ST Somashekar: ಅರ್ಹ ಎಲ್ಲ ರೈತರಿಗೂ ಸಾಲಮನ್ನಾ ಸವಲತ್ತು..!?

ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದೊಡ್ಡಗೌಡರ ಮಹಂತೇಶ ಬಸವಂತರಾಯ ಅವರ ಪರವಾಗಿ ಹಾಲಪ್ಪ ಆಚಾರ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

Last Updated : Jan 29, 2021, 11:04 PM IST
  • ಸಾಲ ಮನ್ನಾ ಯೋಜನೆಯಡಿ ಅರ್ಹರಾಗಿ ಮಾಹಿತಿಯನ್ನು ಅಪ್‍ಲೋಡ್ ಮಾಡಿದ್ದ ರೈತರಿಗೂ ಸಾಲ ಮನ್ನಾ ಪ್ರಯೋಜನ ದೊರೆಯುವಂತೆ ಕ್ರಮ
  • ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಧಾನಸಭೆಗೆ ಭರವಸೆ ನೀಡಿದರು.
  • ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದೊಡ್ಡಗೌಡರ ಮಹಂತೇಶ ಬಸವಂತರಾಯ ಅವರ ಪರವಾಗಿ ಹಾಲಪ್ಪ ಆಚಾರ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ST Somashekar: ಅರ್ಹ ಎಲ್ಲ ರೈತರಿಗೂ ಸಾಲಮನ್ನಾ ಸವಲತ್ತು..!? title=

ಬೆಂಗಳೂರು: ಸಾಲ ಮನ್ನಾ ಯೋಜನೆಯಡಿ ಅರ್ಹರಾಗಿ ಮಾಹಿತಿಯನ್ನು ಅಪ್‍ಲೋಡ್ ಮಾಡಿದ್ದ ರೈತರಿಗೂ ಸಾಲ ಮನ್ನಾ ಪ್ರಯೋಜನ ದೊರೆಯುವಂತೆ ಕ್ರಮ ಕೈಗೊಳ್ಳಲು ಪರಿಶೀಲನೆ ಮಾಡುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್(ST Somashekar) ವಿಧಾನಸಭೆಗೆ ಭರವಸೆ ನೀಡಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದೊಡ್ಡಗೌಡರ ಮಹಂತೇಶ ಬಸವಂತರಾಯ ಅವರ ಪರವಾಗಿ ಹಾಲಪ್ಪ ಆಚಾರ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಮಧ್ಯ ಪ್ರವೇಶಿಸಿದ ಸ್ಪೀಕರ್ ಅವರು, ಈಗಾಗಲೇ ಸಾಲ ಮನ್ನಾ ಯೋಜನೆಗೆ ಅರ್ಹರಾಗಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ್ದವರನ್ನು ಡಿಲೀಟ್ ಮಾಡಿಸಿದ್ದರಿಂದ ಸಮಸ್ಯೆ ಶುರುವಾಗಿದೆ. ಅಪ್‍ಲೋಡ್ ಆಗಿದ್ದ ಎಲ್ಲ ಅರ್ಹರಿಗೂ ಸಾಲ ಮನ್ನಾ ಯೋಜನೆ ಪ್ರಯೋಜನ ದೊರೆಯಲು ಪರಿಶೀಲಿಸಬೇಕೆಂದು ಸಲಹೆ ಮಾಡಿದರು.

S.Suresh Kumar: ಶಿಕ್ಷಕರ ಪರವಾಗಿ ಮೋದಿ ಮುಂದೆ ಮಹತ್ವದ ಬೇಡಿಕೆ ಇಟ್ಟ ಸಚಿವ ಸುರೇಶ್ ಕುಮಾರ್!

ಇದಕ್ಕೆ ಸಮ್ಮತಿಸಿದ ಸಚಿವರು, ಬೆಳಗಾವಿ ಜಿಲ್ಲೆಯಲ್ಲಿ 2,65,690 ರೈತರನ್ನು ಸಾಲ ಮನ್ನಾ ಮಾಡಲು ಗುರುತಿಸಲಾಗಿದ್ದು, 2033 ರೈತರು ಬಾಕಿ ಉಳಿದಿದ್ದು, ಈ ಪೈಕಿ 832 ರೈತರ ಸಾಲದ ಮತ್ತು ವೈಯಕ್ತಿಕ ಮಾಹಿತಿಯನ್ನು ತಂತ್ರಾಂಶದಲ್ಲಿ ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ.

KR Ramesh Kumar: 'ರಾಮಮಂದಿರ ಕಟ್ಟಿದರೆ ಸಾಕು ಎನ್ನುವವರಿಗೆ ದೇಶ ಬಿಟ್ಟಿದ್ದೇವೆ'

ಉಳಿದ 1201 ರೈತರ ಆಧಾರ್ ಕಾರ್ಡ್, ಪಡಿತರ ಚೀಟಿ, ಆರ್‍ಟಿಸಿ ದಾಖಲೆಗಳು , ಸಂಬಂಧಪಟ್ಟ ಇಲಾಖೆಗಳ ದತ್ತಾಂಶದೊಂದಿಗೆ ರೈತರು ಪಡೆದ ಸಾಲದ ಮಾಹಿತಿ, ಸಹಕಾರ ಸಂಘಗಳ ದಾಖಲೆಗಳೊಂದಿಗೆ ತಾಳೆಯಾಗಿಲ್ಲ. ಸಂಘದ ಹಂತದಲ್ಲೇ ಸರಿಪಡಿಸಲಾಗಿದ್ದು, ಸರಿಪಡಿಸಿದ ನಂತರ ಅರ್ಹ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Good News: ಖಾಸಗಿ ಶಾಲೆಗಳ ಶುಲ್ಕ ವಸೂಲಿ ಕ್ರಮಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News