ಆತಂಕದ ಬೆನ್ನಲ್ಲೇ ಸಿಹಿ ಸುದ್ದಿ ! UPI ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ಇಲ್ಲ ಎಂದ ಎನ್‌ಪಿಸಿಐ

UPI Payment latest news : ಯುಪಿಐ ಪೇಮೆಂಟ್ ಗೆ ಸಂಬಂಧಿಸಿದಂತೆ ಹಳೆಯ ವ್ಯವಸ್ಥೆಯೇ  ಮುಂದುವರಿಯಲಿದೆ ಎಂದು ಸರ್ಕಾರ ಹೊರಡಿಸಿರುವ ಹೇಳಿಕೆಯಲ್ಲಿ ಸಷ್ಟಪಡಿಸಿದೆ. ಹಳೆಯ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಹೇಳಿದೆ. 

Written by - Ranjitha R K | Last Updated : Mar 29, 2023, 02:52 PM IST
  • ಗ್ರಾಹಕರ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ
  • NCPI ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟನೆ
  • ಮುಂದುವರಿಯಲಿದೆ ಹಳೆ ವ್ಯವಸ್ಥೆ
ಆತಂಕದ ಬೆನ್ನಲ್ಲೇ ಸಿಹಿ ಸುದ್ದಿ ! UPI ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ಇಲ್ಲ ಎಂದ ಎನ್‌ಪಿಸಿಐ title=

ಬೆಂಗಳೂರು : ಯುಪಿಐ ಪಾವತಿಯ ಮೇಲೆ ಗ್ರಾಹಕರ ಮೇಲೆ  ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. NCPI ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, UPI ಅನ್ನು ಬಳಸುವುದು ಸಂಪೂರ್ಣವಾಗಿ ಉಚಿತ, ವೇಗ ಮತ್ತು ಸುರಕ್ಷಿತ ಎಂದು ಹೇಳಿದೆ. UPI ಮೂಲಕ, ಗ್ರಾಹಕರು ಮತ್ತು ಅಂಗಡಿಕಾರರ ಪರವಾಗಿ ಪ್ರತಿ ತಿಂಗಳು 8 ಶತಕೋಟಿಗೂ ಹೆಚ್ಚು ವಹಿವಾಟುಗಳನ್ನು ಮಾಡಲಾಗುತ್ತದೆ. 

ಮುಂದುವರಿಯಲಿದೆ ಹಳೆ ವ್ಯವಸ್ಥೆ : 
ಯುಪಿಐ ಪೇಮೆಂಟ್ ಗೆ ಸಂಬಂಧಿಸಿದಂತೆ ಹಳೆಯ ವ್ಯವಸ್ಥೆಯೇ  ಮುಂದುವರಿಯಲಿದೆ ಎಂದು ಸರ್ಕಾರ ಹೊರಡಿಸಿರುವ ಹೇಳಿಕೆಯಲ್ಲಿ ಸಷ್ಟಪಡಿಸಿದೆ. ಹಳೆಯ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಹೇಳಿದೆ. 2000 ರೂ.ವರೆಗಿನ ಪಾವತಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ. ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ಮಾಡುವ  ಪಾವತಿಯ ಮೇಲೆ ಕೂಡಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಪ್ರಿಪೇಯ್ಡ್ ವ್ಯಾಲೆಟ್ ಮೂಲಕ ಮಾಡಿದ ಯುಪಿಐ ಪಾವತಿಯ ಮೇಲಿನ ಶುಲ್ಕವನ್ನು ವ್ಯಾಪಾರಿ ಪಾವತಿಸಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ : April 1 ರಿಂದ ಈ ಸಂಗತಿಗಳು ದುಬಾರಿಯಾಗಲಿವೆ, ಅಗ್ಗದ ದರದಲ್ಲಿ ಇಂದೇ ಖರೀದಿಸಿ!

Google Pay, Paytm ಅಥವಾ Phone Pay ಮೂಲಕ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಇದಕ್ಕೂ ಮೊದಲು ಹೇಳಲಾಗಿತ್ತು. ಈ ಬಗ್ಗೆ ಅನೇಕ ಮಾಧ್ಯಮಗಳು ಕೂಡಾ ವರದಿ ಮಾಡಿತ್ತು. ಏಪ್ರಿಲ್ 1 ರಿಂದ ಈ 1.1 ಶೇಕಡಾ ಶುಲ್ಕವನ್ನು ಗ್ರಾಹಕರಿಂದ ತೆಗೆದುಕೊಳ್ಳಲಾಗುವುದು ಎಂದು ವರದಿಯಲ್ಲಿ ಹೇಳಲಾಗಿತ್ತು. ಇದೀಗ ಈ  ಬಗ್ಗೆ ಸ್ಪಷ್ಟನೆ ನೀಡಿರುವ NCPI ಗ್ರಾಹಕರ ಆತಂಕವನ್ನು ದೂರ ಮಾಡಿದೆ.  

ಇದನ್ನೂ ಓದಿ : ವಿವಾಹಿತ ಮಹಿಳೆಯರಿಗೆ ಕೇಂದ್ರ ಸರ್ಕಾರ ನೀಡುತ್ತಿದೆ 6,000 ರೂಪಾಯಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News