Gold Price Today: ಚಿನ್ನದ ಬೆಲೆಯಲ್ಲಿ ಕಂಡುಬಂದ ಭಾರಿ ಸುಸ್ತಿ, ಖರೀದಿಗೆ ಉತ್ತಮ ಅವಕಾಶ

Gold, Silver Rate Update:07 September 2021 - ಚಿನ್ನ ಇಂದು ಬಹುತೇಕ ತನ್ನ ಫ್ಲ್ಯಾಟ್ ವಹಿವಾಟನ್ನು ಮುಂದುವರೆಸಲಿದೆ. ಚಿನ್ನವು ರೂ. 47300 ಕ್ಕಿಂತ ಮೇಲ್ಮಟ್ಟದಲ್ಲಿ ತನ್ನ ವಹಿವಾಟು ಮುಂದುವರೆಸಿದೆ, ಆದರೆ ಬೆಳ್ಳಿ ಹೆಚ್ಚು ನೀರಸ ವಹಿವಾಟು ನಡೆಸುತ್ತಿದೆ.

Written by - Nitin Tabib | Last Updated : Sep 7, 2021, 01:15 PM IST
  • ಚಿನ್ನ ಇಂದು ಬಹುತೇಕ ತನ್ನ ಫ್ಲ್ಯಾಟ್ ವಹಿವಾಟನ್ನು ಮುಂದುವರೆಸಲಿದೆ.
  • ಚಿನ್ನವು ರೂ. 47300 ಕ್ಕಿಂತ ಮೇಲ್ಮಟ್ಟದಲ್ಲಿ ತನ್ನ ವಹಿವಾಟು ಮುಂದುವರೆಸಿದೆ.
  • ಆದರೆ ಬೆಳ್ಳಿ ಹೆಚ್ಚು ನೀರಸ ವಹಿವಾಟು ನಡೆಸುತ್ತಿದೆ.
Gold Price Today: ಚಿನ್ನದ ಬೆಲೆಯಲ್ಲಿ ಕಂಡುಬಂದ ಭಾರಿ ಸುಸ್ತಿ, ಖರೀದಿಗೆ ಉತ್ತಮ ಅವಕಾಶ title=
Gold-Silver Rate Update (File Photo)

ನವದೆಹಲಿ: Gold-Silver Rate Update, 07 September 2021 - MCX ನಲ್ಲಿ ಚಿನ್ನದ ಅಕ್ಟೋಬರ್ ವಾಯಿದಾ ಸೋಮವಾರ ಅತ್ಯಂತ ಸೀಮಿತ ವ್ಯಾಪ್ತಿಯಲ್ಲಿ ತನ್ನ ವಹಿವಾಟು ನಡೆಸಿತ್ತು. ಚಿನ್ನದ ಫ್ಯೂಚರ್ಸ್ 130 ರೂ.ಗಳ ಸಣ್ಣ ಶ್ರೇಣಿಯಲ್ಲಿ  ವ್ಯಾಪಾರ ನಡೆಸುತ್ತಿರುವುದು ಕಾಣುತ್ತಿತ್ತು. ಆದರೆ ದಿನದಾಂತ್ಯಕ್ಕೆ ಚಿನ್ನದ ಭವಿಷ್ಯವು ಸುಮಾರು ರೂ 100 ದೌರ್ಬಲ್ಯದೊಂದಿಗೆ ಮುಚ್ಚಲ್ಪಟ್ಟಿತು. ಇಂದಿಗೂ ಸಹ, ಚಿನ್ನದ ಭವಿಷ್ಯದ ಆರಂಭವು ನಿಧಾನವಾಗಿದ್ದು, ಬೆಲೆ ರೂ 47350 ಕ್ಕಿಂತ ಮೇಲ್ಮಟ್ಟದಲ್ಲಿದೆ.

ಈ ವಾರದಲ್ಲಿ ಚಿನ್ನದ ನಡೆ ಹೇಗಿದೆ? (Gold Rate)
ದಿನ                      ಚಿನ್ನ (MCX ಅಕ್ಟೋಬರ್ ವಾಯಿದಾ ಮಾರುಕಟ್ಟೆ)    

ಸೋಮವಾರ         47425/10 ಗ್ರಾಂ.
ಮಂಗಳವಾರ        47120/10 ಗ್ರಾಂ. (ವಹಿವಾಟು ಮುಂದುವರೆದಿದೆ)

ಕಳೆದ ವಾರ ಚಿನ್ನದ ನಡೆ ಹೇಗಿತ್ತು? (ಆಗಸ್ಟ್ 30 ರಿಂದ ಸೆಪ್ಟೆಂಬರ್ 3)
ದಿನ                   ಚಿನ್ನ (MCX ಅಕ್ಟೋಬರ್ ವಾಯಿದಾ ಮಾರುಕಟ್ಟೆ)

ಸೋಮವಾರ      47164/10 ಗ್ರಾಂ. 
ಮಂಗಳವಾರ     47120/10 ಗ್ರಾಂ.
ಬುಧವಾರ          47068/10 ಗ್ರಾಂ.
ಗುರುವಾರ          46991/10 ಗ್ರಾಂ.
ಶುಕ್ರವಾರ           7524/10 ಗ್ರಾಂ 

ಎರಡು ವಾರದ ಹಿಂದೆ ಚಿನ್ನದ ನಡೆ ಹೇಗಿತ್ತು? (ಆಗಸ್ಟ್ 23 ರಿಂದ ಆಗಸ್ಟ್ 27)
ದಿನ                    ಚಿನ್ನ (MCX ಅಕ್ಟೋಬರ್ ವಾಯಿದಾ ಮಾರುಕಟ್ಟೆ)

ಸೋಮವಾರ      47584/10 ಗ್ರಾಂ.
ಮಂಗಳವಾರ      47612/10 ಗ್ರಾಂ.
ಬುಧವಾರ          47179/10 ಗ್ರಾಂ.
ಗುರುವಾರ          47237/10 ಗ್ರಾಂ.
ಶುಕ್ರವಾರ           47538/10 ಗ್ರಾಂ.

ಚಿನ್ನದ ಬೆಲೆ ತನ್ನ ಗರಿಷ್ಟ ಮಟ್ಟಕ್ಕಿಂತ 8900 ಇಳಿಕೆ 
ಕಳೆದ ವರ್ಷ, ಕರೋನಾ ಬಿಕ್ಕಟ್ಟಿನಿಂದಾಗಿ, ಜನರು ಚಿನ್ನದಲ್ಲಿ (Gold Price) ಹೆಚ್ಚು ಹೂಡಿಕೆ ಮಾಡಿದ್ದರು, ಆಗಸ್ಟ್ 2020 ರಲ್ಲಿ, MCX ನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ. 56191 ರ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದೀಗ ಚಿನ್ನದ ಅಕ್ಟೋಬರ್ ಫ್ಯೂಚರ್ಸ್ MCX ನಲ್ಲಿ 10 ಗ್ರಾಂಗೆ 47300 ರೂ.ಗಳ ಮಟ್ಟದಲ್ಲಿದೆ, ಅಂದರೆ, ಚಿನ್ನ ಗರಿಷ್ಟ ಮಟ್ಟಕ್ಕೆ ಹೋಲಿಸಿದರೆ 8900 ರೂಗಳಷ್ಟು ಅಗ್ಗವಾಗಿದೆ.

MCXನಲ್ಲಿ ಬೆಳ್ಳಿಯ ಬೆಲೆ (Silver Rate)
ಬೆಳ್ಳಿಯ ಬಗ್ಗೆ ಹೇಳುವುದಾದರೆ, ಬೆಳ್ಳಿಯ ಡಿಸೆಂಬರ್ ಫ್ಯೂಚರ್ಸ್ ಶುಕ್ರವಾರ ಸ್ವಲ್ಪ ಏರಿಕೆಯ ಮೂಲಕ ತನ್ನ ವಹಿವಾಟು ಅಂತ್ಯಗೊಳಿಸಿದೆ. ಇಂಟ್ರಾಡೇ ಬೆಳ್ಳಿಯು 65513 ರ ಮಟ್ಟವನ್ನು  ತಲುಪಿತ್ತು ಮತ್ತು 65064 ರವರೆಗೂ ಕೂಡ ಕುಸಿದಿದೆ. ಆದರೆ ಒಮ್ಮೆಯೂ ಅದು 65,000 ಕ್ಕಿಂತ ಕೆಳಗೆ ಇಳಿದಿಲ್. ಆದರೆ ಇಂದು ಅದು ಪ್ರತಿ ಕೆಜಿಗೆ 200 ರೂ.ಗಳ ಕುಸಿತದೊಂದಿಗೆ ವಹಿವಾಟು ನಡೆಸುತ್ತಿದೆ. ಬೆಳ್ಳಿ ಡಿಸೆಂಬರ್ ಫ್ಯೂಚರ್ಸ್ 65100 ರ ಸಮೀಪದಲ್ಲಿ ವಹಿವಾಟು ನಡೆಸುತ್ತಿದೆ.

ಈ ವಾರ ಬೆಳ್ಳಿಯ ನಡೆ ಹೇಗಿರಲಿದೆ?
ದಿನ                      ಚಿನ್ನ (MCX ಡಿಸೆಂಬರ್ ವಾಯಿದಾ ಮಾರುಕಟ್ಟೆ)

ಸೋಮವಾರ         65292/ಕೆ.ಜಿ
ಮಂಗಳವಾರ         65100/ಕೆ.ಜಿ (ವಹಿವಾಟು ಮುಂದುವರೆದಿದೆ)

ಇದನ್ನೂ ಓದಿ-Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್ : 50 ಸಾವಿರ ರೂ. ಗಡಿ ದಾಟಿದ ಚಿನ್ನದ ಬೆಲೆ!

ಬೆಳ್ಳಿ ತನ್ನ ಗರಿಷ್ಟ ಮಟ್ಟಕ್ಕಿಂದ ರೂ.14,800 ಅಗ್ಗವಾಗಿದೆ
ಬೆಳ್ಳಿಯ ಇದುವರೆಗಿನ  ಗರಿಷ್ಠ ಮಟ್ಟ ಪ್ರತಿ ಕೆಜಿಗೆ 79,980 ರೂ. ಅಂದರೆ ಬೆಳ್ಳಿ ಕೂಡ ಗರಿಷ್ಟ ಮಟ್ಟದಿಂದ ಸುಮಾರು 14800 ರೂಪಾಯಿಗಳಷ್ಟು ಅಗ್ಗವಾಗಿದೆ. ಇಂದು ಬೆಳ್ಳಿ ಡಿಸೆಂಬರ್ ಫ್ಯೂಚರ್ಸ್ ಪ್ರತಿ ಕೆಜಿಗೆ 65100 ರೂ.ಗಳಲ್ಲಿ ವ್ಯವಹರಿಸುತ್ತಿದೆ.

ಇದನ್ನೂ ಓದಿ-Water Transformed In To Shiny Golden Metal: ನೀರಿನಿಂದ ಚಿನ್ನದಂತಹ ಲೋಹ ತಯಾರಿಸಿದ ವಿಜ್ಞಾನಿಗಳು!

ಸರಾಫ್ ಮಾರುಕಟ್ಟೆಯಲ್ಲಿ ಚಿನ್ನ - ಬೆಳ್ಳಿ
ಚಿನ್ನಾಭರಣ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ ದುಬಾರಿಯಾಗಿತ್ತು, ಚಿನ್ನ ಪ್ರತಿ 10 ಗ್ರಾಂಗೆ 47573 ರೂ.ಗಳಂತೆ ಮಾರಾಟವಾಗಿತ್ತು, ಶುಕ್ರವಾರ ಈ ದರ 47208 ರೂ. ಗಳಷ್ಟಿತ್ತು. ಇದರಂತೆಯೇ ಸೋಮವಾರ ಬೆಳ್ಳಿಯ ಬೆಲೆಯೂ ಸಹ ಮಾರುಕಟ್ಟೆಯಲ್ಲಿ ರೂ 64957 ಕ್ಕೆ ಮಾರಾಟವಾಗಿದ್ದರೆ, ಶುಕ್ರವಾರ ದರ ಪ್ರತಿ ಕೆಜಿಗೆ ರೂ 63475 ಆಗಿತ್ತು.

ಇದನ್ನೂ ಓದಿ-Gold-Silver Rate : ಆಭರಣ ಪ್ರಿಯರಿಗೆ ಕಹಿ ಸುದ್ದಿ : ಏರಿಕೆಯಾದ ಚಿನ್ನದ ಬೆಲೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News