ಬೆಂಗಳೂರು: ಅಂಜನಾದ್ರಿ ಭಾಗದ ಅಭಿವೃದ್ಧಿಗೆ ಹಾಕಲಾಗಿದ್ದ ವಿವಾದಿತ ವಿದ್ಯುತ್ ಕಂಬಗಳ ತೆರವಿಗೆ ಕೊಪ್ಪಳ ಜಿಲ್ಲೆ ಗಂಗಾವತಿಯ ತಹಸೀಲ್ದಾರ್ ಆದೇಶ ವಿಚಾರವಾಗಿ ಟ್ವೀಟ್ ಮಾಡಿರುವ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಅಂತಾ SDPI ದೂರಿನ ಬೆನ್ನಲ್ಲೇ ಗಂಗಾವತಿಯಲ್ಲಿ ಬಿಲ್ಲು-ಬಾಣಗಳಿರುವ ವಿದ್ಯುತ್ ಕಂಬ ತೆರವಿಗೆ ಗಂಗಾವತಿಯ ತಹಸೀಲ್ದಾರ್ ಆದೇಶ ನೀಡಿದ್ದರು. ಈ ಆದೇಶದ ವಿರುದ್ಧ ಕಿಡಿಕಾರಿರುವ ಸಿಟಿ ರವಿ, ತಹಸೀಲ್ದಾರ್ ಅಮಾನತ್ತಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ವಖ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ವಖ್ಫ್ ಬೋರ್ಡ್ ವಿರೋಧ : ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ನಿರ್ಣಯ
ಈ ಬಗ್ಗೆ ಟ್ವೀಟ್ ಮಾಡಿರುವ ಸಿಟಿ ರವಿ, ʼನಮ್ಮೆಲ್ಲರ ಆರಾಧ್ಯ ದೈವ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಬಳಿ ಇರುವ ತ್ರಿಶೂಲ-ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆಯಂತೆ. ಇದು ಯಾವ ಸೀಮೆಯ ಲಾಜಿಕ್?ʼ ಎಂದು ಪ್ರಶ್ನಿಸಿದ್ದಾರೆ.
ʼಪ್ರತಿನಿತ್ಯ ಮೈಕ್ ಹಾಕಿಕೊಂಡು ಊರಿಗೆಲ್ಲಾ ಕೇಳುವ ರೀತಿ ಕೂಗುವುದು ಇತರ ಧರ್ಮಿಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲವಾ? ಎಂದು ಗಂಗಾವತಿ ತಹಶೀಲ್ದಾರ್ ವಿರುದ್ಧ ಸಿಟಿ ರವಿ ಕಿಡಿಕಾರಿದ್ದಾರೆ.
ನಮ್ಮೆಲ್ಲರ ಆರಾಧ್ಯ ದೈವ ಹನುಮನ ಜನ್ಮಸ್ಥಳದಲ್ಲಿ ತ್ರಿಶೂಲ-ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆಯಂತೆ!!
ಸಿಎಂ @Siddaramaiah ಅವರೆ, ಇದು ಯಾವ ಸೀಮೆಯ ಲಾಜಿಕ್!!!
ಪ್ರತಿನಿತ್ಯ ಮೈಕುಗಳಲ್ಲಿ ಊರಿಗೆಲ್ಲಾ ಕೇಳುವ ರೀತಿ ಕೂಗುವುದು ಇತರ ಧರ್ಮಿಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲವಾ..??… pic.twitter.com/Zo2P8wgtXz
— C T Ravi 🇮🇳 ಸಿ ಟಿ ರವಿ (@CTRavi_BJP) August 29, 2024
ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ : ಎಂ.ಬಿ ಪಾಟೀಲ ಆಕ್ರೋಶ
ʼಹಿಂದೂ ವಿರೋಧಿ ನಿರ್ಣಯ ಅಂಗೀಕರಿಸಿರುವ ಗಂಗಾವತಿಯ ತಹಶೀಲ್ದಾರ್ ಅವರನ್ನು ಕೂಡಲೇ ಅಮಾನತು ಮಾಡಿ. ಇಷ್ಟರ ಮೇಲೆಯೂ ತಹಶೀಲ್ದಾರ್ ಆದೇಶದಂತೆ ಗಂಗಾವತಿಯಲ್ಲಿ ವಿದ್ಯುತ್ ದೀಪಗಳನ್ನು ತೆರವುಗೊಳಿಸಲು ಮುಂದಾದರೇ, ಗಂಗಾವತಿಗೆ ನಾವೇ ಬಂದು ವಿದ್ಯುತ್ ದೀಪಗಳನ್ನು ಅಳವಡಿಸಬೇಕಾಗುತ್ತದೆ ಎಚ್ಚರ!!ʼವೆಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.