Gold Bumper Return: ಚಿನ್ನ ಖರೀದಿಸಿದ್ದರೆ ಬಂಪರ್ ! 10 ಗ್ರಾಂ ಚಿನ್ನದ ಮೇಲೆ ನಾಳೆ ಆಗುವುದು ಇಷ್ಟು ಲಾಭ !

Akshaya Tritiya Gold Price:ಈ ಅಮೂಲ್ಯ ಲೋಹವು ಕೇವಲ ಒಂದು ವರ್ಷದಲ್ಲಿ 20 ಪ್ರತಿಶತದಷ್ಟು ಪ್ರಚಂಡ ಆದಾಯವನ್ನು ನೀಡಿದೆ. 2023ರಲ್ಲಿ ಚಿನ್ನ ಖರೀದಿಸಿದರೆ ಶೇ 12ರಷ್ಟು ಆದಾಯ ಬರಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. 

Written by - Ranjitha R K | Last Updated : Apr 21, 2023, 03:52 PM IST
  • ನಾಳೆ ಅಕ್ಷಯ ತೃತೀಯ.
  • ಈ ದಿನ ಚಿನ್ನ ಖರೀದಿಸುವುದು ಮಂಗಳಕರ
  • ಒಂದು ವರ್ಷದಲ್ಲಿ 10,000 ರೂಪಾಯಿಗಿಂತ ಹೆಚ್ಚಳ
Gold Bumper Return: ಚಿನ್ನ ಖರೀದಿಸಿದ್ದರೆ ಬಂಪರ್ !  10 ಗ್ರಾಂ ಚಿನ್ನದ ಮೇಲೆ ನಾಳೆ ಆಗುವುದು ಇಷ್ಟು ಲಾಭ !  title=

Akshaya Tritiya Gold Price : ನಾಳೆ  ಅಕ್ಷಯ ತೃತೀಯ.  ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ಮಂಗಳಕರ ಎನ್ನುವುದು ನಂಬಿಕೆ. ಕಳೆದ ವರ್ಷವೂ ನೀವು ಚಿನ್ನ ಖರೀದಿಸಿದ್ದರೆ ಇದು ನಿಮಗೆ ಸಂತಸದ ಸುದ್ದಿಯಾಗಿರಲಿದೆ. ಈ ಅಮೂಲ್ಯ ಲೋಹವು ಕೇವಲ ಒಂದು ವರ್ಷದಲ್ಲಿ 20 ಪ್ರತಿಶತದಷ್ಟು ಪ್ರಚಂಡ ಆದಾಯವನ್ನು ನೀಡಿದೆ. 2023ರಲ್ಲಿ ಚಿನ್ನ ಖರೀದಿಸಿದರೆ ಶೇ 12ರಷ್ಟು ಆದಾಯ ಬರಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಕಳೆದ ವರ್ಷ ಈ ಹಬ್ಬವನ್ನು ಮೇ 3 ರಂದು ಆಚರಿಸಲಾಯಿತು.

ಒಂದು ವರ್ಷದಲ್ಲಿ 10,000 ರೂಪಾಯಿಗಿಂತ ಹೆಚ್ಚಳ :
ಮೇ 3, 2022  ರಂದು, MCX ನಲ್ಲಿ ಚಿನ್ನದ ದರವು 10 ಗ್ರಾಂಗೆ 50,800 ರೂಪಾಯಿ ಆಗಿತ್ತು. ಆದರೆ 2023  ಏಪ್ರಿಲ್ 20 ರಂದು ಮುಕ್ತಾಯಗೊಂಡ ವಹಿವಾಟಿನಲ್ಲಿ ಚಿನ್ನದ ಬೆಲೆ 60,503 ರೂ.ಗೆ ಏರಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಗುರುವಾರದಂದು 10 ಗ್ರಾಂಗೆ 60,616 ರೂ. ವಹಿವಾಟು ನಡೆಸಿದೆ. ಅಂದರೆ ಕಳೆದ ಒಂದು ವರ್ಷದಲ್ಲಿ ಚಿನ್ನದ ದರ 10,000 ರೂ.ಗೂ ಅಧಿಕವಾದಂತಗಿದೆ. 

ಇದನ್ನೂ ಓದಿ : ಅಕ್ಷಯ ತೃತೀಯಕ್ಕೂ ಮುನ್ನ ಭಾರೀ ಕುಸಿತ ಕಂಡ ಬಂಗಾರದ ಬೆಲೆ !

ರೆಪೊ ದರದಲ್ಲಿ ಶೇ.2.50 ಹೆಚ್ಚಳ :
ವರದಿ ಪ್ರಕಾರ ಕಳೆದ 10 ವರ್ಷಗಳಲ್ಲಿ ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನ ಖರೀದಿಯಿಂದ ಶೇ.11ರಷ್ಟು ಆದಾಯ ಬಂದಿದೆ. ಆದರೆ 2022 ರಲ್ಲಿ ಜಾಗತಿಕ ಅನಿಶ್ಚಿತತೆಯ ಕಾರಣ, ಹೂಡಿಕೆದಾರರು ಚಿನ್ನದ ಮೇಲೆ ಅಪಾರ ಆಸಕ್ತಿಯನ್ನು ತೋರಿಸಿದ್ದರು. ಹಣದುಬ್ಬರ ಜಾಗತಿಕ ಮಟ್ಟದಲ್ಲಿಯೇ ಇದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ತಡೆಯಲು, RBI ಮೇ 2022 ರಿಂದ ಇಲ್ಲಿಯವರೆಗೆ ರೆಪೊ ದರವನ್ನು 2.50 ಪ್ರತಿಶತದಷ್ಟು ಹೆಚ್ಚಿಸಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ. ಈ ಕಾರಣದಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಕ್ಷಯ ತೃತೀಯ ದಿನದಂದು ಆಭರಣ ಮಾರಾಟ ಕಡಿಮೆ ಆಗಬಹುದು. ಅಕ್ಷಯ ತೃತೀಯ ದಿನದಂದು ಆಭರಣಗಳ ಮಾರಾಟದಲ್ಲಿ 20% ರಷ್ಟು ಇಳಿಕೆಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News