PF ಖಾತೆದಾರರು ಗಮನಿಸಿ ; ನೌಕರಿ ಬಿಡುವಾಗ ಈ ಕೆಲಸ ಮಾಡದಿದ್ದಲ್ಲಿ ಪಿಎಫ್ ಹಣ ವರ್ಗಾವಣೆ ಸಾಧ್ಯವಿಲ್ಲ

ಈ ಹಿಂದೆ, ಉದ್ಯೋಗಿಯು ಕಂಪನಿಗೆ ಸೇರಿದ ದಿನಾಂಕ  ಮತ್ತು ಕೆಲಸ ಬಿಟ್ಟ ದಿನಾಂಕವನ್ನು ಅಪ್ ಡೇಟ್ ಮಾಡುವ ಹಕ್ಕು ಕೇವಲ  ಉದ್ಯೋಗದಾತರ ಬಳಿ ಮಾತ್ರ ಇತ್ತು. ಹೀಗಾಗಿ, ಕಂಪನಿ ಈ ಎರಡು ವಿಷಯಗಳನ್ನು ಅಪ್ ಡೇಟ್ ಮಾಡದೇ ಹೋದಲ್ಲಿ, ನೌಕರರಿಗೆ ಇಪಿಎಫ್ ಹಣ ಹಿಂಪಡೆಯುವುದು, ಟ್ರಾನ್ಸ್ಫರ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.

Written by - Ranjitha R K | Last Updated : May 19, 2021, 11:37 AM IST
  • ಈ ಮೊದಲು ಕೇವಲ ಕಂಪನಿ ಮಾತ್ರ ಈ ದಿನಾಂಕವನ್ನು ಅಪ್ ಡೇಟ್ ಮಾಡಬಹುದಿತ್ತು
  • ಈಗ ನೌಕರರು ಸಹ ಇದನ್ನು ಅಪ್ ಡೇಟ್ ಮಾಡಬಹುದು
  • ಇಪಿಎಫ್‌ಒನಲ್ಲಿ ಡೇಟ್ ಆಫ್ ಎಕ್ಸಿಟ್ ಅಪ್ ಡೇಟ್ ಮಾಡುವುದು ಹೇಗೆ ತಿಳಿಯಿರಿ
PF ಖಾತೆದಾರರು ಗಮನಿಸಿ ; ನೌಕರಿ  ಬಿಡುವಾಗ ಈ ಕೆಲಸ ಮಾಡದಿದ್ದಲ್ಲಿ ಪಿಎಫ್ ಹಣ ವರ್ಗಾವಣೆ ಸಾಧ್ಯವಿಲ್ಲ title=
ಇಪಿಎಫ್‌ಒನಲ್ಲಿ ಡೇಟ್ ಆಫ್ ಎಕ್ಸಿಟ್ ಅಪ್ ಡೇಟ್ ಮಾಡುವುದು ಹೇಗೆ ತಿಳಿಯಿರಿ (file photo)

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಕಾಲಕಾಲಕ್ಕೆ ತನ್ನ ನಿಯಮಗಳನ್ನು ಬದಲಾಯಿಸುತ್ತದೆ. ಕೆಲವೊಮ್ಮೆ ನೌಕರಿಯನ್ನು ಬದಲಾಯಿಸುವಾಗ, ಪಿಎಫ್ (PF) ಖಾತೆಯನ್ನು ವರ್ಗಾಯಿಸುವುದನ್ನು ಮರೆತುಬಿಡುತ್ತೇವೆ. ಇನ್ನು ಕೆಲವೊಮ್ಮೆ ಹಳೆಯ ಕಂಪನಿಯು, EPFO ಸಿಸ್ಟಮ್ ನಲ್ಲಿ ಕೆಲಸ ಬಿಟ್ಟ ದಿನಾಂಕ ಅಂದರೆ Date of Exit ನಮೂದಿಸುವುದನ್ನು ಮರೆತು ಬಿಡುತ್ತದೆ. ಹೀಗೆ ಆದಲ್ಲಿ, ಪಿಎಫ್ ಬ್ಯಾಲೆನ್ಸ್ ಅನ್ನು ವರ್ಗಾವಣೆಯಿಸುವುದು ಸಾಧ್ಯವಾಗುವುದಿಲ್ಲ. 

ಈ ಮೊದಲು ಕೇವಲ ಕಂಪನಿ  ಮಾತ್ರ ಈ ದಿನಾಂಕವನ್ನು ಅಪ್ ಡೇಟ್ ಮಾಡಬಹುದಿತ್ತು : 
ಈ ಹಿಂದೆ, ಉದ್ಯೋಗಿಯು ಕಂಪನಿಗೆ ಸೇರಿದ ದಿನಾಂಕ (Date of Joining) ಮತ್ತು ಕೆಲಸ ಬಿಟ್ಟ ದಿನಾಂಕವನ್ನು (Date of Exit) ಅಪ್ ಡೇಟ್ ಮಾಡುವ ಹಕ್ಕು ಕೇವಲ  ಉದ್ಯೋಗದಾತರ  (Employer) ಬಳಿ ಮಾತ್ರ ಇತ್ತು. ಹೀಗಾಗಿ, ಕಂಪನಿ ಈ ಎರಡು ವಿಷಯಗಳನ್ನು ಅಪ್ ಡೇಟ್ ಮಾಡದೇ ಹೋದಲ್ಲಿ, ನೌಕರರಿಗೆ ಇಪಿಎಫ್ (EPF) ಹಣ ಹಿಂಪಡೆಯುವುದು, ಟ್ರಾನ್ಸ್ಫರ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. 

ಇದನ್ನೂ ಓದಿ : RBI ನಿರ್ದೇಶನ ಪಾಲಿಸದ ಮತ್ತೊಂದು ಬ್ಯಾಂಕ್ ಮೇಲೆ ಬಿತ್ತು ದಂಡ; ಗ್ರಾಹಕರ ಮೇಲೆ ಬೀಳಲಿದೆಯೇ ಹೊರೆ

ಈಗ ನೌಕರರು ಸಹ ಇದನ್ನು ಅಪ್ ಡೇಟ್ ಮಾಡಬಹುದು : 
ಈಗ  EPFO  ತನ್ನ ಸದಸ್ಯರಿಗೆ ಇಪಿಎಫ್‌ಒ ಸಿಸ್ಟಮ್ ನಲ್ಲಿ ಕೆಲಸವನ್ನು ಬಿಡುವ ದಿನಾಂಕವನ್ನು ನಮೂದಿಸುವ ಹಕ್ಕನ್ನು ನೀಡಿದೆ. ಅಂದರೆ ಈಗ ನೌಕರ ಕೆಲಸ ಬಿಡುವಾಗ ಅಪ್ಡೇಟ್ ಮಾಡಲು ಕಂಪನಿಯನ್ನೇ ಅವಲಂಬಿಸಬೇಕಾಗಿಲ್ಲ. ಸರಳ ಪ್ರಕ್ರಿಯೆಯ ಮೂಲಕ ಡೇಟ್ ಆಫ್ ಎಕ್ಸಿಟ್ ಅನ್ನು ಅಪ್ ಡೇಟ್ ಮಾಡಿಬಿಡಬಹುದು.  

ಇಪಿಎಫ್‌ಒನಲ್ಲಿ ಡೇಟ್ ಆಫ್ ಎಕ್ಸಿಟ್ ಅಪ್ ಡೇಟ್ ಮಾಡುವುದು ಹೇಗೆ ? 
1. https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಿ 
2. UAN, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಹಾಕಿ ಲಾಗ್ ಇನ್ ಮಾಡಿ
3. ಹೊಸ ಪುಟ ತೆರೆಯುತ್ತದೆ. ಈಗ ಮೇಲ್ಭಾಗದಲ್ಲಿರುವ 'Manage' ಕ್ಲಿಕ್ ಮಾಡಿ.
4. ನಂತರ Mark Exit  ಮೇಲೆ ಕ್ಲಿಕ್ ಮಾಡಿ
5. ಡ್ರಾಪ್‌ಡೌನ್‌ನಲ್ಲಿ Select Employment  ಕಾಣಿಸುತ್ತದೆ, ಅದರಲ್ಲಿ ನಿಮ್ಮ UAN ಗೆ ಲಿಂಕ್ ಮಾಡಲಾದ ಹಳೆಯ ಪಿಎಫ್ ಖಾತೆ ಸಂಖ್ಯೆಯನ್ನು ಆರಿಸಿ.
6. ಈಗ ಆ ಖಾತೆ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿವರಗಳು ಕಾಣಿಸುತ್ತದೆ 
7. ಇಲ್ಲಿ ಕೆಲಸ ತೊರೆಯುವ ದಿನಾಂಕ ಮತ್ತು ಕಾರಣವನ್ನು ನಮೂದಿಸಿ. 
8. ಇದರ ನಂತರ,‘Request OTP’  ಕ್ಲಿಕ್ ಮಾಡಿ.
9. ಒಟಿಪಿ ನಮೂದಿಸಿ ಮತ್ತು ಚೆಕ್ ಬಾಕ್ಸ್ ಕ್ಲಿಕ್ ಮಾಡಿ
10. Update  ಮತ್ತು OK ಕ್ಲಿಕ್ ಮಾಡಿ 

ಇದನ್ನೂ ಓದಿ : SBI New Timing: ಎಸ್‌ಬಿಐ ಬ್ಯಾಂಕ್ Open/Close ಸಮಯ ಬದಲಾವಣೆ, ಬ್ಯಾಂಕ್‌ಗೆ ತೆರಳುವ ಮುನ್ನ ಪರಿಶೀಲಿಸಿ

2 ತಿಂಗಳ ನಂತರ ಅಪ್ ಡೇಟ್ ಆಗುತ್ತದೆ : 
ಈ ದಿನಾಂಕವನ್ನು ಅಪ್ ಡೇಟ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಯಾಕೆಂದರೆ ಒಂದು ಸಲ ಅಪ್ ಡೇಟ್ ಮಾಡಿದ ಮೇಲೆ ಅದನ್ನು ಬದಲಿಸಲು ಆಗುವುದಿಲ್ಲ. ನೀವು ಕೆಲಸ ಬಿಟ್ಟ ಮೇಲೆ  ಡೇಟ್ ಅಪ್ ಎಕ್ಸಿಟ್ update ಮಾಡಲು 2 ತಿಂಗಳು ಕಾಯಬೇಕಾಗುತ್ತದೆ. ಯಾಕೆಂದರೆ ಪಿಎಫ್ ನಲ್ಲಿ ಉದ್ಯೋಗದಾತರು ನೀಡಿದ ಕೊನೆಯ ಯೋಗದಾನದ 2 ತಿಂಗಳ ನಂತರವೇ ಅಪ್ ಡೇಟ್ ಆಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News