ನವದೆಹಲಿ : ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ. ಇದು ವಿಶ್ವದ ಅತಿದೊಡ್ಡ ರೈಲು ಜಾಲದಲ್ಲಿ ಒಂದಾಗಿದೆ. ದೂರದ ಪ್ರಯಾಣಕ್ಕೆ ಭಾರತೀಯ ರೈಲ್ವೆ ಅತ್ಯಂತ ಸುಲಭ ಮತ್ತು ಸುರಕ್ಷಿತ ಮಾರ್ಗ ವಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರಿಗೆ ಪ್ರಯಾಣದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲವು ರೈಲ್ವೆ ನಿಯಮಗಳನ್ನು ಬದಲಾಯಿಸಿದೆ.
ಟ್ವೀಟ್ ಮೂಲಕ ಮಾಹಿತಿ ನೀಡಿದ ಐಆರ್‌ಸಿಟಿಸಿ :
ಹಲವು ಬಾರಿ ಪ್ರಯಾಣಿಕರು ರೈಲು ಟಿಕೆಟ್ ಅನ್ನು ಬುಕ್ ಮಾಡಿದ ನಂತರ ಅದನ್ನು ರದ್ದುಗೊಳಿಸುತ್ತಾರೆ. ಹಾಗಾದಾಗ ರೈಲ್ವೆ ಕಡೆಯಿಂದ ಸ್ವಲ್ಪ ಹಣವನ್ನು ಕಡಿತಗೊಳಿಸಿ, ಉಳಿದ ಹಣವನ್ನು ಹಿಂದಿರುಗಿಸಲಾಗುತ್ತದೆ. ಅನೇಕ ಬಾರಿ ಚಾರ್ಟ್ ಸಿದ್ಧಪಡಿಸಿದ ನಂತರವೂ ಪ್ರಯಾಣಿಕರು ತುರ್ತು ಪರಿಸ್ಥಿತಿಯಲ್ಲಿ ಟಿಕೆಟ್ ಅನ್ನು ರದ್ದುಗೊಳಿಸಬೇಕಾಗುತ್ತದೆ. ಹೀಗೆ ಚಾರ್ಟ್ ಸಿದ್ಧಪಡಿಸಿದ ನಂತರ ಟಿಕೆಟ್ ಕ್ಯಾನ್ಸಲ್ ಮಾಡಿದರೆ, ನಾವು ಪಾವತಿ ಮಾಡಿರುವ ಹಣ ವಾಪಸ್ ಸಿಗುತ್ತದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರವನ್ನು ಐಆರ್‌ಸಿಟಿಸಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
ಇದನ್ನೂ ಓದಿ : Vegetable Price: ಗಗನಮುಖಿಯಾದ ತರಕಾರಿ ಬೆಲೆ: ಬೀನ್ಸ್, ಟೊಮ್ಯಾಟೋ ದರ ಭಾರೀ ಏರಿಕೆ!
ರಿಫಂಡ್ ಪಡೆಯಬೇಕಾದರೆ ಟಿಡಿಆರ್ ಭರ್ತಿ ಮಾಡಬೇಕಾಗುತ್ತದೆ :
ಟಿಕೆಟ್ ಅನ್ನು ರದ್ದುಗೊಳಿಸಿದಾಗ ರಿಫಂಡ್ ಪಡೆಯಲು, TDR ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದಕ್ಕಾಗಿ ಮೊದಲು ಟಿಡಿಆರ್ ಅನ್ನು ಭರ್ತಿ ಮಾಡಬೇಕು. ಮೊದಲು IRCTC ವೆಬ್‌ಸೈಟ್ www.irctc.co.inಗೆ ಹೋಗಬೇಕು. ಇಲ್ಲಿ My Account ಆಯ್ಕೆಯನ್ನು ಆರಿಸಿ. ಇಲ್ಲಿ ಡ್ರಾಪ್ ಡೌನ್ ಮೆನುವಿನಲ್ಲಿ My Transaction ಎಂಬ ಆಯ್ಕೆಯನ್ನು ಇರುತ್ತದೆ. ಇಲ್ಲಿ ಫೈಲ್ ಟಿಡಿಆರ್ ಸೆಲೆಕ್ಟ್ ಮಾಡಿ ಯಾವುದಾದರೂ ಒಂದು ಆಯ್ಕೆಯನ್ನು ಆರಿಸುವ ಮೂಲಕ ಭರ್ತಿ ಮಾಡಬೇಕು. ಈಗ ಪ್ರಯಾಣಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ. ಇದರ ನಂತರ, PNR, ರೈಲು ಸಂಖ್ಯೆ ಕ್ಯಾಪ್ಚಾ ಇತ್ಯಾದಿಗಳನ್ನು ನಮೂದಿಸುವ ಮೂಲಕ, ರದ್ದುಗೊಳಿಸುವ ನಿಯಮಗಳ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಮಾಡಬೇಕು.
ಈಗ ನಿಮ್ಮ ನೋಂದಾಯಿತ ಮೊಬೈಲ್‌ಗೆ OTP ಬರುತ್ತದೆ. OTP ನಮೂದಿಸುವ ಮೂಲಕ ನಿಮ್ಮ PNR ವಿವರಗಳನ್ನು ಪರಿಶೀಲಿಸಿ. ಈ ಪ್ರಕ್ರಿಯೆಯನ್ನು ಮಾಡಿದ ನಂತರ, ರದ್ದುಗೊಳಿಸಿದ ಟಿಕೆಟ್ ಆಯ್ಕೆಯನ್ನು ಆರಿಸಿ. ಈಗ ರಿಫಂಡ್ ಮಾಡಬೇಕಾಗಿರುವ ಮೊತ್ತವನ್ನು ಪರದೆಯ ಮೇಲೆ ಕಾಣಿಸುತ್ತದೆ. ಟಿಕೆಟ್ ಕಾಯ್ದಿರಿಸುವಾಗ ನೀಡಿರುವ ನಿರ್ದಿಷ್ಟ ಸಂಖ್ಯೆಗೆ ಕನಫರ್ಮೆಶನ್ ಮೆಸೇಜ್ ಬರುತ್ತದೆ.
ಇದನ್ನೂ ಓದಿ : Gold Price Today : ಒಂದೇ ದಿನಕ್ಕೆ ಇಷ್ಟೊಂದು ಅಗ್ಗವಾಯಿತಾ ಚಿನ್ನ? ಬೆಳ್ಳಿ ಮಾತ್ರ ಬಲು ದುಬಾರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.