Vande Bharat Expressನಲ್ಲಿ ಪ್ರಯಾಣಿಸುವವರಿಗೆ ಸಂತಸದ ಸುದ್ದಿ!

IRCTC: ಆಗಸ್ಟ್ 2023 ರ ವೇಳೆಗೆ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲಿನೊಂದಿಗೆ ದೇಶದ 75 ನಗರಗಳನ್ನು ಸಂಪರ್ಕಿಸುವ ಯೋಜನೆಯನ್ನು ಭಾರತೀಯ ರೈಲ್ವೇ ಹೊಂದಿದೆ. ರೈಲ್ವೇ ಸಚಿವಾಲಯದ ಹೊಸ ತಂತ್ರಜ್ಞಾನವನ್ನು ಮುಂಬರುವ ರೈಲುಗಳಲ್ಲಿ ನಾಲ್ಕನೇ ಒಂದು ಭಾಗಕ್ಕೆ ಅಳವಡಿಸಲಾಗುವುದು. ಈ ಕಾರಣದಿಂದಾಗಿ, ರೈಲು ಮೊದಲಿಗಿಂತ ಕಡಿಮೆ ಸಮಯದಲ್ಲಿ ಹೆಚ್ಚು ದೂರ ಕ್ರಮಿಸುತ್ತದೆ.

Written by - Chetana Devarmani | Last Updated : Nov 28, 2022, 06:32 PM IST
  • ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲು
  • ಐದು ವಿವಿಧ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲು
  • ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವವರಿಗೆ ಸಂತಸದ ಸುದ್ದಿ!
Vande Bharat Expressನಲ್ಲಿ ಪ್ರಯಾಣಿಸುವವರಿಗೆ ಸಂತಸದ ಸುದ್ದಿ!   title=
ವಂದೇ ಭಾರತ್ ಎಕ್ಸ್‌ಪ್ರೆಸ್‌

Vande Bharat Express : ಆಗಸ್ಟ್ 2023 ರ ವೇಳೆಗೆ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲಿನೊಂದಿಗೆ ದೇಶದ 75 ನಗರಗಳನ್ನು ಸಂಪರ್ಕಿಸುವ ಯೋಜನೆಯನ್ನು ಭಾರತೀಯ ರೈಲ್ವೇ ಹೊಂದಿದೆ. ಪ್ರಸ್ತುತ, ವಂದೇ ಭಾರತ್ ರೈಲುಗಳು ದೇಶದ ಐದು ವಿವಿಧ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ರೈಲುಗಳ ಓಡಾಟದಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಈಗ ಕಡಿಮೆ ಸಮಯದಲ್ಲಿ ಹೆಚ್ಚು ದೂರ ಕ್ರಮಿಸಬಹುದು. ಮುಂಬರುವ ಸಮಯದಲ್ಲಿ ಇಂಟರ್‌ಸಿಟಿ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ಗಳನ್ನು ವಂದೇ ಭಾರತ್ ರೈಲುಗಳಿಂದ ಬದಲಾಯಿಸಲಾಗುವುದು ಎಂದು ಅನೇಕ ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ : Cholesterol: ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಈ ರೋಗಗಳ ಅಪಾಯವೂ ಹೆಚ್ಚಾಗುತ್ತದೆ!

ಇದೀಗ ಮುಂಬರುವ ದಿನಗಳಲ್ಲಿ ವಂದೇ ಭಾರತ್ ರೈಲಿನ ವೇಗವನ್ನು ಮತ್ತಷ್ಟು ಹೆಚ್ಚಿಸಲು ರೈಲ್ವೆ ಸಚಿವಾಲಯವು ತಂತ್ರಜ್ಞಾನವನ್ನು ಬದಲಾಯಿಸಲು ಯೋಜಿಸುತ್ತಿದೆ ಎಂಬ ಸುದ್ದಿ ಇದೆ. ಇದರಿಂದಾಗಿ ತಿರುವಿನಲ್ಲಿ ರೈಲನ್ನು ನಿಧಾನಗೊಳಿಸುವ ಅಗತ್ಯವಿಲ್ಲ ಮತ್ತು ರೈಲು ಏಕರೂಪದ ವೇಗದಲ್ಲಿ ಹಳಿ ದಾಟುತ್ತದೆ. ಮುಂಬರುವ ರೈಲುಗಳಲ್ಲಿ ನಾಲ್ಕನೇ ಒಂದರಲ್ಲಿ ರೈಲ್ವೇ ಸಚಿವಾಲಯವು ಹೊಸ ತಂತ್ರಜ್ಞಾನವನ್ನು ಅಳವಡಿಸಲಿದೆ. ಈ ಕಾರಣದಿಂದಾಗಿ, ರೈಲು ಮೊದಲಿಗಿಂತ ಹೆಚ್ಚು ದೂರ ಕ್ರಮಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಈಗ ರೈಲನ್ನು ಬಾಗಿದ ಟ್ರ್ಯಾಕ್‌ನಲ್ಲಿ ನಿಧಾನಗೊಳಿಸಬೇಕು. ಇದರಿಂದಾಗಿ ರೈಲಿನ ಸರಾಸರಿ ವೇಗ ಕಡಿಮೆಯಾಗುತ್ತದೆ ಮತ್ತು ರೈಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೊಸ ತಂತ್ರಜ್ಞಾನದ ಬಳಕೆಯಿಂದ ರೈಲು ಅತಿವೇಗದಲ್ಲಿ ತಿರುವು ದಾಟಲು ಸಾಧ್ಯವಾಗುತ್ತದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಈಗಿರುವ ಹಳಿಯಲ್ಲಿಯೇ 'ಟಿಲ್ಟ್ ತಂತ್ರಜ್ಞಾನ'ದೊಂದಿಗೆ ವಂದೇ ಭಾರತ್ ರೈಲನ್ನು ಓಡಿಸಲು ಸಿದ್ಧತೆ ನಡೆದಿದೆ. ಈ ತಂತ್ರದ ನಂತರ, ರೈಲು ಬಾಗಿದ ಹಳಿಯಲ್ಲಿ ಬಾಗುತ್ತದೆ, ರೈಲಿನಲ್ಲಿ ಕುಳಿತ ಪ್ರಯಾಣಿಕರಿಗೂ ಅದರ ಬಗ್ಗೆ ತಿಳಿಯುವುದಿಲ್ಲ.

ಇದನ್ನೂ ಓದಿ : Cows Beauty Competition: ಇಲ್ಲಿ ನಡೆಯುತ್ತೆ ಹಸುಗಳ ಸೌಂದರ್ಯ ಸ್ಪರ್ಧೆ!

ಮುಂಬರುವ ಸಮಯದಲ್ಲಿ, ರೈಲ್ವೇ ಸಚಿವಾಲಯವು ದೇಶಾದ್ಯಂತ 400 ವಂದೇ ಭಾರತ್ ರೈಲುಗಳನ್ನು ಓಡಿಸುವ ಯೋಜನೆಯನ್ನು ಹೊಂದಿದೆ. ಈ 400 ರೈಲುಗಳ ಪೈಕಿ 100 ದೂರದ ರೈಲುಗಳಲ್ಲಿ 'ಟಿಲ್ಟ್ ತಂತ್ರಜ್ಞಾನ' ಬಳಸಲಾಗುವುದು. ಇದೀಗ ಇಟಲಿ, ರಷ್ಯಾ, ಸ್ವಿಟ್ಜರ್ಲೆಂಡ್, ಚೀನಾ, ಜರ್ಮನಿ ಮೊದಲಾದ ದೇಶಗಳಲ್ಲಿ ಈ ತಂತ್ರಜ್ಞಾನದಲ್ಲಿ ರೈಲುಗಳು ಓಡುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News