Gold-Silver Price Today: ಇಂದೂ ಕುಸಿತ ಕಂಡ ಚಿನ್ನದ ದರ, ಗರಿಷ್ಠ ಮಟ್ಟದಿಂದ 10 ಸಾವಿರ ರೂ. ಇಳಿಕೆ

ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ದರವು 43,850 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆಯು 47,840 ರೂ. ಇದೆ.

Written by - Puttaraj K Alur | Last Updated : Sep 22, 2021, 06:38 PM IST
  • ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು ಕೂಡ ಕೊಂಚ ಇಳಿಕೆ ಕಂಡಿದೆ
  • ಹಳದಿ ಲೋಹವು ದಾಖಲೆಯ ಗರಿಷ್ಠ ಮಟ್ಟದಿಂದ 10 ಸಾವಿರ ರೂ. ಕುಸಿತ ಕಂಡಿದೆ
  • ಬೆಳ್ಳಿ ದರದಲ್ಲಿ ಪ್ರತಿ ಕೆಜಿಗೆ 1,100 ರೂ. ಏರಿಕೆಯಾಗಿದ್ದು, 60,900 ಗೆ ತಲುಪಿದೆ
Gold-Silver Price Today: ಇಂದೂ ಕುಸಿತ ಕಂಡ ಚಿನ್ನದ ದರ, ಗರಿಷ್ಠ ಮಟ್ಟದಿಂದ 10 ಸಾವಿರ ರೂ. ಇಳಿಕೆ   title=
ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದೆ(Photo Courtesy:@India.com)

ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು ಕೂಡ ಕೊಂಚ ಇಳಿಕೆ ಕಂಡಿದೆ. ಹಳದಿ ಲೋಹದ ದರವು ದಾಖಲೆಯ ಗರಿಷ್ಠ ಮಟ್ಟದಿಂದ ಬರೋಬ್ಬರಿ 10 ಸಾವಿರ ರೂ.ನಷ್ಟು ಕುಸಿತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ಬಂಗಾರದ ಬೆಲೆಯಲ್ಲಿ ನಿರಂತರವಾಗಿ ಇಳಿಮುಖವಾಗುತ್ತಿದೆ.

ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 45,930 ರೂ. ಇದೆ. ನಿರಂತರವಾಗಿ ಕುಸಿತ ಕಾಣುತ್ತಿರುವ ಚಿನ್ನ 6 ತಿಂಗಳಲ್ಲಿಯೇ ಕನಿಷ್ಠ ಮಟ್ಟವನ್ನು ತಲುಪಿದೆ.  ಹಬ್ಬದ ಋತುವಿನಲ್ಲಿ ಹಳದಿ ಲೋಹದ ದರದಲ್ಲಿ ಇಳಿಕೆಯಾಗುತ್ತಿರುವುದರಿಂದ ದೇಶದ ಸಾಮಾನ್ಯ ಖರೀದಿದಾರರಿಗೆ ಹೆಚ್ಚಿನ ಸಂತೋಷ ಸಿಗುತ್ತಿದೆ. ಚಿನ್ನವನ್ನು ಖರೀದಿಸಲು ಜನರಿಗೆ ಇದೇ ಸುರ್ವಣಾವಕಾಶವೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: RBI Cheque Rule : ಈ ತಿಂಗಳಿನಿಂದ ನೀವು ಈ RBI ನಿಯಮಗಳನ್ನ ಪಾಲಿಸದಿದ್ದರೆ ನಿಮ್ಮ ಚೆಕ್ ಬೌನ್ಸ್ ಆಗಬಹುದು!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆಯು 46,000 ರೂ. ಇದ್ದರೆ, 24 ಗ್ರಾಂನ ಚಿನ್ನದ ಬೆಲೆಯು 50,180 ರೂ. ಇದೆ. ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ದರವು 43,850 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆಯು 47,840 ರೂ. ಇದೆ. ಇನ್ನು ದೇಶದಲ್ಲಿ ಬೆಳ್ಳಿಯ ದರದಲ್ಲಿ ಭಾರೀ ಏರಿಕೆ ಕಂಡಿದೆ. ಪ್ರತಿ ಕೆಜಿಗೆ 1,100 ರೂ.ನಷ್ಟು ಏರಿಕೆ ಕಂಡು ಬೆಳ್ಳಿ ಬೆಲೆ 60,900 ರೂ. ತಲುಪಿದೆ.

ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ ನೋಡಿ...

ನಗರ

22K Gold (Per 10gm) 24K Gold (Per 10gm)

ಬೆಂಗಳೂರು

43,850 ರೂ. 47,840 ರೂ.

ದೆಹಲಿ

46,000 ರೂ. 50,180 ರೂ.

ಮುಂಬೈ

45,360 ರೂ. 46,360 ರೂ.

ಚೆನ್ನೈ

Rs 44,100 ರೂ.  48,100 ರೂ.

ಕೋಲ್ಕತ್ತಾ

46,200 ರೂ.  48,900 ರೂ.

ಹೈದರಾಬಾದ್

43,850 ರೂ. 47,840 ರೂ.

ಅಹಮದಾಬಾದ್

44,800 ರೂ. 48,030 ರೂ.

ಲಕ್ನೋ

44,600 ರೂ. 47,400 ರೂ.

ಕೇರಳ

43,850 ರೂ. 47,840 ರೂ.

ಇದನ್ನೂ ಓದಿ: Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಖರೀದಿದಾರರಿಗೆ ಖುಷಿ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಹಳದಿ ಲೋಹ ಲಭ್ಯವಾಗುತ್ತಿರುವುದರಿಂದ ಹಬ್ಬದ ದಿನಗಳಲ್ಲಿ ಚಿನ್ನ ಖರೀದಿ ಜೋರಾಗಿದೆ.

ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಸರಕು ಮತ್ತು ಸೇವಾ ತೆರಿಗೆ (GST) ಇಲ್ಲದಿದ್ದು ಮತ್ತು ಆಭರಣ ಅಂಗಡಿಗಳಲ್ಲಿನ ದರಕ್ಕೆ ಹೊಂದಿಕೆಯಾಗದೇ ಇರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News