Gold Price Today : ಚಿನ್ನ ಬೆಳ್ಳಿ ದರದಲ್ಲಿ ಏರಿಕೆ ! ನಿಮ್ಮ ನಗರದಲ್ಲಿ ಎಷ್ಟಿದೆ ಬೆಲೆ ತಿಳಿದುಕೊಳ್ಳಿ

Gold Price Today : ಇಂದು ಬಂಗಾರದ ಬೆಲೆಯಲ್ಲಿ 160 ರೂಪಾಯಿ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 54,110  ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  49,600 ರೂ. ಆಗಿದೆ.

Written by - Ranjitha R K | Last Updated : Dec 6, 2022, 09:37 AM IST
  • ದುಬಾರಿಯಾಯಿತು ಚಿನ್ನ
  • ಬೆಳ್ಳಿ ಕೂಡಾ ಬಲು ದುಬಾರಿ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಚಿನ್ನ ಬೆಳ್ಳಿ ದರದಲ್ಲಿ ಏರಿಕೆ ! ನಿಮ್ಮ ನಗರದಲ್ಲಿ ಎಷ್ಟಿದೆ ಬೆಲೆ ತಿಳಿದುಕೊಳ್ಳಿ  title=
Gold Silver price today

ಬೆಂಗಳೂರು : Gold Price Today : ದಿನೇ ದಿನೇ ಚಿನ್ನದ ದರ ಏರುತ್ತಲೇ ಇದೆ. ಚಿನ್ನ ಖರೀದಿಗೆ ಮುನ್ನ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಬೆಲೆ ಎಂದು ತಿಳಿದುಕೊಳ್ಳುವುದು ಉತ್ತಮ. ಕಳೆದ ವಾರ ಕೂಡಾ ಹಳದಿ ಲೋಹದ ಬೆಲೆಯಲ್ಲಿ ಏರಿಳಿತವೇ ಕಂಡು ಬಂದಿತ್ತು. ಇಂದು ಬಂಗಾರದ ಬೆಲೆಯಲ್ಲಿ 160 ರೂಪಾಯಿ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 54,110  ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  49,600 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್  ಚಿನ್ನದ ಬೆಲೆ ಹೀಗಿದೆ. :

ಚೆನ್ನೈಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 55,040 ರೂಪಾಯಿ ಆಗಿದ್ದು,  ಮುಂಬಯಿಯಲ್ಲಿ 54,110  ದೆಹಲಿಯಲ್ಲಿ 54,260 ರೂ., ಕೋಲ್ಕತ್ತಾದಲ್ಲಿ  54,110 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ54,160  ರೂಪಾಯಿ ಆಗಿದ್ದರೆ,  ಹೈದರಾಬಾದ್ ನಲ್ಲಿ  54,110 ರೂಪಾಯಿ ಆಗಿದೆ. ಕೇರಳದಲ್ಲಿಯೂ 10 ಗ್ರಾಂ ಚಿನ್ನದ ಬೆಲೆ  54,110 ರೂಪಾಯಿ ಆಗಿದೆ. 

ಇದನ್ನೂ ಓದಿ : ATM New Rules: ಈ ಸರ್ಕಾರಿ ಬ್ಯಾಂಕ್‌ ಗ್ರಾಹಕರು ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಈ ಹೊಸ ನಿಯಮವನ್ನು ತಪ್ಪದೇ ಓದಿ

 ಇನ್ನು ಬೆಳ್ಳಿ ಬೆಲೆಯಲ್ಲಿ ಕೂಡಾ ಭಾರೀ ಏರಿಕೆ ಕಂಡು ಬಂದಿದೆ.  ಬೆಳ್ಳಿ ಬೆಲೆಯಲ್ಲಿ 1,300 ರೂಪಾಯಿಗಳಷ್ಟು ಏರಿಕೆ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ಚೆನ್ನೈಯಲ್ಲಿ 72,500 ರೂಪಾಯಿ ಆಗಿದ್ದರೆ,  ಮುಂಬಯಿಯಲ್ಲಿ 66,500 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ 66,500  ರೂಪಾಯಿ, ಕೋಲ್ಕತ್ತಾದಲ್ಲಿಯೂ  66,500  ರೂಪಾಯಿ ಆಗಿದೆ. ಬೆಂಗಳೂರಿನ ಬೆಲೆ ನೋಡುವುದಾದರೆ 72,500 ರೂಪಾಯಿ, ಹೈದರಾಬಾದ್ ನಲ್ಲಿ  72,500 ರೂಪಾಯಿ, ಕೇರಳದಲ್ಲಿಯೂ 72,500 ರೂಪಾಯಿ ಆಗಿದೆ. 

ಇದನ್ನೂ ಓದಿ : LIC ಈ ಹೊಸ ಯೋಜನೆಯ ಪ್ರೀಮಿಯಂಗೆ, 10 ಪಟ್ಟು ಲಾಭ ಸಿಗಲಿದೆ!

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ? :
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News