Gold Price Today : ಹೊಸ ದಾಖಲೆಯತ್ತ ಚಿನ್ನ ಬೆಲೆ! ಇಂದು ಭಾರಿ ಏರಿಕೆ ಕಂಡ ಬಂಗಾರ! 

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಮತ್ತೆ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಡಿಸೆಂಬರ್‌ನಲ್ಲಿ ವಿತರಣೆಗಾಗಿ ಚಿನ್ನದ ಬೆಲೆ ಶೇ. 0.11 ರಷ್ಟು ಹೆಚ್ಚಾಗಿದೆ. ಇಂದು ಬೆಳ್ಳಿ ಬೆಲೆಯೂ ಶೇ.0.26ರಷ್ಟು ಇಳಿಕೆಯಾಗಿದೆ.

Written by - Channabasava A Kashinakunti | Last Updated : Nov 17, 2021, 02:15 PM IST
  • ಚಿನ್ನದ ಬೆಲೆ 50 ಸಾವಿರದ ಸಮೀಪ
  • ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಕುಸಿತ
  • ಹೊಸ ದಾಖಲೆಯತ್ತ ಚಿನ್ನದ ಬೆಲೆ!
Gold Price Today : ಹೊಸ ದಾಖಲೆಯತ್ತ ಚಿನ್ನ ಬೆಲೆ! ಇಂದು ಭಾರಿ ಏರಿಕೆ ಕಂಡ ಬಂಗಾರ!  title=

ನವದೆಹಲಿ : ಮದುವೆ ಸೀಸನ್ ಆರಂಭವಾಗುತ್ತಿದ್ದಂತೆಯೇ ಚಿನ್ನ, ಬೆಳ್ಳಿಯ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಆದರೆ ಚಿನ್ನದ ಬೆಲೆ ಹೊಸ ದಾಖಲೆಯತ್ತ ಸಾಗುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಮತ್ತೆ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಡಿಸೆಂಬರ್‌ನಲ್ಲಿ ವಿತರಣೆಗಾಗಿ ಚಿನ್ನದ ಬೆಲೆ ಶೇ. 0.11 ರಷ್ಟು ಹೆಚ್ಚಾಗಿದೆ. ಇಂದು ಬೆಳ್ಳಿ ಬೆಲೆಯೂ ಶೇ.0.26ರಷ್ಟು ಇಳಿಕೆಯಾಗಿದೆ.

ಹೊಸ ದಾಖಲೆಯತ್ತ ಚಿನ್ನದ ಬೆಲೆ!

ಹಬ್ಬದ ಸೀಸನ್ ಮುಗಿದಿದೆ. ಆದರೆ ಚಿನ್ನ(Gold)ದ ಖರೀದಿಯ ವಿಶೇಷ ಹಬ್ಬವಾದ ದೀಪಾವಳಿಯಂದು ಚಿನ್ನವು ಭರ್ಜರಿಯಾಗಿ ಮಾರಾಟವಾಗಿತ್ತು. ಹಬ್ಬದ ನಂತರದ ಬೆಲೆಯನ್ನು ಗಮನಿಸಿದರೆ, ನವೆಂಬರ್ 10 ರಂದು ಚಿನ್ನದ ದರ 10 ಗ್ರಾಂಗೆ 48,313 ರೂ. ಮತ್ತು ಬೆಳ್ಳಿಯ ಬೆಲೆ ಕೆಜಿಗೆ 64,692 ರೂ. ಆದರೆ ಹಬ್ಬ ಮುಗಿದು ಈಗ ಮದುವೆ ಸೀಸನ್ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಆಗಲೇ ಏರಿಕೆಯಾಗಲಿದೆ ಎಂದು ಊಹಿಸಲಾಗಿತ್ತು. ಚಿನ್ನದ ಬೆಲೆ ಈಗ 10 ಗ್ರಾಂಗೆ 50,000 ರೂ.

ಇದನ್ನೂ ಓದಿ : Smart Driving Licence: ಹಳೆಯ ಪರವಾನಗಿಯನ್ನು ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ಆಗಿ ಪರಿವರ್ತಿಸಲು ಇಲ್ಲಿದೆ 5 ಸುಲಭ ಹಂತಗಳು

ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು?

ನಾವು ಚಿನ್ನ ಮತ್ತು ಬೆಳ್ಳಿಯ ಬೆಲೆ(Gold-Silver Price)ಯನ್ನು ನೋಡಿದರೆ, ಅಕ್ಟೋಬರ್ ವಿತರಣೆಯ ಚಿನ್ನದ ಬೆಲೆ ಪ್ರಸ್ತುತ 10 ಗ್ರಾಂಗೆ 49,131 ರೂ. ಮತ್ತೊಂದೆಡೆ, ಬೆಳ್ಳಿ ಇಂದು ಶೇಕಡಾ 0.26 ರಷ್ಟು ಕಡಿಮೆಯಾಗಿದೆ. ಇಂದು ಬೆಳ್ಳಿಯ ಬೆಲೆ ಕೆಜಿಗೆ 66,409 ರೂ.

ಈ ರೀತಿಯಾಗಿ ನೀವು ಚಿನ್ನದ ಶುದ್ಧತೆ ಪರಿಶೀಲಿಸಬಹುದು

ನೀವು ಈಗ ಚಿನ್ನ(Gold)ದ ಶುದ್ಧತೆಯನ್ನು ಪರಿಶೀಲಿಸಲು ಬಯಸಿದರೆ, ಇದಕ್ಕಾಗಿ ಸರ್ಕಾರದಿಂದ ಅಪ್ಲಿಕೇಶನ್ ಅನ್ನು ಮಾಡಲಾಗಿದೆ. 'ಬಿಐಎಸ್ ಕೇರ್ ಆಪ್' ಮೂಲಕ ಗ್ರಾಹಕರು ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಬಹುದು. ಈ ಆ್ಯಪ್ ಮೂಲಕ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವುದು ಮಾತ್ರವಲ್ಲದೆ ಅದಕ್ಕೆ ಸಂಬಂಧಿಸಿದ ಯಾವುದೇ ದೂರು ನೀಡಬಹುದು.

ಮಿಸ್ಡ್ ಕಾಲ್ ನೀಡುವ ಮೂಲಕ ಚಿನ್ನದ ದರ ಪಡೆಯಬಹುದು

ಮನೆಯಲ್ಲಿ ಕುಳಿತು ಈ ದರಗಳನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು ಈ ಸಂಖ್ಯೆ 8955664433 ಗೆ ಮಿಸ್ಡ್ ಕಾಲ್(Missed Call) ನೀಡಿದರೆ ಸಾಕು ಮತ್ತು ನಿಮ್ಮ ಫೋನ್‌ಗೆ ಸಂದೇಶ ಬರುತ್ತದೆ, ಅದರಲ್ಲಿ ನೀವು ಇತ್ತೀಚಿನ ದರಗಳನ್ನು ಪರಿಶೀಲಿಸಬಹುದು.

ಇದನ್ನೂ ಓದಿ : New Suzuki Alto: ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರಿನ ಹೊಸ ರೂಪ ನೋಡಿದರೆ ನೀವು ಆಶ್ಚರ್ಯಚಕಿತರಾಗುವಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News