Jio ಗ್ರಾಹಕರಿಗೆ ಸಿಹಿ ಸುದ್ದಿ : ಹೊಸ ರೀಚಾರ್ಜ್ ಸೇವೆ ಆರಂಭಿಸಿದ ಜಿಯೋ ಕಂಪನಿ

ಜಿಯೋ ಬಳಕೆದಾರರು ಇನ್ನು ಮುಂದೆ ವಾಟ್ಸಾಪ್ ಮೂಲಕ ತಮ್ಮ ಜಿಯೋ ರೀಚಾರ್ಜ್‌

Last Updated : Jun 10, 2021, 11:19 AM IST
  • ಭಾರತದ ಅತೀ ದೊಡ್ಡ ಟೆಲಿಕಾಂ ಕಂಪನಿ ಜಿಯೋ
  • ಜಿಯೋ ಬಳಕೆದಾರರು ಇನ್ನು ಮುಂದೆ ವಾಟ್ಸಾಪ್ ಮೂಲಕ ತಮ್ಮ ಜಿಯೋ ರೀಚಾರ್ಜ್‌
  • ಜಿಯೋ ಗ್ರಾಹಕರು ಈಗ ರೀಚಾರ್ಜ್, ಹಣ ಪಾವತಿ, ದೂರು ವಾಟ್ಸಾಪ್ ಮೂಲಕ
Jio ಗ್ರಾಹಕರಿಗೆ ಸಿಹಿ ಸುದ್ದಿ : ಹೊಸ ರೀಚಾರ್ಜ್ ಸೇವೆ ಆರಂಭಿಸಿದ ಜಿಯೋ ಕಂಪನಿ title=

ನವದೆಹಲಿ : ತನ್ನ ಬಳಕೆದಾರರಿಗೆ ಹೊಸ ಸೇವೆಗಳನ್ನು ಒದಗಿಸುತ್ತಾ ಬಂದಿರುವ ಭಾರತದ ಅತೀ ದೊಡ್ಡ ಟೆಲಿಕಾಂ ಕಂಪನಿ ಜಿಯೋ, ಮತ್ತೊಂದು ವಿನೂತನ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಜಿಯೋ ಬಳಕೆದಾರರು ಇನ್ನು ಮುಂದೆ ವಾಟ್ಸಾಪ್ ಮೂಲಕ ತಮ್ಮ ಜಿಯೋ ರೀಚಾರ್ಜ್‌ ಮಾಡಬಹುದು.

ಜಿಯೋ ಗ್ರಾಹಕರು(Jio Customers) ಈಗ ರೀಚಾರ್ಜ್, ಹಣ ಪಾವತಿ, ದೂರು ನೀಡುವುದು ಮತ್ತು ಇನ್ನೂ ಅನೇಕ ಚಟುವಟಿಕೆಗಳನ್ನು ವಾಟ್ಸಾಪ್ ಮೂಲಕವೇ ಮಾಡಬಹುದಾಗಿದೆ. ಜಿಯೋ ಹೊಸ ಸಿಮ್ ಪಡೆಯಲು ಅಥವಾ ಪೋರ್ಟ್ ಮಾಡಲು (ಎಂಎನ್‌ಪಿ), ಜಿಯೋ ಸಿಮ್‌ಗೆ ಇರುವ ಸವಲತ್ತುಗಳನ್ನು ತಿಳಿಯಲು, ಜಿಯೋ ಫೈಬರ್ ಹಾಗೂ ಜಿಯೋ ಮಾರ್ಟ್ ಸೌಲಭ್ಯ ಹಾಗೂ ಅಂತಾರಾಷ್ಟ್ರೀಯ ರೋಮಿಂಗ್ ಸವಲತ್ತುಗಳನ್ನು ವಾಟ್ಸಾಪ್ ಮುಖಾಂತರವೇ ಪಡೆಯಬಹುದಾಗಿದೆ.

ಇದನ್ನೂ ಓದಿ : Vaccination Certificate : ಕರೋನಾ ಲಸಿಕೆ ಹಾಕಿಸಿಕೊಂಡರೆ ಮಾತ್ರ Term Insurance..!

70007 70007 ಸಂಖ್ಯೆಯನ್ನು ಸೇವ್ ಮಾಡಿಕೊಂಡು 'ಹಾಯ್' (Hi) ಎಂದು ವಾಟ್ಸಾಪ್(WhatsApp) ಗೆ ಎಸ್‌ಎಂಎಸ್ ಕಳುಹಿಸಿದರೆ. ವ್ಯಾಲೆಟ್, ಯುಪಿಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮುಂತಾದವುಗಳ ಮೂಲಕ ಹಣ ಪಾವತಿ ಆಯ್ಕೆಗಳನ್ನು ಪಡೆದುಕೊಳ್ಳಬಹುದು. ಜಿಯೋ ಮಾರ್ಟ್‌ನಿಂದ ನಿಮಗೆ ಬೇಕಾದ ಉತ್ಪನ್ನಗಳನ್ನು ವಾಟ್ಸಾಪ್ ಮೂಲಕವೇ ಆರ್ಡರ್ ಮಾಡಿ ತರಿಸಿಕೊಳ್ಳಲು ಸಹ ಅವಕಾಶವಿದೆ.

ಇದನ್ನೂ ಓದಿ : PM Kisan Yojana : ಒಂದೇ ಸಲ ಎರಡು ಕಂತಿನ ಹಣ ಪಡೆಯಲು ಶೀಘ್ರವೇ ಈ ಕೆಲಸ ಮಾಡಿ

ಆರಂಭದಲ್ಲಿ ಈ ಸೇವೆಗಳು ಇಂಗ್ಲಿಷ್(English) ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಿ ಭಾಷೆಗಳೂ ಲಭ್ಯವಾಗಲಿವೆ.

ವಾಟ್ಸಾಪ್ ಮೂಲಕ ಸಿಗುವ Jio ಸೌಲಭ್ಯಗಳು :

1. ಜಿಯೋ ಸಿಮ್ ರೀಚಾರ್ಜ್(Jio Sim Recharge)

ಇದನ್ನೂ ಓದಿ : Post Office: ಪೋಸ್ಟ್ ಆಫೀಸ್‌ನೊಂದಿಗೆ ಕೇವಲ ₹5000 ಹೂಡಿಕೆ ಮಾಡಿ ಬುಸಿನೆಸ್ಸ್ ಪ್ರಾರಂಭಿಸಿ

2. ಹೊಸ ಜಿಯೋ ಸಿಮ್ ಪಡೆಯುವುದು ಅಥವಾ ಪೋರ್ಟ್-ಇನ್ (MNP)

3. ಜಿಯೋ ಸಿಮ್‌(Jio Sim)ಗೆ ನೆರವು

4. ಜಿಯೋ ಫೈಬರ್(JioFiber) ನೆರವು

ಇದನ್ನೂ ಓದಿ : Bank privatization : ಎರಡು ಬ್ಯಾಂಕುಗಳ ಖಾಸಗೀಕರಣ ..! ನೌಕರರಿಗಾಗಿ ಸಿದ್ದವಾಗುತ್ತಿದೆ ವಿಆರ್ ಎಸ್ ಪ್ಲಾನ್

5. ಅಂತಾರಾಷ್ಟ್ರೀಯ ರೋಮಿಂಗ್ ನೆರವು

6. ಜಿಯೋ ಮಾರ್ಟ್‌(JioMart) ನೆರವು

ಇದನ್ನೂ ಓದಿ : Flipkart Launches QR-Code :ಡಿಜಿಟಲ್ ಪಾವತಿಗೆ QR ಕೋಡ್‌ ಆರಂಭಿಸಿದ Flipkart..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News