ನವದೆಹಲಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan samman nidhi) ಅಡಿಯಲ್ಲಿ, ಕೇಂದ್ರ ಸರ್ಕಾರವು ಯೋಜನೆಯ ಆರ್ಥಿಕ ಫಲಾನುಭವಿ ರೈತರಿಗೆ (Farmers) ಪ್ರತಿ ವರ್ಷ 6,000 ರೂ.ಯನ್ನು ರೈತರ ಖಾತೆಗೆ ವರ್ಗಾಯಿಸುತ್ತದೆ. ಪ್ರತಿ 4 ತಿಂಗಳ ಅಂತರದಲ್ಲಿ 2 ಸಾವಿರ ರೂ ಯಂತೆ 3 ಕಂತುಗಳನ್ನು ಹಣವನ್ನು ರೈತರ ಖಾತೆಗೆ ಹಾಕುತ್ತದೆ. ಇ ವರ್ಷದ ಮೂರೂ ಕಂತುಗಳನ್ನು ರೈತರ ಖಾತೆಗೆ ಹಾಕಲಾಗಿದೆ. ಇನ್ನು ನಾಲ್ಕನೇ ಕಂತು ಹೋಳಿ (Holi) ಹಬ್ಬಕ್ಕಿಂತ ಮುಂಚೆ ಹಾಕುವ ನಿರೀಕ್ಷೆ ಇದೆ.
ನೋಂದಾಯಿಸುವುದು ಹೇಗೆ ?
ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ (Kisan samman nidhi) ಯೋಜನೆಗೆ ನೋಂದಣಿ ಪ್ರಕ್ರಿಯೆ ಸಾಕಷ್ಟು ಸುಲಭವಾಗಿದೆ. ಈ ಯೋಜನೆಗೆ ನೀವು ಪಂಚಾಯತ್ ಕಾರ್ಯದರ್ಶಿ, ಸಾಮಾನ್ಯ ಸೇವಾ ಕೇಂದ್ರಕ್ಕೆ ಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಈ ಯೋಜನೆಗೆ ನೀವೇ ಕೂಡಾ ನೋಂದಾಯಿಸಿಕೊಳ್ಳಬಹುದು.
ಇದನ್ನೂ ಓದಿ : LIC of India: ಹಣ ಉಳಿತಾಯಕ್ಕಾಗಿ ಹೊಸ ವಿಮಾ ಪಾಲಿಸಿ ಪರಿಚಯಿಸಿದ LIC..!
ನೋಂದಣಿ ಪಕ್ರಿಯೇ ಹೀಗಿದೆ :
1-PM ಕಿಸಾನ್ ಅಧಿಕೃತ website pmkisan.gov.in ಗೆ ಭೇಟಿ ನೀಡಿ
2-Farmers Corner ಆಯ್ಕೆ ಮಾಡಿ
3-New Farmer Registration ಕ್ಲಿಕ್ ಮಾಡಿ
4- ಆಧಾರ್ ಸಂಖ್ಯೆಯನ್ನು (Aadhaar) ನಮೂದಿಸಿದ ನಂತರ ಕ್ಯಾಪ್ಚಾ ಕೋಡ್ ಕೊಡಿ
5- ನಿಮ್ಮ ರಾಜ್ಯದ ಬಗ್ಗೆ ಮಾಹಿತಿ ಮತ್ತು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ
6- ಬ್ಯಾಂಕ್ ಖಾತೆ (Bank account) ಮಾಹಿತಿ ಮತ್ತು ಕೃಷಿ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಸೇವ್ ಕೊಡಿ
ತಪ್ಪು ಮಾಹಿತಿಯನ್ನು ನೀಡಬೇಡಿ :
ಇತ್ತೀಚೆಗೆ, ಕಿಸಾನ್ ಸಮ್ಮನ್ ನಿಧಿಯ ಲಾಭವನ್ನು ಪಡೆಯುವ ಉದ್ದೇಶದಿಂದ ರೈತರು (Farmers) ಎಂದು ಹೇಳಿ ಸುಳ್ಳು ಮಾಹಿತಿ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ರೀತಿ ಮಾಡಿದವರ ವಿರುದ್ದ ಸರ್ಕಾರ ಕೂಡಾ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಹಾಗಾಗಿ ನೋಂದಣಿ (Registration) ಮಾಡಿಸುವಾಗ ಕಿಸಾನ್ ಸಮ್ಮನ್ ನಿಧಿಗೆ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಇದನ್ನೂ ಓದಿ : Air Travel Guidelines: ವಿಮಾನಯಾನದ ವೇಳೆ ಈ ತಪ್ಪುಗಳನ್ನು ಮಾಡದಿರಿ
ಕಿಸಾನ್ ಸಮ್ಮನ್ ನಿಧಿಗೆ ಯಾರು ಅರ್ಹರಲ್ಲ :
1- ಜಮೀನಿನಲ್ಲಿ ಕೆಲಸ ಮಾಡುವ ರೈತರಿಗೆ ಯೋಜನೆಯ ಲಾಭ ಸಿಗುವುದಿಲ್ಲ
2- ಸರ್ಕಾರಿ ಅಥವಾ ನಿವೃತ್ತ ನೌಕರರುಈ ಯೋಜನೆಗೆ ಅರ್ಹರಲ್ಲ
3. ಹಾಲಿ ಸಚಿವರು, ಮಾಜಿ ಸಚಿವರು, ಸಂಸದರು (MP) ಮತ್ತು ಶಾಸಕರು (MLA) ಪ್ರಯೋಜನ ಪಡೆಯುವಂತಿಲ್ಲ
4- ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್, ವಕೀಲರು, ಸಿಎಗೂ ಯೋಜನೆಯ್ ಲಾಭ ಸಿಗುವುದಿಲ್ಲ
5- ಆದಾಯ ತೆರಿಗೆ (Income tax) ಪಾವತಿಸುವ ರೈತ ಕುಟುಂಬಗಲು ಅರ್ಜಿ ಸಲ್ಲಿಸುವಂತಿಲ್ಲ
6- 10 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವ ರೈತರು ಅರ್ಜಿ ಹಾಕುವಂತಿಲ್ಲ
7- ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಬಳಸುವ ರೈತರಿಗೂ ಲಾಭ ಸಿಗುವುದಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.