ನವದೆಹಲಿ : LPG Cylinder Rates: ಬೆಲೆ ಏರಿಕೆಯಿಂದಾಗಿ, ಜನಸಾಮಾನ್ಯರು ತತ್ತರಿಸುವಂತಾಗಿದೆ. ಈ ನಡುವೆ ಫೆಬ್ರವರಿ ಮೊದಲ ದಿನ ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial gas cylinder) ಬೆಲೆಯಲ್ಲಿ 91.5 ರೂಪಾಯಿ ಇಳಿಕೆಯಾಗಿದೆ. ಆದರೆ, ಅಡುಗೆ ಅನಿಲದ ಬೆಲೆಯಲ್ಲಿ (LPG Price) ಯಾವುದೇ ಬದಲಾವಣೆಯಾಗಿಲ್ಲ.
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ :
ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು (OMC) ಫೆಬ್ರವರಿ ತಿಂಗಳ ಅಡುಗೆ ಅನಿಲ ಬೆಲೆಗಳನ್ನು ಬಿಡುಗಡೆ ಮಾಡಿದೆ (LPG Gas Cylinder Price Today). ಇದರ ಪ್ರಕಾರ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ (LPG Gas cylinder) ಯಾವುದೇ ಬದಲಾವಣೆ ಮಾಡಲಾಗಿಲ್ಲ. 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 91.5 ರೂ ಕಡಿತಗೊಳಿಸಲಾಗಿದೆ. ಬೆಲೆ ಇಳಿಕೆ ಬಳಿಕ ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1907 ರೂ.ಆಗಿದೆ.
ಇದನ್ನೂ ಓದಿ : Budget 2022: 49 ವರ್ಷಗಳ ಹಿಂದೆ Black Budget ಮಂಡನೆಯಾಗಿತ್ತು, ಕಾರಣ ಏನು ಗೊತ್ತಾ?
ಕಳೆದ ತಿಂಗಳು ಕೂಡಾ ಬೆಲೆ ಕಡಿತಗೊಂಡಿತ್ತು :
ಕಳೆದ ತಿಂಗಳು ಅಂದರೆ ಜನವರಿ 2022 ರಲ್ಲಿ LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 102.50 ರೂ ಕಡಿತಗೊಳಿಸಲಾಗಿತ್ತು (LPG Gas Cylinder Price). ಇದೀಗ ಫೆಬ್ರವರಿ ಮೊದಲ ದಿನವೇ, ಬಜೆಟ್ ಮಂಡನೆಗೂ (Budget 2022) ಮುನ್ನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಡಿತ ಮಾಡಲಾಗಿದೆ. ಆದರೆ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುವುದು ಗಮನಾರ್ಹ.
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಹೊಸ ದರ :
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಬೆಲೆ 91.5 ರೂ.ನಿಂದ 1,907 ರೂ.ಗೆ ಇಳಿದಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1987 ರೂ.ಗೆ ಇಳಿದಿದ್ದರೆ, ಮುಂಬೈನಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ದರ 1857 ರೂ ಆಗಿದೆ. ಇನ್ನು ಚೆನ್ನೈನಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50.5 ರೂಪಾಯಿ ಕಡಿತದ ನಂತರ ಬೆಲೆ 2080.5 ರೂ. ಆಗಿದೆ.
ಇದನ್ನೂ ಓದಿ : Stock Market Before Budget 2022: ಷೇರು ಮಾರುಕಟ್ಟೆಯಲ್ಲಿ ಭಾರಿ ಗೂಳಿ ಜಿಗಿತ, ಸೆನ್ಸೆಕ್ಸ್ 590 ಅಂಕಗಳ ಏರಿಕೆಯೊಂದಿಗೆ ಆರಂಭ
ನಿಮ್ಮ ನಗರದ ಬೆಲೆಗಳನ್ನು ಈ ರೀತಿ ಪರಿಶೀಲಿಸಿಕೊಳ್ಳಿ :
ನಿಮ್ಮ ನಗರದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಹೊಸ ಬೆಲೆಗಳನ್ನು ಸರ್ಕಾರಿ ತೈಲ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಇದಕ್ಕಾಗಿ, IOCL ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ವೆಬ್‌ಸೈಟ್‌ನಲ್ಲಿ ರಾಜ್ಯ, ಜಿಲ್ಲೆ ಮತ್ತು ವಿತರಕರನ್ನು ಆಯ್ಕೆ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಗ್ಯಾಸ್ ಸಿಲಿಂಡರ್ ಬೆಲೆಗಳು ಕಾಣಿಸಿಕೊಳ್ಳುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.