Gold Price Today : ಚಿನ್ನ ಖರೀದಿಗೂ ಮುನ್ನ ಇಂದಿನ ಬೆಲೆ ತಿಳಿಯಿರಿ

Gold Price Today : ಮತ್ತೆ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಆದರೆ ಬೆಳ್ಳಿ ಬೆಲೆ ಸ್ಥಿರವಾಗಿದೆ. 

Written by - Ranjitha R K | Last Updated : Oct 17, 2022, 08:18 AM IST
  • ಚಿನ್ನದ ಬೆಲೆಯಲ್ಲಿ ಏರಿಕೆ
  • ಬೆಳ್ಳಿ ಬೆಲೆ ಸ್ಥಿರ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಚಿನ್ನ ಖರೀದಿಗೂ ಮುನ್ನ ಇಂದಿನ ಬೆಲೆ ತಿಳಿಯಿರಿ  title=
Gold Silver price (file photo)

ಬೆಂಗಳೂರು : Gold Price Today : ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ಚಿನ್ನದ ಬೆಲೆ ಕೂಡಾ ಏರುತ್ತಿದೆ. ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ಬೆಲೆಯಲ್ಲಿ 270 ರೂಪಾಯಿಗಳಷ್ಟು ಏರಿಕೆಯಾಗಿದೆ.  ಈ ಏರಿಕೆಯೊಂದಿಗೆ  24 ಕ್ಯಾರೆಟ್ ಚಿನ್ನದ ಬೆಲೆ 50,670 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ.ಗೆ 46,450  ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ      22 ಕ್ಯಾರೆಟ್ ಚಿನ್ನದ ಬೆಲೆ     24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 46,900 51,160
 ಮುಂಬಯಿ 46,450 50,670
ದೆಹಲಿ 46,600 50,820
ಕೋಲ್ಕತ್ತಾ 46,450 50,670
ಬೆಂಗಳೂರು 46,500 50,720
ಹೈದರಾಬಾದ್ 46,450 50,670
ಕೇರಳ 46,450 50,670

ಇದನ್ನೂ ಓದಿ : PMVVY: ವಿವಾಹಿತರಿಗೆ ಮಾಸಿಕವಾಗಿ 10,000 ರೂ.ಪಿಂಚಣಿ ನೀಡಲಿದೆ ಮೋದಿ ಸರ್ಕಾರ

ಚಿನ್ನದ ಬೆಲೆ ಏರಿಕೆಯಾಗಿದೆ, ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ನಗರ  ಇಂದಿನ ಬೆಳ್ಳಿ ಬೆಲೆ 
 ಚೆನ್ನೈ 55,300
 ಮುಂಬಯಿ 55,300
ದೆಹಲಿ 55,300
ಕೋಲ್ಕತ್ತಾ 55,300
ಬೆಂಗಳೂರು 55,300
ಹೈದರಾಬಾದ್ 60,500
ಕೇರಳ 60,500

ಇದನ್ನೂ ಓದಿ : PM Kisan Update: ದೇಶದ ಕೋಟ್ಯಾಂತರ ರೈತರಿಗೆ ನಾಳೆ ಪ್ರಧಾನಿ ವತಿಯಿಂದ ಉಡುಗೊರೆ, ಮಾಹಿತಿ ನೀಡಿದ ಕೃಷಿ ಸಚಿವಾಲಯ

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News