್ ಮೆಟಾಲಿಕ್ ಬ್ಲೂ ಕಲರ್ ಸ್ಕೀಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್ ಕಾಸ್ಮಿಕ್ ಬ್ಲಾಕ್ ಮತ್ತು ಸ್ಟೈಲ್ ಸ್ಪೋರ್ಟ್ ಶೇಡ್‌ಗಳಲ್ಲಿ ಸಹ ಲಭ್ಯವಿದೆ. ಆದರೆ ವಾಹನದ ವೈಶಿಷ್ಟ್ಯಗಳು ಬದಲಾಗಿಲ್ಲ.
ಇದನ್ನೂ ಓದಿ:Arecanut Price in Karnataka: ಶಿವಮೊಗ್ಗ, ಚಿತ್ರದುರ್ಗ & ದಾವಣಗೆರೆಯಲ್ಲಿ ಇಂದಿನ ಅಡಿಕೆ ಧಾರಣೆ
BMW G 310 RR ಬೈಕ್ 313 cc ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್ ಹೊಂದಿದೆ. ಇದು 9,700 rpm ನಲ್ಲಿ 33.52 bhp ಯ ಗರಿಷ್ಠ ಶಕ್ತಿಯನ್ನು ಮತ್ತು 7,700 rpm ನಲ್ಲಿ 25.3 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್‌ಗೆ 6-ಸ್ಪೀಡ್ ಗೇರ್‌ಬಾಕ್ಸ್ ಇದೆ. ಗಂಟೆಗೆ 160 ಕಿಮೀ ವೇಗವನ್ನು ಹೊಂದಿದೆ.
ಹಿಂದಿನ ಬೈಕ್‌ಗಳಿಗೆ ಹೋಲಿಸಿದರೆ ಈ ಹೊಸ ಬಣ್ಣದ ಬೈಕ್ ಸಕತ್ತಾಗಿದೆ. ಇದು ಹಿಂದಿನ ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ಮುಂಭಾಗದಲ್ಲಿ ದೊಡ್ಡ ಪಾರದರ್ಶಕ ವಿಸರ್, ಅದೇ ವಿಶಿಷ್ಟವಾದ ಸ್ಪ್ಲಿಟ್ ಆಸನ ವ್ಯವಸ್ಥೆ ಮತ್ತು ಪಿಲಿಯನ್ ಅಡಿಯಲ್ಲಿ ಎಲ್‌ಇಡಿ ಲೈಟ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ:ಮೋದಿ ಸರ್ಕಾರದ ಈ ಯೋಜನೆಯಿಂದ ಲಕ್ಷಗಟ್ಟಲೆ ಆದಾಯ.. ಹೀಗೆ ಪಡೆಯಿರಿ!
ಹೊಸ ಆವೃತ್ತಿಯ ಬೆಲೆ ಎಷ್ಟು? : BMW G 310 RR ಬೈಕ್ ಹೊಸ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದ್ದು, ಇದರ ಬೆಲೆ 3.05 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಈ ವಾಹನವನ್ನು BMW Motorrad ಅಧಿಕೃತ ಡೀಲರ್‌ಶಿಪ್‌ಗಳಿಂದ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.