Pension Scheme: ಈ ಯೋಜನೆಯಲ್ಲಿ ಸರ್ಕಾರ ನೀಡುತ್ತೆ 72,000 ರೂ. ಇಂದೇ ಅರ್ಜಿ ಸಲ್ಲಿಸಿ

Modi Government Pension Scheme: ಹೊಸ ವರ್ಷದ ಸಂದರ್ಭದಲ್ಲಿ, ನೀವು ಕೂಡ ಸರ್ಕಾರದ ಒಂದು ಅದ್ಭುತ ಯೋಜನೆಯಲ್ಲಿ ಹಣ ತೊಡಗಿಸಿದರೆ, ಭವಿಷ್ಯದಲ್ಲಿ ನೀವು ಸಾಕಷ್ಟು ಭದ್ರತೆಯನ್ನು ಪಡೆಯಬಹುದು. ಏಕೆಂದರೆ ಈ ಯೋಜನೆಯಲ್ಲಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿದರೆ, ನೀವು ವಾರ್ಷಿಕವಾಗಿ 72 ಸಾವಿರ ರೂಪಾಯಿಗಳನ್ನು ಪಡೆಯಬಹುದು.  

Written by - Nitin Tabib | Last Updated : Dec 31, 2022, 09:35 PM IST
  • ಕೇಂದ್ರ ಸರ್ಕಾರದ ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ವಯ್ ವಂದನಾ ಯೋಜನೆ,
  • ಇದರ ಮೂಲಕ ಜನರು ಸಾಮಾಜಿಕ ಭದ್ರತೆಯನ್ನು ಪಡೆಯುತ್ತಾರೆ. ಈ ಯೋಜನೆಯಡಿಯಲ್ಲಿ,
  • ಪಿಂಚಣಿದಾರರಿಗೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತದೆ.
Pension Scheme: ಈ ಯೋಜನೆಯಲ್ಲಿ ಸರ್ಕಾರ ನೀಡುತ್ತೆ 72,000 ರೂ. ಇಂದೇ ಅರ್ಜಿ ಸಲ್ಲಿಸಿ title=
Pradhan Mantri Vaya Vandana Yojana

PMVVY: ಹೊಸ ವರ್ಷದ ಸಂದರ್ಭದಲ್ಲಿ, ನೀವು ಕೂಡ ಸರ್ಕಾರದ ಒಂದು ಅದ್ಭುತ ಯೋಜನೆಯಲ್ಲಿ ಹಣ ತೊಡಗಿಸಿದರೆ, ಭವಿಷ್ಯದಲ್ಲಿ ನೀವು ಸಾಕಷ್ಟು ಭದ್ರತೆಯನ್ನು ಪಡೆಯಬಹುದು. ಏಕೆಂದರೆ ಈ ಯೋಜನೆಯಲ್ಲಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿದರೆ, ನೀವು ವಾರ್ಷಿಕವಾಗಿ 72 ಸಾವಿರ ರೂಪಾಯಿಗಳನ್ನು ಪಡೆಯಬಹುದು.ಹೆಚ್ಚಿನ ಸಂಖ್ಯೆಯಲ್ಲಿ ಜನರು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಕಾಲ ಇದು.  ಈ ಜನರು ಭವಿಷ್ಯದ ಬಗ್ಗೆ ತುಂಬಾ ಚಿಂತಿತರಾಗಿರುತ್ತಾರೆ. ಇದಕ್ಕೆ ಕಾರಣ ಎಂದರೆ ನಿವೃತ್ತಿಯ ನಂತರ ಮನೆಯ ಖರ್ಚುಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಹೀಗಿರುವಾಗ ಟೆನ್ಷನ್ ಇಲ್ಲದೆ ಜೀವನ ನಡೆಸಬೇಕೆಂದರೆ ಕೂಡಲೇ ನೀವು ಸರಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಡಿ ನಿಮಗೆ ಸರಕಾರದಿಂದ ವರ್ಷಕ್ಕೆ 72 ಸಾವಿರ ರೂ.ಸಿಗುತ್ತದೆ

ವರ್ಷಕ್ಕೆ 72 ಸಾವಿರ ರೂಪಾಯಿ ಸಿಗುತ್ತದೆ
ಪ್ರಧಾನ ಮಂತ್ರಿ ವಯ್ ವಂದನಾ ಯೋಜನೆಯಲ್ಲಿ 9 ಲಕ್ಷ ರೂ.ಗಳ ಮೊತ್ತವನ್ನು ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 72 ಸಾವಿರ ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಶೇ.7.40% ವಾರ್ಷಿಕ ಬಡ್ಡಿಯನ್ನು LIC ನಿಮಗೆ ನೀಡುತ್ತದೆ. ಮತ್ತೊಂದೆಡೆ, ನೀವು ಅರ್ಧವಾರ್ಷಿಕ ಪಿಂಚಣಿ ಪಡೆಯಲು ಬಯಸಿದರೆ, ಪ್ರತಿ ಆರು ತಿಂಗಳಿಗೊಮ್ಮೆ ನಿಮಗೆ 36 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇದೇ ವೇಳೆ, ಈ ಯೋಜನೆಯಲ್ಲಿ ಮಾಸಿಕ ಪಿಂಚಣಿ ತೆಗೆದುಕೊಳ್ಳುವ ಆಯ್ಕೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಎಲ್ ಐಸಿಯಿಂದ ಪ್ರತಿ ತಿಂಗಳು 6 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ.

ಇದನ್ನೂ ಓದಿ-SSY: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸರ್ಕಾರ ಮಾಡಿರುವ 5 ಬದಲಾವಣೆಗಳು ನಿಮಗೆ ಗೊತ್ತಿರಲಿ

ಹೂಡಿಕೆ ಮಾಡುವ ಮೊದಲು ಈ ಯೋಜನೆಯ ಮಾಹಿತಿ ನಿಮಗೆ ತಿಳಿದಿರಲಿ
ಕೇಂದ್ರ ಸರ್ಕಾರದ ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ವಯ್ ವಂದನಾ ಯೋಜನೆ, ಇದರ ಮೂಲಕ ಜನರು ಸಾಮಾಜಿಕ ಭದ್ರತೆಯನ್ನು ಪಡೆಯುತ್ತಾರೆ. ಈ ಯೋಜನೆಯಡಿಯಲ್ಲಿ, ಪಿಂಚಣಿದಾರರಿಗೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಂದಿದೆ. ಈ ಯೋಜನೆಯಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮಾತ್ರ ಅರ್ಜಿ ಸಲ್ಲಿಸಬಹುದು. ಹೂಡಿಕೆದಾರರು ಈ ಯೋಜನೆಯಲ್ಲಿ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.

ಇದನ್ನೂ ಓದಿ-Budget 2023 Expectations: PPF ಖಾತೆದಾರರಿಗೆ ಭಾರಿ ಸಂತಸದ ಸುದ್ದಿ!

ಹೂಡಿಕೆ ಮೊತ್ತವನ್ನು ಹಿಂಪಡೆಯಬಹುದು
ಈ ಯೋಜನೆಯಲ್ಲಿ ಅತ್ಯಂತ ಪ್ರಮುಖ ಹೈಲೈಟ್ ಎಂದರೆ, ಈ ಯೋಜನೆಯಲ್ಲಿ ನೀವು ಎಷ್ಟೇ ಹಣವನ್ನು ಹೂಡಿಕೆ ಮಾಡಿದರೂ, ಆ ಮೊತ್ತವನ್ನು LIC ನಿಮಗೆ ಹಿಂತಿರುಗಿಸುತ್ತದೆ, ಅಂದರೆ ಈ ಯೋಜನೆಯಲ್ಲಿ ನೀವು ಎಷ್ಟು ಹಣವನ್ನು ಹೂಡಿಕೆ ಮಾಡುತ್ತೀರೋ, LIC ಆ ಮೊತ್ತವನ್ನು 10 ವರ್ಷಗಳ ನಂತರ ನಿಮಗೆ ಹಿಂತಿರುಗಿಸುತ್ತದೆ. ಆದರೆ, ಈ ಯೋಜನೆಯಲ್ಲಿ, ನೀವು ಪಿಂಚಣಿ ಪಡೆಯುವುದನ್ನು ಮುಂದುವರಿಸುತ್ತೀರಿ ಮತ್ತು ಸಮಯದ ಮಿತಿಯ ನಂತರ, ಹೂಡಿಕೆಯ ಮೊತ್ತವನ್ನು ನಿಮಗೆ ಮತ್ತೆ ಹಿಂದಿರುಗಿಸಲಾಗುತ್ತದೆ. ನೀವು ಮಧ್ಯದಲ್ಲಿ ಪಾಲಿಸಿಯನ್ನು ಹಿಂದಿರುಗಿಸಿದರೆ, ಈ ಯೋಜನೆಯಡಿಯಲ್ಲಿ ನೀವು ಮಾಡುವ ಯಾವುದೇ ಮೊತ್ತ ನಿಮ್ಮ ಬಳಿಗೆ ಮರಳುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News