RBI ನಿರ್ದೇಶನ ಪಾಲಿಸದ ಮತ್ತೊಂದು ಬ್ಯಾಂಕ್ ಮೇಲೆ ಬಿತ್ತು ದಂಡ; ಗ್ರಾಹಕರ ಮೇಲೆ ಬೀಳಲಿದೆಯೇ ಹೊರೆ

ರೆಗ್ಯುಲೇಟರಿ ಕಾಂಪ್ಲಿಯನ್ಸ್ ನ ಕೊರತೆಯಿಂದಾಗಿ ಬ್ಯಾಂಕ್  ಮೇಲೆ ದಂಡ ವಿಧಿಸಲಾಗಿದೆ ಎಂದು ಆರ್ ಬಿಐ ಹೇಳಿದೆ.  ಮಾರ್ಚ್ 31, 2019 ರಂತೆ ಸಹಕಾರಿ ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಆಧರಿಸಿದ ನಿರೀಕ್ಷಣಾ ವರದಿಯಲ್ಲಿ ರಿಸರ್ವ್ ಬ್ಯಾಂಕ್  ಹೊರಡಿಸಿದ ಕೆಲವು ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿರುವ ಅಂಶ ಬೆಳಕಿಗೆ ಬಂದಿದೆ.

Written by - Ranjitha R K | Last Updated : May 19, 2021, 10:46 AM IST
  • ಮತ್ತೊಂದು ಸಹಕಾರಿ ಬ್ಯಾಂಕ್ ಗೆ ಬಿತ್ತು ದಂಡ
  • ಸಹಕಾರಿ ಬ್ಯಾಂಕ್ ಮೇಲೆ ಒಂದು ಲಕ್ಷ ರೂಪಾಯಿಗಳ ದಂಡ
  • ಆರ್ ಬಿಐ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕ್ರಮ
RBI ನಿರ್ದೇಶನ ಪಾಲಿಸದ ಮತ್ತೊಂದು ಬ್ಯಾಂಕ್ ಮೇಲೆ ಬಿತ್ತು ದಂಡ; ಗ್ರಾಹಕರ ಮೇಲೆ ಬೀಳಲಿದೆಯೇ ಹೊರೆ title=
ಸಹಕಾರಿ ಬ್ಯಾಂಕ್ ಮೇಲೆ ಒಂದು ಲಕ್ಷ ರೂಪಾಯಿಗಳ ದಂಡ (file photo)

ನವದೆಹಲಿ :  ರಿಸರ್ವ್ ಬ್ಯಾಂಕ್ ಆಫ್ (RBI) ಇಂಡಿಯ ಮತ್ತೊಂದು ಸಹಕಾರಿ ಬ್ಯಾಂಕ್‌ ಮೇಲೆ ದಂಡ ವಿಧಿಸಿದೆ. ಮಹಾರಾಷ್ಟ್ರದ ಪ್ರಿಯದರ್ಶಿನಿ ಮಹಿಳಾ ನಾಗರಿ ಸಹಕಾರಿ ಬ್ಯಾಂಕ್ (Priyadarshini Mahila Nagari Sahakari Bank) ಮೇಲೆ  ಆರ್‌ಬಿಐ ಒಂದು ಲಕ್ಷ ರೂ ದಂಡ ವಿಧಿಸಿದೆ. ಸುಪರ್ವೈಸರ್ ಆಕ್ಶನ್ ಫ್ರೇಮ್ ವರ್ಕ್ (SAF)  ಜಾರಿ ಮಾಡಿರುವ ನಿರ್ದೇಶನಗಳನ್ನು ಬ್ಯಾಂಕ್ ಪಾಲಿಸದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. 

ನಿಯಮಗಳನ್ನು ಉಲ್ಲಂಘಿಸಿದ ಸಹಕಾರಿ ಬ್ಯಾಂಕ್ : 
ರೆಗ್ಯುಲೇಟರಿ ಕಾಂಪ್ಲಿಯನ್ಸ್ ನ ಕೊರತೆಯಿಂದಾಗಿ ಬ್ಯಾಂಕ್ (Bank) ಮೇಲೆ ದಂಡ ವಿಧಿಸಲಾಗಿದೆ ಎಂದು ಆರ್ ಬಿಐ ಹೇಳಿದೆ.  ಮಾರ್ಚ್ 31, 2019 ರಂತೆ ಸಹಕಾರಿ ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಆಧರಿಸಿದ ನಿರೀಕ್ಷಣಾ ವರದಿಯಲ್ಲಿ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ ಕೆಲವು ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕೋರಿ ಬ್ಯಾಂಕ್ ಗೆ ನೊಟೀಸ್ (Notice) ನೀಡಲಾಗಿದೆ. ನಿಯಮ ಉಲ್ಲಂಘಿಸಿರುವ ಕಾರಣ ಬ್ಯಾಂಕ್ ಮೇಲೆ ಯಾಕೆ ದಂಡ ವಿಧಿಸಬಾರದು ಎನ್ನುವುದನ್ನು ಆ ನೊಟೀಸ್ ನಲ್ಲಿ ಕೇಳಲಾಗಿತ್ತು. ಆದರೆ, ಈ ನೊಟೀಸ್ ಗೆ ಬ್ಯಾಂಕ್ ನೀಡಿರುವ ಉತ್ತರ ತೃಪ್ತಿದಾಯಕವಾಗಿರದ ಕಾರಣ ದಂಡ ವಿಧಿಸಲಾಗಿದೆ. 

ಇದನ್ನೂ ಓದಿ : SBI New Timing: ಎಸ್‌ಬಿಐ ಬ್ಯಾಂಕ್ Open/Close ಸಮಯ ಬದಲಾವಣೆ, ಬ್ಯಾಂಕ್‌ಗೆ ತೆರಳುವ ಮುನ್ನ ಪರಿಶೀಲಿಸಿ

ಗ್ರಾಹಕರ ಮೇಲೆ ಏನು ಪರಿಣಾಮ ಬೀರಲಿದೆಯೇ? 
ಆದರೆ ರಿಸರ್ವ್ ಬ್ಯಾಂಕಿನ (Reserve Bank of India) ಈ ಕ್ರಮವು ಬ್ಯಾಂಕ್ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆರ್ ಬಿಐ ನಿಯಮ ಉಲ್ಲಂಘಿಸದ ಬ್ಯಾಂಕ್ ಮೇಲೆ ಕ್ರಮ ಕೈಗೊಂಡಿದೆಯೇ ಹೊರತು ಗ್ರಾಹಕರ (Customers) ವಿರುದ್ಧ ಅಲ್ಲ. ಅಲ್ಲದೆ, ಗ್ರಾಹಕರಿಗೆ ಸಿಗಬೇಕಾಗಿರುವ ಯಾವ ಸೌಲಭ್ಯಗಳ ಮೇಲೂ ಆರ್ ಬಿಐ ನಿರ್ಬಂಧ ಹೇರಿಲ್ಲ. 

ಇತರ ಬ್ಯಾಂಕುಗಳಿಗೂ ಬಿದ್ದಿತ್ತು ದಂಡ : 
ರಿಸರ್ವ್ ಬ್ಯಾಂಕ್ ಕ್ರಮ ಕೈಗೊಂಡ ಮೊದಲ ಸಹಕಾರಿ ಬ್ಯಾಂಕ್ ಇದಲ್ಲ. ಈ ಹಿಂದೆ ಶಿಮ್ಲಾ ಮೂಲದ ಹಿಮಾಚಲ ಪ್ರದೇಶ ರಾಜ್ಯ ಸಹಕಾರಿ ಬ್ಯಾಂಕ್‌ಗೆ (Himachal Pradesh State Cooperative Bank)  40 ಲಕ್ಷ ರೂ ಹಾಕಲಾಗಿತ್ತು. ನಬಾರ್ಡ್ (NABARD) ಹೊರಡಿಸಿದ್ದ ಕೆಲವು ನಿಯಂತ್ರಕ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿತ್ತು. ಅಲ್ಲದೆ ಖಾಸಗೀ ವಲಯದ ದೊಡ್ಡ ಬ್ಯಾಂಕ್ ಆಗಿರುವ  ICICI Bank ಮೇಲೂ 3 ಕೋಟಿಗಳ ದಂಡ ವಿಧಿಸಲಾಗಿತ್ತು. 

ಇದನ್ನೂ ಓದಿ : Ather Energy ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಸೋರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News