ಏಕದಿನ ವಿಶ್ವಕಪ್ 2023ರ ತಂಡ ಪ್ರಕಟ: 34 ವರ್ಷದ ಈ ಆಟಗಾರನಿಗೆ ಮಣೆಹಾಕಿದ ಸಮಿತಿ!

ICC World Cup Qualifier 2023: ಜಿಂಬಾಬ್ವೆಯಲ್ಲಿ ನಡೆಯಲಿರುವ ಕ್ವಾಲಿಫೈಯರ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಕೂಡ ಆಡಲಿದೆ. ಜೂನ್ 18 ರಿಂದ ನಡೆಯಲಿರುವ ಈ ಪಂದ್ಯಗಳಲ್ಲಿ 10 ತಂಡಗಳು ಭಾಗವಹಿಸುತ್ತಿವೆ. ಈ ಮಧ್ಯೆ, ಗಾಯಾಳು ಸ್ಪಿನ್ನರ್‌ ಬದಲಿಯಾಗಿ ವೆಸ್ಟ್ ಇಂಡೀಸ್ ಇನ್-ಫಾರ್ಮ್ ಆರಂಭಿಕ ಜಾನ್ಸನ್ ಚಾರ್ಲ್ಸ್ ಅವರನ್ನು ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ತಮ್ಮ ತಂಡದಲ್ಲಿ ಸೇರಿಸಿಕೊಂಡಿದೆ.

Written by - Bhavishya Shetty | Last Updated : Jun 9, 2023, 08:43 AM IST
    • ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ 2023 ಈ ತಿಂಗಳ ಮಧ್ಯದಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿದೆ.
    • ಜಿಂಬಾಬ್ವೆಯಲ್ಲಿ ನಡೆಯಲಿರುವ ಕ್ವಾಲಿಫೈಯರ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಕೂಡ ಆಡಲಿದೆ.
    • ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಈಗ 34 ವರ್ಷದ ಈ ಆಟಗಾರನಿಗೆ ಮಣೆ ಹಾಕಲಾಗಿದೆ
ಏಕದಿನ ವಿಶ್ವಕಪ್ 2023ರ ತಂಡ ಪ್ರಕಟ: 34 ವರ್ಷದ ಈ ಆಟಗಾರನಿಗೆ ಮಣೆಹಾಕಿದ ಸಮಿತಿ!  title=
ODI World Cup 2023

ICC World Cup Qualifier 2023: ಐಸಿಸಿ ಏಕದಿನ ವಿಶ್ವಕಪ್ 2023 ಭಾರತದಲ್ಲಿ ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಈ ದೊಡ್ಡ ಟೂರ್ನಿಗೂ ಮುನ್ನ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ. ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ 2023 ಈ ತಿಂಗಳ ಮಧ್ಯದಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಕಳೆದ ತಿಂಗಳು ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಆಡಲು ತಂಡವನ್ನು ಪ್ರಕಟಿಸಿತ್ತು. ಆದರೆ ಇದೀಗ ವೆಸ್ಟ್ ಇಂಡೀಸ್ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಈಗ 34 ವರ್ಷದ ಈ ಆಟಗಾರನಿಗೆ ಮಣೆ ಹಾಕಲಾಗಿದೆ.

ಇದನ್ನೂ ಓದಿ: Dina Bhavishya: ಇಂದು ಈ ರಾಶಿಯವರ ಮೇಲೆ ಲಕ್ಷ್ಮೀ ಕಟಾಕ್ಷ! ಬೆಳಗಲಿದೆ ಬದುಕು-ಹಣದ ಮಳೆ ಖಂಡಿತ

ಜಿಂಬಾಬ್ವೆಯಲ್ಲಿ ನಡೆಯಲಿರುವ ಕ್ವಾಲಿಫೈಯರ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಕೂಡ ಆಡಲಿದೆ. ಜೂನ್ 18 ರಿಂದ ನಡೆಯಲಿರುವ ಈ ಪಂದ್ಯಗಳಲ್ಲಿ 10 ತಂಡಗಳು ಭಾಗವಹಿಸುತ್ತಿವೆ. ಈ ಮಧ್ಯೆ, ಗಾಯಾಳು ಸ್ಪಿನ್ನರ್‌ ಬದಲಿಯಾಗಿ ವೆಸ್ಟ್ ಇಂಡೀಸ್ ಇನ್-ಫಾರ್ಮ್ ಆರಂಭಿಕ ಜಾನ್ಸನ್ ಚಾರ್ಲ್ಸ್ ಅವರನ್ನು ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ತಮ್ಮ ತಂಡದಲ್ಲಿ ಸೇರಿಸಿಕೊಂಡಿದೆ. ಇವರು 2016ರಲ್ಲಿ ಐಸಿಸಿ ಪುರುಷರ T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು.

ಗುಡಾಕೇಶ್ ಮೋಟಿ ಬದಲಿಗೆ ಅವಕಾಶ:

15 ಸದಸ್ಯರ ತಂಡದಲ್ಲಿ ಗುಡಾಕೇಶ್ ಮೋಟಿ ಬದಲಿಗೆ ಚಾರ್ಲ್ಸ್ ಆಡಲಿದ್ದಾರೆ. ಎಡಗೈ ಸ್ಪಿನ್ನರ್ ಗುಡಾಕೇಶ್ ಮೋಟಿ ಇನ್ನೂ ಕೆಳ ಬೆನ್ನಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಚಾರ್ಲ್ಸ್ ವೆಸ್ಟ್ ಇಂಡೀಸ್‌ ಗಾಗಿ 2012 ರಲ್ಲಿ ಈ ಸ್ವರೂಪದಲ್ಲಿ ಪಾದಾರ್ಪಣೆ ಮಾಡಿದ ನಂತರ 50 ODIಗಳನ್ನು ಆಡಿದ್ದಾರೆ. ಎರಡು ಶತಕಗಳೊಂದಿಗೆ 27.40 ಸರಾಸರಿಯಲ್ಲಿ 1370 ರನ್ ಗಳಿಸಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಹತ್ತು ತಂಡಗಳು ಇರುತ್ತವೆ, ಗ್ರೂಪ್ ಎ ವೆಸ್ಟ್ ಇಂಡೀಸ್, ಜಿಂಬಾಬ್ವೆ, ನೆದರ್ಲ್ಯಾಂಡ್ಸ್, ನೇಪಾಳ ಮತ್ತು ಯುಎಸ್ಎಗಳನ್ನು ಒಳಗೊಂಡಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್, ಓಮನ್ ಮತ್ತು ಯುಎಇ ತಂಡಗಳಿವೆ. ಇನ್ನು ಆತಿಥೇಯ ಭಾರತ ವಿಶ್ವಕಪ್‌ ಗೆ ನೇರ ಪ್ರವೇಶ ಪಡೆದಿದೆ. ಇದಲ್ಲದೆ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾದ ತಂಡಗಳು 2023 ರ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ.

ಇದನ್ನೂ ಓದಿ: Rain Alert: ಮುಂದಿನ 2 ದಿನಗಳ ಕಾಲ ರಾಜ್ಯದ ಈ ಭಾಗದಲ್ಲಿ ಭಾರೀ ಮಳೆ! ಗುಡುಗು, ಮಿಂಚು ಸಹಿತ ಬಿರುಗಾಳಿಯ ಮುನ್ನೆಚ್ಚರಿಕೆ

ವಿಶ್ವಕಪ್ ಅರ್ಹತಾ ಸುತ್ತಿನ ವೆಸ್ಟ್ ಇಂಡೀಸ್ ತಂಡ:

ಶಾಯ್ ಹೋಪ್ (ನಾಯಕ), ರೋವ್‌ಮನ್ ಪೊವೆಲ್, ಶಮರ್ ಬ್ರೂಕ್ಸ್, ಯಾನಿಕ್ ಕರಿಯಾ, ಕೇಸಿ ಕಾರ್ಟಿ, ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಕೀಮೋ ಪಾಲ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News