EPF Salary Limit Update: ವೇತನದ ಮಿತಿ 15 ಸಾವಿರದಿಂದ 21000 ಕ್ಕೆ ಹೆಚ್ಚಳ ? ಸರ್ಕಾರದಿಂದ ನಡೆಯುತ್ತಿದೆ ವಿಚಾರ ವಿಮರ್ಶೆ

EPF Salary Limit Update: ಉದ್ಯೋಗಿಗಳ ವೇತನ ಮಿತಿ ಹೆಚ್ಚಾಗಬಹುದು. ವಾಸ್ತವವಾಗಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಡಿಯಲ್ಲಿ ವೇತನ ಮಿತಿಯನ್ನು ಹೆಚ್ಚಿಸಲು ಉನ್ನತ ಮಟ್ಟದ ಸಮಿತಿಯು ಪ್ರಸ್ತಾಪಿಸಿದೆ. 

Written by - Ranjitha R K | Last Updated : Apr 18, 2022, 01:19 PM IST
  • ವೇತನ ಮಿತಿಯನ್ನು ತಿಂಗಳಿಗೆ 15 ಸಾವಿರದಿಂದ 21 ಸಾವಿರಕ್ಕೆ ಹೆಚ್ಚಿಸಳು ಪ್ರಸ್ತಾಪ
  • ಪ್ರಯೋಜನ ಪಡೆಯಲಿದ್ದಾರೆ ಸುಮಾರು 7.5 ಲಕ್ಷ ಹೆಚ್ಚುವರಿ ಕಾರ್ಮಿಕರು
  • ಯಾರಿಗೆ ಸಿಗಲಿದೆ ಪ್ರಯೋಜನ ?
EPF Salary Limit Update: ವೇತನದ ಮಿತಿ 15 ಸಾವಿರದಿಂದ 21000 ಕ್ಕೆ ಹೆಚ್ಚಳ ? ಸರ್ಕಾರದಿಂದ ನಡೆಯುತ್ತಿದೆ ವಿಚಾರ ವಿಮರ್ಶೆ   title=
EPF Salary Limit Update (file photo)

ಬೆಂಗಳೂರು :  EPF Salary Limit Update: ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಇದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಡಿಯಲ್ಲಿ ವೇತನ ಮಿತಿಯನ್ನು ಹೆಚ್ಚಿಸಲು ಉನ್ನತ ಮಟ್ಟದ ಸಮಿತಿಯು ಪ್ರಸ್ತಾಪಿಸಿದೆ. ವೇತನ ಮಿತಿಯನ್ನು ತಿಂಗಳಿಗೆ 15 ಸಾವಿರದಿಂದ 21 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸಮಿತಿ ಹೇಳಿದೆ. ಸರ್ಕಾರ ಇದನ್ನು ಪರಿಗಣಿಸುತ್ತಿದೆ. 

ಯಾರಿಗೆ ಲಾಭ ಸಿಗುತ್ತದೆ?
ಈ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಿದರೆ, ಸುಮಾರು 7.5 ಲಕ್ಷ ಹೆಚ್ಚುವರಿ ಕಾರ್ಮಿಕರು ಪ್ರಯೋಜನ ಪಡೆಯುತ್ತಾರೆ . ವರದಿಯ ಪ್ರಕಾರ, “ಈ ಸಲಹೆಯನ್ನು ಇಪಿಎಫ್‌ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಅಂಗೀಕರಿಸಿದರೆ, ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಕ್ಷಣವೇ ಹೊರಲು ಸಿದ್ಧರಿರುವ ಉದ್ಯೋಗದಾತರಿಗೆ ಇದು ಪರಿಹಾರವನ್ನು ನೀಡುತ್ತದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು,  ಹೇಳಿದ್ದಾರೆ. 

ಇದನ್ನೂ  ಓದಿ : SBI Hikes MCLR: ಎಸ್‌ಬಿಐ ಗ್ರಾಹಕರಿಗೆ ಶಾಕಿಂಗ್ ಸುದ್ದಿ .! ಹೆಚ್ಚಾಗಲಿದೆ ಸಾಲದ ಇಎಂಐ

ಸರ್ಕಾರದ ಬೊಕ್ಕಸಕ್ಕೆ ಪರಿಹಾರ :
ವಾಸ್ತವವಾಗಿ, ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಹದಗೆಡುತ್ತಿರುವ ಬಜೆಟ್ ಅನ್ನು ಉಲ್ಲೇಖಿಸಿ ಉದ್ಯೋಗದಾತರು ಈ ಹೆಚ್ಚಳಕ್ಕೆ ಒತ್ತಾಯಿಸಿದ್ದರು. ಪ್ರಸ್ತಾವನೆಯನ್ನು ಅಂಗೀಕರಿಸಿದರೆ, ಕೇಂದ್ರ ಸರ್ಕಾರವು ಇಪಿಎಫ್‌ಒದ ನೌಕರರ ಪಿಂಚಣಿ ಯೋಜನೆಗೆ ಪ್ರಸ್ತುತ ಪ್ರತಿ ವರ್ಷ ಸುಮಾರು 6,750 ಕೋಟಿ ರೂ.ಗಳನ್ನು ಪಾವತಿಸುವುದರಿಂದ ಬೊಕ್ಕಸಕ್ಕೂ ಪರಿಹಾರ ಸಿಗುತ್ತದೆ. ಈ ಯೋಜನೆಗೆ EPFO ​​ಚಂದಾದಾರರ ಒಟ್ಟು ಮೂಲ ವೇತನದ 1.16 ಪ್ರತಿಶತವನ್ನು ಸರ್ಕಾರವು ಕೊಡುಗೆ ನೀಡುತ್ತದೆ. 

ಇಪಿಎಫ್‌ಒ ಮತ್ತು ಇಎಸ್‌ಐಸಿ ಎರಡರ ಅಡಿಯಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಲು ಅದೇ ಮಾನದಂಡಗಳನ್ನು ಅನುಸರಿಸಬೇಕು ಎಂದು ಇಪಿಎಫ್‌ಒ ಒಳಗೆ ಸಾಮಾನ್ಯ ಒಮ್ಮತವಿದೆ ಎಂದು ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯಲ್ಲಿರುವ ಕೆಇ ರಘುನಾಥನ್,  ಹೇಳಿದರು. ಎರಡೂ ಯೋಜನೆಗಳ ಅಡಿಯಲ್ಲಿನ ಮಾನದಂಡಗಳಲ್ಲಿನ ವ್ಯತ್ಯಾಸವು ಕಾರ್ಮಿಕರ ಸಾಮಾಜಿಕ ಭದ್ರತೆ ಪ್ರಯೋಜನಗಳಿಂದ ವಂಚಿತವಾಗಬಾರದು. 

ಇದನ್ನೂ  ಓದಿ : Bank Opening Hours Changed: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ ! ಬ್ಯಾಂಕ್ ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಹೊಸ ಟೈಮಿಂಗ್

EPS ಗೆ ಸಂಬಂಧಿಸಿದ ನಿಯಮಗಳೇನು?
ನಾವು ಕೆಲಸವನ್ನು ಪ್ರಾರಂಭಿಸಿದಾಗ ಮತ್ತು ಇಪಿಎಫ್‌ನ ಸದಸ್ಯರಾದಾಗ, ಇಪಿಎಸ್‌ನ ಸದಸ್ಯರೂ ಆಗುತ್ತೇವೆ. ಉದ್ಯೋಗಿ ತನ್ನ ಸಂಬಳದ 12% ಅನ್ನು ಇಪಿಎಫ್‌ನಲ್ಲಿ ನೀಡುತ್ತಾನೆ. ಅದೇ ಮೊತ್ತವನ್ನು ಅವನ ಕಂಪನಿಯು ನೀಡುತ್ತದೆ. ಆದರೆ ಅದರ ಒಂದು ಭಾಗವು 8.33 ಪ್ರತಿಶತವೂ ಇಪಿಎಸ್‌ಗೆ ಹೋಗುತ್ತದೆ. ನಾವು ಮೇಲೆ ತಿಳಿಸಿದಂತೆ ಪ್ರಸ್ತುತ ಗರಿಷ್ಠ ಪಿಂಚಣಿ ವೇತನ ಕೇವಲ 15 ಸಾವಿರ ರೂಪಾಯಿಗಳು. ಅಂದರೆ ಪ್ರತಿ ತಿಂಗಳು ಪಿಂಚಣಿ ಪಾಲು ಗರಿಷ್ಠ 1250 ರೂ. ಆಗಿರುತ್ತದೆ. 

ಉದ್ಯೋಗಿ ನಿವೃತ್ತರಾದಾಗಲೂ, ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನವನ್ನು 15 ಸಾವಿರ ರೂ ಎಂದು ಪರಿಗಣಿಸಲಾಗುತ್ತದೆ, ಇದರ ಪ್ರಕಾರ, ಇಪಿಎಸ್ ಅಡಿಯಲ್ಲಿ ಉದ್ಯೋಗಿಗೆ ಗರಿಷ್ಠ ಪಿಂಚಣಿ 7,500 ರೂ.

ಪಿಂಚಣಿಯನ್ನು ಈ ರೀತಿ ಲೆಕ್ಕ ಹಾಕಲಾಗುತ್ತದೆ:
ನೀವು ಸೆಪ್ಟೆಂಬರ್ 1, 2014 ರ ಮೊದಲು ಇಪಿಎಸ್‌ಗೆ ಕೊಡುಗೆ ನೀಡಲು ಪ್ರಾರಂಭಿಸಿದ್ದರೆ, ನಿಮಗೆ ಪಿಂಚಣಿ ಕೊಡುಗೆಗಾಗಿ ಮಾಸಿಕ ವೇತನದ ಗರಿಷ್ಠ ಮಿತಿ ರೂ.6500 ಆಗಿರುತ್ತದೆ ಎಂಬುದನ್ನು ಗಮನಿಸಬೇಕು. ನೀವು ಸೆಪ್ಟೆಂಬರ್ 1, 2014 ರ ನಂತರ ಇಪಿಎಸ್‌ಗೆ ಸೇರ್ಪಡೆಗೊಂಡಿದ್ದರೆ, ಗರಿಷ್ಠ ವೇತನ ಮಿತಿ 15,000 ಆಗಿರುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News