4 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಸಿಎನ್​ಜಿ ಕಾರುಗಳಿವು .! ನೀಡುತ್ತದೆ 35KMಗಿಂತ ಅಧಿಕ ಮೈಲೇಜ್

Cheapest CNG Cars: ಜನರು ಸಿಎನ್‌ಜಿ ಕಾರುಗಳತ್ತ ಒಲವು ತೋರುತ್ತಿದ್ದಾರೆ. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಸಿಎನ್‌ಜಿ ಕಾರುಗಳ ಓಡಾಟದ ವೆಚ್ಚ ಕಡಿಮೆ. 

Written by - Ranjitha R K | Last Updated : Oct 17, 2022, 11:26 AM IST
  • ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
  • ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬಳಕೆಯ ವೆಚ್ಚವೂ ಹೆಚ್ಚಾಗಿದೆ.
  • ಜನರು ಸಿಎನ್‌ಜಿ ಕಾರುಗಳತ್ತ ಒಲವು ತೋರುತ್ತಿದ್ದಾರೆ.
 4 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಸಿಎನ್​ಜಿ ಕಾರುಗಳಿವು .! ನೀಡುತ್ತದೆ 35KMಗಿಂತ ಅಧಿಕ ಮೈಲೇಜ್  title=
Cheapest cng cars

Cheapest CNG Cars : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬಳಕೆಯ ವೆಚ್ಚವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜನರು ಸಿಎನ್‌ಜಿ ಕಾರುಗಳತ್ತ ಒಲವು ತೋರುತ್ತಿದ್ದಾರೆ. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಸಿಎನ್‌ಜಿ ಕಾರುಗಳ ಓಡಾಟದ ವೆಚ್ಚ ಕಡಿಮೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದ್ದು, ಸಿಎನ್‌ಜಿಯಲ್ಲಿ ಕಾರು ಹೆಚ್ಚು ಮೈಲೇಜ್ ನೀಡುತ್ತದೆ. ಎರಡನೇಯದ್ದು ಸಿಎನ್‌ಜಿ ಬೆಲೆ ಪೆಟ್ರೋಲ್‌ಗಿಂತ ಕಡಿಮೆಯಾಗಿದೆ. ಆದರೆ, ಪ್ರಸ್ತುತ ಸಿಎನ್‌ಜಿ ಕೂಡಾ ದುಬಾರಿಯಾಗಿದ್ದು, ಹಲವೆಡೆ ಕೆಜಿಗೆ 80 ರೂ.ಗೂ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ. ಆದರೂ ಪೆಟ್ರೋಲ್‌ಗಿಂತ ಸಿಎನ್‌ಜಿ ಅಗ್ಗವಾಗಿದೆ. 

ಮಾರುತಿ ಆಲ್ಟೊ ಸಿಎನ್‌ಜಿ :
ಆಲ್ಟೊ ಸಿಎನ್‌ಜಿ ಕಾರು 31.59 ಕಿಮೀ ಮೈಲೇಜ್ ನೀಡುತ್ತದೆ ಎಂದು ಮಾರುತಿ  ಹೇಳಿಕೊಂಡಿದೆ. ಇದು 796 cc ಎಂಜಿನ್ ನೊಂದಿಗೆ ಬರುತ್ತದೆ. ಇದು 35.3 kW ಪವರ್ ಮತ್ತು 69 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ 3.39 ಲಕ್ಷದಿಂದ 5.03 ಲಕ್ಷದವರೆಗೆ ಇರುತ್ತದೆ. 

ಇದನ್ನೂ ಓದಿ : Gold Price Today : ಚಿನ್ನ ಖರೀದಿಗೂ ಮುನ್ನ ಇಂದಿನ ಬೆಲೆ ತಿಳಿಯಿರಿ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಿಎನ್‌ಜಿ :
ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಿಎನ್‌ಜಿ 31.2 ಕಿಮೀ ಮೈಲೇಜ್ ನೀಡುತ್ತದೆ.  ಈ ಕಾರು 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.  ಇದು 59 PS ಪವರ್ ಮತ್ತು 78 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಬೆಲೆ 4.25 ಲಕ್ಷದಿಂದ ಆರಂಭವಾಗುತ್ತದೆ.  

ಟಾಟಾ ಟಿಯಾಗೊ ಸಿಎನ್‌ಜಿ :
ಟಾಟಾ ಟಿಯಾಗೊದ ಸಿಎನ್‌ಜಿ ಆವೃತ್ತಿಯನ್ನು ಈ ವರ್ಷ ಪರಿಚಯಿಸಲಾಯಿತು. ಕಂಪನಿಯು ಒಟ್ಟು 5 ರೂಪಾಂತರಗಳಲ್ಲಿ CNG ಕಿಟ್ ಅನ್ನು ನೀಡುತ್ತದೆ. ಸಿಎನ್‌ಜಿ ಕಿಟ್‌ನೊಂದಿಗೆ  ಬರುವ ಟಾಟಾ ಟಿಯಾಗೊ ಬೆಲೆ  6.30 ಲಕ್ಷದಿಂದ ಪ್ರಾರಂಭವಾಗುತ್ತದೆ.  ಇದು 26KM ಗಿಂತ ಹೆಚ್ಚು ಮೈಲೇಜ್ ನೀಡುತ್ತದೆ.

ಇದನ್ನೂ ಓದಿ : PMVVY: ವಿವಾಹಿತರಿಗೆ ಮಾಸಿಕವಾಗಿ 10,000 ರೂ.ಪಿಂಚಣಿ ನೀಡಲಿದೆ ಮೋದಿ ಸರ್ಕಾರ

ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ  :
ಮಾರುತಿಯ ಸೆಲೆರಿಯೊ ಸಿಎನ್‌ಜಿ 35.6 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಮಾರುತಿ ಸುಜುಕಿ ಸೆಲೆರಿಯೊ ಬೆಲೆ 5.25 ಲಕ್ಷದಿಂದ 7 ಲಕ್ಷದವರೆಗೆ ಇದೆ. ಕಾರು 998 ಸಿಸಿ ಎಂಜಿನ್ ಅನ್ನು ಪಡೆಯುತ್ತದೆ. ಇದು 57hp ಪವರ್ ಮತ್ತು 82.1 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಬೆಲೆಯನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ ನೀಡಲಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News