Budget 2023 Expectation: ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ಸುಮಾರು ಒಂದು ತಿಂಗಳು ಬಾಕಿ ಉಳಿದಿದೆ. ಫೆಬ್ರವರಿ 1 ರಂದು ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಆದರೆ ಇದಕ್ಕೂ ಮುನ್ನ ವಿವಿಧ ವಲಯಗಳ ಪರವಾಗಿ ತಮ್ಮ ಬೇಡಿಕೆಗಳ ಬಗ್ಗೆ ಹಣಕಾಸು ಸಚಿವರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ ಮತ್ತು ಮುಂಬರುವ ಬಜೆಟ್ ನಲ್ಲಿ ಪರಿಹಾರ ನೀಡುವಂತೆ ಕೇಂದ್ರ ಹಣಕಾಸು ಸಚಿವರನ್ನು ಒತ್ತಾಯಿಸಲಾಗುತ್ತಿದೆ.
ಮೋದಿ ಸರ್ಕಾರದ ಕೊನೆಯ ಬಜೆಟ್
ಈ ಬಜೆಟ್‌ನಲ್ಲಿ ರೈತರಿಗೆ ಮತ್ತು ಉದ್ಯೋಗಿಗಳಿಗೆ ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ವಾಸ್ತವದಲ್ಲಿ, ಇದು 2024 ರ ಲೋಕಸಭಾ ಚುನಾವಣೆಯ ಮೊದಲು ಮೋದಿ ಸರ್ಕಾರದ ಕೊನೆಯ ಬಜೆಟ್ ಆಗಿರಲಿದೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ ಉಳಿತಾಯದ ಮಿತಿಯನ್ನು 1.5 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ. ICAI ನಿಂದ 2023 ರ ಬಜೆಟ್ ಪೂರ್ವ ಮೆಮೊರಾಂಡಮ್‌ನಲ್ಲಿ, ಸಾಮಾನ್ಯ ಜನರ ಕೈಯಲ್ಲಿ ಹೆಚ್ಚಿನ ಹಣ ಇರಿಸಲು ಸಲಹೆ ನೀಡಲಾಗಿದೆ.
ಇದನ್ನೂ ಓದಿ-LIC: ಎಲ್ಐಸಿ ವಿಲೀನದ ಕುರಿತು ಮಹತ್ವದ ಅಪ್ಡೇಟ್ ಪ್ರಕಟ ಇಲ್ಲಿದೆ ಡೀಟೇಲ್ಸ್
ದೀರ್ಘ ಕಾಲದಿಂದ ಪರಿಹಾರಕ್ಕಾಗಿ ಬೇಡಿಕೆ
80ಸಿ ಅಡಿಯಲ್ಲಿ ಪರಿಹಾರ ನೀಡಬೇಕೆಂದು ಜನಸಾಮಾನ್ಯರು ಸಾಕಷ್ಟು ದಿನಗಳಿಂದ ಆಗ್ರಹಿಸುತ್ತಿದ್ದಾರೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸುವಂತೆಯೂ ಐಸಿಎಐ ಒತ್ತಾಯಿಸಿದೆ. ಸದ್ಯ ಈ ಮಿತಿ 1.5 ಲಕ್ಷ ಇದ್ದು, ಇದನ್ನು 3 ಲಕ್ಷಕ್ಕೆ ಏರಿಸುವಂತೆ ಒತ್ತಾಯಿಸಲಾಗುತ್ತಿದೆ. PPF ಮಿತಿಯನ್ನು ಹೆಚ್ಚಿಸುವ ಬೇಡಿಕೆಯ ಹಿಂದೆ ICAI ವಾದವು ಉದ್ಯಮಿಗಳು ಮತ್ತು ಉದ್ಯೋಗ ವೃತ್ತಿಪರರಿಗೆ ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ.
ಇದನ್ನೂ ಓದಿ-Minimum Wage: ದಿನಗೂಲಿ ನೌಕರರ ಪಾಲಿಗೆ ಇಲ್ಲಿದೆ ಭಾರಿ ಸಂತಸದ ಸುದ್ದಿ, ಜಬರ್ದಸ್ತ್ ಪ್ಲಾನ್ ನಲ್ಲಿ ಮೋದಿ ಸರ್ಕಾರ
ಉದ್ಯೋಗಿಗಳ ಪಿಎಫ್ ಕೊಡುಗೆಯಿಂದಾಗಿ, ಅದರ ಅಡಿಯಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ತೆರಿಗೆ ಉಳಿಸಲು ಅವರಿಗೆ ಸೀಮಿತ ಆಯ್ಕೆಗಳಿವೆ. ಕಳೆದ ಹಲವು ವರ್ಷಗಳಿಂದ 80ಸಿ ಅಡಿಯಲ್ಲಿ 1.5 ಲಕ್ಷ ರೂ.ಗಳ ಮಿತಿಯನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದಲ್ಲದೆ, 80DDB ಅಡಿಯಲ್ಲಿ ವೆಚ್ಚದ ಮಿತಿಯನ್ನು ಹೆಚ್ಚಿಸಲು ICAI ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.