Gold Price Today : ಆಭರಣ ಪ್ರಿಯರಿಗೆ ಸಖತ್ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹7439 ಇಳಿಕೆ

ಆಗಸ್ಟ್ 2020 ರಲ್ಲಿ ಚಿನ್ನವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಆಗ ಚಿನ್ನದ ಬೆಲೆ ಹತ್ತು ಗ್ರಾಂಗೆ 56,200 ರೂ. ಮತ್ತೊಂದೆಡೆ, ಬೆಳ್ಳಿಯು ತನ್ನ ಅತ್ಯುನ್ನತ ಮಟ್ಟದಿಂದ ಪ್ರತಿ ಕೆಜಿಗೆ ಸುಮಾರು 18169 ರೂ ದರದಲ್ಲಿ ಅಗ್ಗವಾಗುತ್ತಿದೆ. ಸಾರ್ವಕಾಲಿಕ ಏರಿಕೆಯಲ್ಲಿದ್ದ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 79980 ರೂ. ಇದೆ.

Written by - Channabasava A Kashinakunti | Last Updated : Dec 18, 2021, 11:21 AM IST
  • ಆಭರಣ ಪ್ರಿಯರಿಗೆ ಒಂದು ಪ್ರಮುಖ ಸುದ್ದಿ
  • ಚಿನ್ನ 7439 ರೂ. ಮತ್ತು ಬೆಳ್ಳಿ 18269 ರೂ. ಅಗ್ಗ
  • ಹಾಲ್‌ಮಾರ್ಕ್ ಇದ್ದಾರೆ ಮಾತ್ರ ಚಿನ್ನ ಖರೀದಿಸಿ
Gold Price Today : ಆಭರಣ ಪ್ರಿಯರಿಗೆ ಸಖತ್ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹7439 ಇಳಿಕೆ title=

ನವದೆಹಲಿ : ನೀವು ಚಿನ್ನವನ್ನು ಖರೀದಿಸಲು ಬಯಸಿದರೆ ನಿಮಗಾಗಿ ಒಂದು ಪ್ರಮುಖ ಸುದ್ದಿ ಇದೆ. ಈ ವಾರದ ಕೊನೆಯ ದಿನವಾದ ಶುಕ್ರವಾರ ಬಂಗಾರದ ಜೊತೆಗೆ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಶುಕ್ರವಾರ ಪ್ರತಿ 10 ಗ್ರಾಂ ಚಿನ್ನಕ್ಕೆ 407 ರೂಪಾಯಿ ಏರಿಕೆಯಾಗಿ 48791 ರೂಪಾಯಿಗೆ ತಲುಪಿದೆ. ಗುರುವಾರದಂದು ಪ್ರತಿ ಹತ್ತು ಗ್ರಾಂ ಚಿನ್ನ 48384 ರೂ. ಮತ್ತೊಂದೆಡೆ ಬೆಳ್ಳಿ ಪ್ರತಿ ಕೆಜಿಗೆ 740 ರೂಪಾಯಿ ಏರಿಕೆಯಾಗಿ 61811 ರೂಪಾಯಿಗಳಿಗೆ ತಲುಪಿದೆ. ಗುರುವಾರ ಬೆಳ್ಳಿ ಕೆಜಿಗೆ 61071 ರೂ. ಇತ್ತು.

ಚಿನ್ನ 7439 ರೂ. ಮತ್ತು ಬೆಳ್ಳಿ 18269 ರೂ. ಅಗ್ಗವಾಗಿದೆ 

ಈ ಏರಿಕೆಯ ಹೊರತಾಗಿಯೂ, ಚಿನ್ನ(Gold Price)ವು ಅದರ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 10 ಗ್ರಾಂಗೆ ಸುಮಾರು 7409 ರೂ.ಗಳಷ್ಟು ಅಗ್ಗವಾಗಿ ಮಾರಾಟವಾಗುತ್ತಿದೆ. ಆಗಸ್ಟ್ 2020 ರಲ್ಲಿ ಚಿನ್ನವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಆಗ ಚಿನ್ನದ ಬೆಲೆ ಹತ್ತು ಗ್ರಾಂಗೆ 56,200 ರೂ. ಮತ್ತೊಂದೆಡೆ, ಬೆಳ್ಳಿಯು ತನ್ನ ಅತ್ಯುನ್ನತ ಮಟ್ಟದಿಂದ ಪ್ರತಿ ಕೆಜಿಗೆ ಸುಮಾರು 18169 ರೂ ದರದಲ್ಲಿ ಅಗ್ಗವಾಗುತ್ತಿದೆ. ಸಾರ್ವಕಾಲಿಕ ಏರಿಕೆಯಲ್ಲಿದ್ದ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 79980 ರೂ. ಇದೆ.

ಇದನ್ನೂ ಓದಿ : DAY-NRLM : ಕೇಂದ್ರದಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್ : ನಿಮಗೆ ಇಂದಿನಿಂದ ಉಚಿತವಾಗಿ ಸಿಗಲಿದೆ ₹5000

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ವಹಿವಾಟು ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಇಂದು, US ನಲ್ಲಿ ಚಿನ್ನದ ಬೆಲೆ $ 1,808.93 ಕ್ಕೆ $ 10.22 ರಷ್ಟು ಲಾಭದೊಂದಿಗೆ ಔನ್ಸ್ಗೆ ವ್ಯಾಪಾರವಾಗುತ್ತಿದೆ. ಮತ್ತೊಂದೆಡೆ, ಬೆಳ್ಳಿ(Silver Price) ವಹಿವಾಟು ಪ್ರತಿ ಔನ್ಸ್‌ಗೆ $ 22.66 ಮಟ್ಟದಲ್ಲಿ $ 0.20 ರಷ್ಟು ಏರುತ್ತಿದೆ.

ಮಿಸ್ಡ್ ಕಾಲ್ ಮೂಲಕ ಇತ್ತೀಚಿನ ಚಿನ್ನದ ಬೆಲೆ ತಿಳಿಯಿರಿ

22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಆಭರಣಗಳ ಚಿಲ್ಲರೆ ದರಗಳನ್ನು ತಿಳಿಯಲು ನೀವು 8955664433 ಗೆ ಮಿಸ್ಡ್ ಕಾಲ್(Missed Call) ನೀಡಬಹುದು. ಕಡಿಮೆ ಸಮಯದಲ್ಲಿ SMS ಮೂಲಕ ದರಗಳನ್ನು ಸ್ವೀಕರಿಸಲಾಗುತ್ತದೆ. ಇದರೊಂದಿಗೆ, ಆಗಾಗ್ಗೆ ನವೀಕರಣಗಳ ಕುರಿತು ಮಾಹಿತಿಗಾಗಿ ನೀವು www.Ibja.Co ಗೆ ಭೇಟಿ ನೀಡಬಹುದು.

ಚಿನ್ನದ ಪರಿಶುದ್ಧತೆಯನ್ನು ಹೀಗೆ ತಿಳಿಯಿರಿ

ನೀವು ಈಗ ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಬಯಸಿದರೆ, ಇದಕ್ಕಾಗಿ ಸರ್ಕಾರವು ಒಂದು ಅಪ್ಲಿಕೇಶನ್ ಅನ್ನು ತಯಾರಿಸಿದೆ. ಬಿಐಎಸ್ ಕೇರ್ ಅಪ್ಲಿಕೇಶನ್‌(BIS Care Application)ನೊಂದಿಗೆ ಗ್ರಾಹಕರು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. ಈ ಆ್ಯಪ್ ಮೂಲಕ ನೀವು ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವುದು ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ಯಾವುದೇ ದೂರುಗಳನ್ನೂ ನೀಡಬಹುದು.

ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬಂಪರ್ ದರ

ಹಾಲ್‌ಮಾರ್ಕ್ ಇದ್ದಾರೆ ಮಾತ್ರ ಚಿನ್ನ ಖರೀದಿಸಿ

ಚಿನ್ನವನ್ನು ಖರೀದಿಸುವಾಗ ಅದರ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಿ. ಹಾಲ್ ಮಾರ್ಕ್(Hall Mark) ನೋಡಿಯೇ ಚಿನ್ನಾಭರಣ ಖರೀದಿಸಬೇಕು. ಹಾಲ್‌ಮಾರ್ಕ್ ಚಿನ್ನದ ಸರ್ಕಾರದ ಖಾತರಿಯಾಗಿದೆ ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹಾಲ್‌ಮಾರ್ಕ್ ಅನ್ನು ನಿರ್ಧರಿಸುವ ಭಾರತದ ಏಕೈಕ ಏಜೆನ್ಸಿಯಾಗಿದೆ. ಹಾಲ್‌ಮಾರ್ಕಿಂಗ್ ಯೋಜನೆಯು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆಕ್ಟ್, ನಿಯಮಗಳು ಮತ್ತು ನಿಯಂತ್ರಣದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News