Edible Oil Price: ಖಾದ್ಯ ತೈಲದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಸಾಧ್ಯತೆ

ಹೊರ ದೇಶಗಳಲ್ಲಿ ಖಾದ್ಯ ತೈಲದ ಬೆಲೆ ಭಾರೀ ಇಳಿಕೆಯಾಗಿದೆ. ಸರ್ಕಾರ ಆಮದು ಸುಂಕವನ್ನೂ ಸಡಿಲಿಸಿದೆ. ಹೀಗಿದ್ದರೂ ಖಾದ್ಯ ತೈಲ ಬೆಲೆಯಲ್ಲಿ ಗ್ರಾಹಕರಿಗೆ ಪರಿಹಾರ ಸಿಕ್ಕಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ತೈಲ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಾಣಬಹುದಾಗಿದೆ.

Written by - Puttaraj K Alur | Last Updated : Aug 21, 2022, 07:23 AM IST
  • ಜಾಗತಿಕ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ
  • ಭಾರತೀಯ ಗ್ರಾಹಕರಿಗೆ ಖಾದ್ಯ ತೈಲ ದರ ಕುಸಿತದ ಲಾಭ ಪಡೆಯಲು ಸಾಧ್ಯವಾಗಿಲ್ಲ
  • ಶೀಘ್ರವೇ ಖಾದ್ಯ ತೈಲ ದರ ಇಳಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಬಹುದು
Edible Oil Price: ಖಾದ್ಯ ತೈಲದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಸಾಧ್ಯತೆ   title=
ಖಾದ್ಯ ತೈಲ ದರ ಇಳಿಕೆ ಸಾಧ್ಯತೆ

ನವದೆಹಲಿ: ಹಣದುಬ್ಬರದಿಂದ ಕಂಗೆಟ್ಟಿರುವ ಜನರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಖಾದ್ಯ ತೈಲ ಬೆಲೆಯಲ್ಲಿ ಸ್ವಲ್ಪ ಇಳಿಕೆ ಸಾಧ್ಯತೆ ಇದೆ. ಏಕೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಭಾರತದಲ್ಲಿ ಗ್ರಾಹಕರು ಇನ್ನೂ ಇದರ ಪ್ರಯೋಜನ ಪಡೆದಿಲ್ಲ. ತಾಳೆ ಎಣ್ಣೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಇದರಿಂದಾಗಿ ಎಲ್ಲಾ ರೀತಿಯ ಖಾದ್ಯ ಎಣ್ಣೆಯ ಬೆಲೆಯಲ್ಲಿ ಇಳಿಕೆಯಾಗಿದೆ.

ಗ್ರಾಹಕರಿಗೆ ಪ್ರಯೋಜನ ಲಭಿಸಿಲ್ಲ

ಜಾಗತಿಕವಾಗಿ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ, ಆದರೆ ಅದಕ್ಕೆ ಹೋಲಿಸಿದರೆ ಭಾರತೀಯ ಗ್ರಾಹಕರಿಗೆ ಆ ಬೆಲೆ ಕುಸಿತದ ಲಾಭ ಪಡೆಯಲು ಸಾಧ್ಯವಾಗಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಅಗತ್ಯಕ್ಕಿಂತ ಹೆಚ್ಚು ಇರಿಸಲಾಗಿದೆ. ಎಂಆರ್‌ಪಿ ನೆಪದಲ್ಲಿ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ವಿದೇಶದಲ್ಲಿ ಕಡಿಮೆಯಾದ ಬೆಲೆಯಲ್ಲಿಯೇ ಭಾರತದಲ್ಲಿ ಖಾದ್ಯ ತೈಲ ಲಭಿಸಿದರೆ ಗ್ರಾಹಕರಿಗೆ ಅನುಕೂಲವಾಗಲಿದೆ. ಆಗ ಪ್ರಸ್ತುತ ದರಕ್ಕಿಂತಲೂ ತೈಲ ಬೆಲೆ ಮತ್ತಷ್ಟು ಕುಸಿತವಾಗಬಹುದು.

ಇದನ್ನೂ ಓದಿ: Good News: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ನಿಯಮ ಬದಲಾವಣೆಯಿಂದ ಖಾತೆಗೆ ಸಂಪೂರ್ಣ ವೇತನ ಬರಲಿದೆ

ಭಾರತೀಯ ರೈತರು ಸಮಸ್ಯೆ ಎದುರಿಸಬಹುದು

ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ಬೆಲೆ ಎಷ್ಟು ಕುಸಿದಿದೆ ಎಂದರೆ ಅದರ ಮುಂದೆ ಖಾದ್ಯ ತೈಲವೂ ಉಳಿದಿಲ್ಲ. ತಾಳೆ ಎಣ್ಣೆ ಇದೇ ರೀತಿ ಅಗ್ಗವಾಗಿ ಉಳಿದರೆ ಸೋಯಾಬೀನ್, ಶೇಂಗಾ, ಹತ್ತಿಬೀಜ ಬೆಳೆಗಳಿಗೆ ಸಮಸ್ಯೆ ಎದುರಾಗಬಹುದು ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. ಏಕೆಂದರೆ ತಾಳೆ ಎಣ್ಣೆ ಮಾರುಕಟ್ಟೆಯಲ್ಲಿ ಅಗ್ಗವಾದರೆ, ಇತರ ತೈಲಗಳ ಬೆಲೆಗಳ ಮೇಲೆ ಅದು ನೇರ ಪರಿಣಾಮ ಬೀರುತ್ತವೆ. ಇದು ರೈತರಿಗೆ ತೊಂದರೆ ಉಂಟುಮಾಡುತ್ತದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ.

ಹಬ್ಬ-ಹರಿದಿನಗಳಲ್ಲಿ ಬೆಲೆ ಏರಿಕೆಯಾಗುವುದಿಲ್ಲ 

ಹಬ್ಬ-ಹರಿದಿನಗಳಲ್ಲಿ ಬೆಲೆ ಏರಿಕೆಯಾಗಬಾರದು ಎಂಬುದು ಸರ್ಕಾರದ ಗುರಿಯಾಗಿದ್ದು, ಇದಕ್ಕಾಗಿ ಸರ್ಕಾರ ಹಲವು ರೀತಿ ಕೆಲಸ ಮಾಡುತ್ತಿದೆ. ಆಮದು ಸುಂಕವನ್ನು ಕಡಿಮೆ ಮಾಡುವುದಲ್ಲದೆ, ಮಾರುಕಟ್ಟೆಯಲ್ಲಿನ ಸಾಕಷ್ಟು ದಾಸ್ತಾನಿನ ಮೇಲೆ ಸರ್ಕಾರ ಕಣ್ಣಿಟ್ಟಿದೆ. ಗೋಧಿಯ ಆಮದಿನ ಮೇಲಿನ ಸುಂಕವನ್ನು ಕಡಿಮೆ ಮಾಡಲು ಅಥವಾ ತೆಗೆದುಹಾಕಲು ಸಹ ಯೋಚಿಸುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Yamaha RX100: ಮತ್ತೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಿಡುಗಡೆಯಾಗುತ್ತಿದೆ ಈ ಜನಪ್ರೀಯ ಬೈಕ್! ಇಲ್ಲಿದೆ ಕಂಪನಿಯ ಪ್ಲಾನಿಂಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News