Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?

Gold Purchase: ಚಿನ್ನ ಖರೀದಿಸುವುದಕ್ಕೆ 2002ರಲ್ಲಿ ಕೇಂದ್ರ ಸರ್ಕಾರವು Prevention of Money Laundering Actನ್ನು ಜಾರಿಗೆ ತಂದಿದೆ. ಈ ನಿಯಮದಡಿ ನಿಮ್ಮ ಬಳಿಯಿರುವ ಹಣದಿಂದ ಎಷ್ಟು ಚಿನ್ನ ಖರೀದಿಸಬಹುದು? ಅನ್ನೋದರ ಬಗ್ಗೆ ತಿಳಿಯಿರಿ.

Written by - Puttaraj K Alur | Last Updated : Aug 1, 2024, 03:28 PM IST
  • ಚಿನ್ನ ಖರೀದಿಸುವುದಕ್ಕೆ 2002ರಲ್ಲಿ Prevention of Money Laundering Act ಜಾರಿ
  • 10 ಲಕ್ಷ ರೂ.ದಷ್ಟು ಚಿನ್ನ ಖರೀದಿಗೆ ಪ್ಯಾನ್‌ & ಆಧಾರ್‌ ದಾಖಲೆ ನೀಡಬೇಕು
  • ಆಭರಣ ಖರೀದಿಗೆ ಆದಾಯ ತೆರಿಗೆ(IT) ಇಲಾಖೆ ಕೆಲವು ನಿಯಮ ಜಾರಿಗೆ ತಂದಿದೆ
Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?  title=
ಎಷ್ಟು ಚಿನ್ನ ಖರೀದಿಸಬಹುದು?

Gold Purchase: ಭಾರತೀಯ ಮಹಿಳೆಯರಿಗೆ ಹಬ್ಬ-ಹರಿದಿನ, ವಿಶೇಷ ಕಾರ್ಯಕ್ರಮಗಳಿದ್ದಾಗ ಚಿನ್ನ ಖರೀದಿಸುವುದು ಬಲು ಇಷ್ಟದ ಕೆಲಸ. ಯಾರೇ ಆಗಲಿ ಚಿನ್ನ ಖರೀದಿಸಬೇಕೆಂದರೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ವಿವರ ನೀಡಬೇಕು. ಆದರೆ ಯಾವುದೇ ಪ್ರೂಫ್ ನೀಡದೇ ನೀವು ಎಷ್ಟು ಚಿನ್ನ ಖರೀದಿ ಮಾಡಬಹುದು? ಇದಕ್ಕೆ ಸರ್ಕಾರ ನಿಗದಿಪಡಿಸಿರುವ ಲಿಮಿಟ್ ಎಷ್ಟು? ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಮಾಹಿತಿ ನೀಡಿದರೂ ಎಷ್ಟು ಚಿನ್ನ ಖರೀದಿಸಬಹುದು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಚಿನ್ನ ಖರೀದಿಸುವುದಕ್ಕೆ 2002ರಲ್ಲಿ ಕೇಂದ್ರ ಸರ್ಕಾರವು Prevention of Money Laundering Actನ್ನು ಜಾರಿಗೆ ತಂದಿದೆ. ಈ ನಿಯಮದಡಿ ನಿಮ್ಮ ಬಳಿಯಿರುವ ಹಣದಿಂದ ಎಷ್ಟು ಚಿನ್ನ ಖರೀದಿಸಬಹುದು? ಈ ಬಗ್ಗೆ 2020ರ ಡಿಸೆಂಬರ್ 28ರಂದು ನೋಟಿಸ್‌ ಸಹ ಹೊರಡಿಸಲಾಗಿದೆ. ಈ ಕಾನೂನಿನ ನಿಯಮದ ಅನುಸಾರ ಯಾವುದೇ ಒಬ್ಬ ವ್ಯಕ್ತಿ 10 ಲಕ್ಷ ರೂ. ಮೌಲ್ಯದಷ್ಟು ಚಿನ್ನವನ್ನು ನಗದು ನೀಡಿ ಖರೀದಿಸುತ್ತಾರೆಂದರೆ, ಆಭರಣ ಮಾರಾಟಗಾರರು ಖರೀದಿದಾರರ KYC ಪಡೆಯಬೇಕು. ಬಿಲ್ ಜೊತೆಗೆ ಖರೀದಿ ಮಾಡುವವರ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕಾಪಿಯನ್ನು ಕೂಡ ಅಟ್ಯಾಚ್‌ ಮಾಡಿರಬೇಕು. 

ಇದನ್ನೂ ಓದಿ: Top 5 Bikes In India: ಇವೇ ನೋಡಿ 2024ರ ಟಾಪ್ ಬೈಕುಗಳು

ತೆರಿಗೆ ಇಲಾಖೆ ನಿಯಮ ಏನು?

ಆದಾಯ ತೆರಿಗೆ(IT) ಇಲಾಖೆ ಸಹ ಆಭರಣ ಖರೀದಿಗೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳ ಅನುಸಾರ ಯಾವುದೇ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಇಷ್ಟು ಗ್ರಾಮ್ ಅಥವಾ ಇಷ್ಟು ಮೊತ್ತಕ್ಕೆ ಮಾತ್ರ ಚಿನ್ನ ಖರೀದಿ ಮಾಡಬೇಕೆನ್ನುವ ಲಿಮಿಟ್ ಇದೆ. 1961ರ ಸೆಕ್ಷನ್ 269ST ಅನುಸಾರ 2 ಲಕ್ಷ ರೂ. ಬೆಲೆ ಬಾಳುವಷ್ಟು ಚಿನ್ನವನ್ನು ಮಾತ್ರ ಖರೀದಿ ಮಾಡಬಹುದು. ಅದಕ್ಕಿಂತ ಹೆಚ್ಚು ಚಿನ್ನ ಖರೀದಿ ಮಾಡುವ ಹಾಗಿಲ್ಲ. ನಿಯಮದ ಅನುಸಾರ ಒಬ್ಬ ವ್ಯಕ್ತಿ ತನ್ನ ಬಳಿ ಇರುವ ಕ್ಯಾಶ್‌ ನೀಡಿ ಚಿನ್ನ ಖರೀದಿ ಮಾಡುತ್ತಾರೆಂದರೆ, 2 ಲಕ್ಷ ರೂ.ಗಿಂತಲೂ ಹೆಚ್ಚು ಚಿನ್ನವನ್ನು ಖರೀದಿ ಮಾಡುವಹಾಗಿಲ್ಲ.

ಒಂದು ವೇಳೆ ಚಿನ್ನ ಖರೀದಿ ಮಾಡುತ್ತಿರುವ ವ್ಯಕ್ತಿ ಒಂದೇ ದಿನಕ್ಕೆ 2 ಲಕ್ಷ ರೂ.ಗಿಂತಲೂ ಹೆಚ್ಚು ಮೌಲ್ಯದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದರೆ, ಅದು ಆದಾಯ ತೆರಿಗೆ ಇಲಾಖೆ ಜಾರಿಗೆ ತಂದಿರುವ ನಿಯಮಗಳ ಉಲ್ಲಂಘನೆ ಎಂದು ಗಣನೆಗೆ ತೆಗದುಕೊಳ್ಳಲಾಗುತ್ತದೆ. ಇದರಿಂದ ಸೆಕ್ಷನ್ 271D ಕಾಯ್ದೆಯ ಅನುಸಾರ ಆ ವ್ಯಕ್ತಿ ಸರ್ಕಾರಕ್ಕೆ ದಂಡ ಪಾವತಿ ಮಾಡಬೇಕಾಗುತ್ತದೆ. ಇದು ಸರ್ಕಾರದ ನಿಯಮವಾಗಿದ್ದು, ಈ ನಿಯಮವನ್ನು ಎಲ್ಲರೂ ಸಹ ಪಾಲಿಸಬೇಕು.

ಇದನ್ನೂ ಓದಿ: ಸೈಬರ್ ದಾಳಿಯಿಂದ ಬ್ಯಾಂಕ್‌ಗಳ UPI-IMPS ಸ್ಥಗಿತ!300 ಬ್ಯಾಂಕ್ ಗಳ ಪಟ್ಟಿಯಲ್ಲಿದೆಯೇ ನಿಮ್ಮ ಬ್ಯಾಂಕ್ ? ಇಲ್ಲಿ ಚೆಕ್ ಮಾಡಿ

2 ಲಕ್ಷಕ್ಕಿಂತ ಹೆಚ್ಚು ಚಿನ್ನ ಖರೀದಿಸಬೇಕೆಂದರೆ ಏನು ಮಾಡಬೇಕು?

ಒಂದು ವೇಳೆ ನೀವು 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದಷ್ಟು ಚಿನ್ನ ಖರೀದಿಸಬೇಕೆಂದರೆ, ಆಗ ನೀವು ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಇದು 1962ನ 114ರ ಕಾಯ್ದೆಯ ನಿಯಮವಾಗಿದೆ. ಇದರ ಅನುಸಾರ ಯಾವುದೇ ವ್ಯಕ್ತಿ 2 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಚಿನ್ನ ಖರೀದಿ ಮಾಡಬೇಕೆಂದರೆ, ಅದಕ್ಕೆ ಪ್ಯಾನ್ ಕಾರ್ಡ್ ಮಾಹಿತಿಯನ್ನು ಕೊಡಲೇಬೇಕು. ಜೊತೆಗೆ PMLA ನಿಯಮಗಳು ಸಹ ಜಾರಿಗೆ ಬಂದಿದ್ದು, ಆ ನಿಯಮಗಳು ಸಹ ಚಿನ್ನ ಖರೀದಿಸುವುದಕ್ಕೆ ಲಿಮಿಟ್ ಮಾಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News