Health Insurance: ವಿಮಾದಾರರಿಗೆ ಖುಷಿ ಸುದ್ದಿ, ವಿಮಾ ಕಂಪನಿಗಳಿಗೆ ಈ ಅನುಮತಿ ನೀಡಿದ IRDA

ಭಾರತದಲ್ಲಿನ ವಿಮಾ ಕಂಪನಿಗಳು IRDA ಯಿಂದ ಗುರುತಿಸಲ್ಪಟ್ಟಿವೆ. ಬೆಂಕಿ ದುರಂತದ ಅಪಾಯ ಒಳಗೊಂಡಿರುವ ಪರ್ಯಾಯ ವಿಮೆ ಯೋಜನೆಗಳನ್ನು ರೂಪಿಸಲು IRDA ಕಂಪನಿಗಳಿಗೆ ಅನುಮೋದನೆ ನೀಡಿದೆ.

Written by - Zee Kannada News Desk | Last Updated : May 13, 2022, 07:33 PM IST
  • ಬೆಂಕಿ ದುರಂತ & ಸಂಬಂಧಿತ ಅಪಾಯಗಳಿಗೆ ಪರ್ಯಾಯ ವಿಮೆ ಯೋಜನೆ ರೂಪಿಸಲು ಅವಕಾಶ
  • ಗ್ರಾಹಕರಿಗೆ ಹೆಚ್ಚಿನ ಆಯ್ಕೆ ನೀಡುವುದು ಮತ್ತು ವಿಮೆ ವ್ಯಾಪ್ತಿಯನ್ನು ಹೆಚ್ಚಿಸುವ ಉದ್ದೇಶ
  • ಭಾರತೀಯ ವಿಮಾ ಕಂಪನಿಗಳಿಗೆ ವಿಶೇಷ ಸ್ಕೀಮ್ ರೂಪಿಸಲು ಅನುಮತಿ ನೀಡಿದ IRDA
Health Insurance: ವಿಮಾದಾರರಿಗೆ ಖುಷಿ ಸುದ್ದಿ, ವಿಮಾ ಕಂಪನಿಗಳಿಗೆ ಈ ಅನುಮತಿ ನೀಡಿದ IRDA title=
ಪರ್ಯಾಯ ವಿಮಾ ಯೋಜನೆ ರೂಪಿಸಲು ಅನುಮತಿ

ನವದೆಹಲಿ: ವಿಮಾ ನಿಯಂತ್ರಕ IRDA ಗುರುವಾರ ಸಾಮಾನ್ಯ ವಿಮಾ ಕಂಪನಿಗಳಿಗೆ ಬೆಂಕಿ ದುರಂತ ಮತ್ತು ಸಂಬಂಧಿತ ಅಪಾಯಗಳು ಸೇರಿದಂತೆ ಇನ್ನಿತರ ಘಟನೆಗಳಿಗೆ ಪರ್ಯಾಯ ವಿಮೆ ಯೋಜನೆ(Scheme)ಗಳನ್ನು ರೂಪಿಸಲು ಅವಕಾಶ ಮಾಡಿಕೊಟ್ಟಿದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವುದು ಮತ್ತು ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.

ಮಾರ್ಗಸೂಚಿ ಹೊರಡಿಸಲಾಗಿದೆ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ಜನವರಿ 2021ರಲ್ಲಿ ಬೆಂಕಿ ದುರಂತ ಮತ್ತು ಇತರ ಅಪಾಯಗಳಿಂದ ರಕ್ಷಿಸಲು ಪ್ರಮಾಣಿತ ವಿಮಾ ಸ್ಕೀಮ್‍ಗಳನ್ನು (ಭಾರತ್ ಗೃಹ ರಕ್ಷಾ, ಭಾರತ್ ಮೈಕ್ರೋ ಉದ್ಯೋಗ್ ಸುರಕ್ಷಾ ಮತ್ತು ಭಾರತ್ ಮೈಕ್ರೋ ಮತ್ತು ಸ್ಮಾಲ್ ಬಿಸಿನೆಸ್) ಪರಿಚಯಿಸಿದೆ. ಈ ನಿಟ್ಟಿನಲ್ಲಿ ಸಣ್ಣ ಉದ್ಯಮ ಭದ್ರತೆಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: SBI Scheme : SBI ಗ್ರಾಹಕರಿಗೆ ಗುಡ್ ನ್ಯೂಸ್ : ಬ್ಯಾಂಕ್ ನಿಂದ ಭರ್ಜರಿ ಗಿಫ್ಟ್!

ವಿಮೆ ಯೋಜನೆ ರೂಪಿಸಲು ಅನುಮತಿ

ಬೆಂಕಿ ದುರಂತ ಮತ್ತು ಸಂಬಂಧಿತ ಅಪಾಯಗಳಿಗಾಗಿ ಈ ಪ್ರಮಾಣಿತ ವಿಮೆ ಯೋಜನೆಗಳ ನಂತರ ಯಾವುದೇ ಇತರ ಸ್ಕೀಮ್‍ಗಳನ್ನು ಅನುಮತಿಸಲಾಗಿಲ್ಲ. ಅಗ್ನಿ ದುರಂತಕ್ಕೆ ಸಂಬಂಧಿಸಿದ ಪರ್ಯಾಯ ವಿಮೆ ಯೋಜನೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ (ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಸಾಮಾನ್ಯ ವಿಮಾ ಕಂಪನಿಗಳಿಗೆ ಇಂತಹ ವಿಮೆ ಸ್ಕೀಮ್‍ಗಳನ್ನು ರೂಪಿಸಲು ಅವಕಾಶ ನೀಡುತ್ತದೆ ಎಂದು IRDA ಸುತ್ತೋಲೆಯಲ್ಲಿ ತಿಳಿಸಿದೆ.

IRDA ಹೇಗೆ ಕೆಲಸ ಮಾಡುತ್ತದೆ?

ಭಾರತದಲ್ಲಿ IRDA ವಿಮಾ ಕಂಪನಿಗಳನ್ನು ಗುರುತಿಸುತ್ತದೆ ಮತ್ತು ವಿಮಾ ಕ್ಷೇತ್ರವನ್ನು ನೋಡಿಕೊಳ್ಳುತ್ತದೆ. ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಭಾರತದಲ್ಲಿ ವಿವಿಧ ರೀತಿಯ ವಿಮಾ ಕಂಪನಿಗಳನ್ನು ಉತ್ತೇಜಿಸುತ್ತದೆ. IRDA ಈ ಕಂಪನಿಗಳನ್ನು ನಿಯಂತ್ರಿಸುವ ಶಾಸನಬದ್ಧ ಸಂಸ್ಥೆಯಾಗಿದೆ.

ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : DA ಶೇ.13ರಷ್ಟು ಹೆಚ್ಚಳ, 3 ತಿಂಗಳ ಬಾಕಿ ಹಣ ಕೈಗೆ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News