Knight Frank Wealth Report 2021: ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಶೇ.63 ರಷ್ಟು ಏರಿಕೆ: ವರದಿ

Knight Frank Wealth Report 2021ರ  ಪ್ರಕಾರ 2025ರವರೆಗೆ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಶೇ.63 ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ.

Written by - Nitin Tabib | Last Updated : Feb 24, 2021, 09:49 PM IST
  • ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಶೇ.63 ರಷ್ಟು ಏರಿಕೆ.
  • Knight Frank Wealth Report 2021 ವರದಿಯಿಂದ ಈ ಅಂಶ ಬಹಿರಂಗ
  • ಇಂಡೋನೇಷ್ಯದ ಬಿಲಿಯನೇರ್ ಗಳ ಸಂಖ್ಯೆಯಲ್ಲಿ ಶೇ.67 ರಷ್ಟು ವೃದ್ಧಿ.
Knight Frank Wealth Report 2021: ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಶೇ.63 ರಷ್ಟು ಏರಿಕೆ: ವರದಿ title=
Knight Frank Wealth Report 2021 (File Photo)

ನವದೆಹಲಿ:  Knight Frank Wealth Report 2021 - ಭಾರತದಲ್ಲಿ ಅತ್ಯಂತ ಶ್ರೀಮಂತ (Ultra High Net Worth Individuals / UHNWI) ಸಂಖ್ಯೆ 2025 ರ ವೇಳೆಗೆ ಶೇಕಡಾ 63 ರಷ್ಟು ಹೆಚ್ಚಾಗಿ 11,198 ಕ್ಕೆ ಏರಿಕೆಯಾಗಲಿದೆ. ಈ ವಿಷಯದಲ್ಲಿ ಪ್ರಸ್ತುತ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಜನರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ಇದೇ ವೇಳೆ  ವಿಶ್ವಾದ್ಯಂತ UHNWIಗಳ ಸಂಖ್ಯೆ 2020-25ರ ನಡುವೆ 27 ಪ್ರತಿಶತದಷ್ಟು 663,483 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಸಂಪತ್ತು ಸಲಹಾ ಸಂಸ್ಥೆ Knight Frank Wealth Report 2021 ರಲ್ಲಿ ಇದು ಬಹಿರಂಗವಾಗಿದೆ. 3 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಜನರು ಅತ್ಯಂತ ಶ್ರೀಮಂತರು ಈ ಪಟ್ಟಿಯಲ್ಲಿ ಬರುತ್ತಾರೆ.

ಇದನ್ನೂ ಓದಿ- 10ನೇ ತರಗತಿ ಪಾಸಾದವರಿಗೆ Reserve Bank Of India ನಲ್ಲಿ ಉದ್ಯೋಗಾವಕಾಶ

Knight Frank Wealth Report 2021 ವರದಿಯ ಪ್ರಕಾರ ವಿಶ್ವಾದ್ಯಂತ ಸದ್ಯ 521,653 UHNWI ಗಳಿದ್ದಾರೆ. ಇದರಲ್ಲಿ ಸುಮಾರು 6884 ಭಾರತೀಯರು ಶಾಮೀಲಾಗಿದ್ದಾರೆ. ಏಷ್ಯಾದ ಅತಿ ಧನಿಕರ ಸಂಖ್ಯೆ ಶೇ.39 ರಷ್ಟು ಏರಿಕೆಯಾಗುವ ಅಂದಾಜು ವ್ಯಕ್ತಪಡಿಸಲಾಗಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ಧಣಿಗಳ ಹೆಚ್ಚಳ ಇಂಡೋನೇಷ್ಯನಲ್ಲಾಗಲಿದೆ (ಶೇ.67) ಎಂದು ವರದಿ (Ultra High Networth Individuals Report 2021) ಹೇಳಿದೆ. ನಂತರದ ಸ್ಥಾನದಲ್ಲಿ ಭಾರತದವಿದ್ದು, ಭಾರತದಲ್ಲಿ ಈ ವೃದ್ಧಿ ಶೇ. 63ರಷ್ಟು ಇರಲಿದೆ. ಜಾಗತಿಕ ಸರಾಸರಿಯ ಪ್ರಕಾರ ಇದು ಎರಡನೇ ಅತ್ಯಧಿಕ ಸಂಖ್ಯೆಯಾಗಿದೆ. ಭಾರತದಲ್ಲಿನ ಅತಿ ಧಣಿಗಳ ಸಂಖ್ಯೆ ಇಂಡೋನೇಷ್ಯದ ಅತಿದೊಡ್ಡ ಧಣಿಗಳ ಸಂಖ್ಯೆಗಿಂತ ಶೇ.10 ರಷ್ಟು ಅಧಿಕ ಇರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ- 'EPFO’ ನಿಂದ ಹೊಸ ಮಾರ್ಗಸೂಚಿ: ಇವು ನಿಮ್ಮ ಮೇಲೆ ಬೀಳಲಿದೆ ನೇರ ಪರಿಣಾಮ..!

ಈ ಕುರಿತು ಹೇಳಿಕೆ ನೀಡಿರುವ Knight Frank india CMD, ಶಿಶಿರ್ ಬೈಜಲ್, ಕೊರೊನಾ ಮಹಾಮಾರಿಯ ಬಳಿಕ ಆರ್ಥಿಕ ಚಟುವಟಿಕೆಗಳು ನೂತನ ಮಟ್ಟಕ್ಕೆ ಸಾಗುತ್ತಿವೆ. ಇಂತಹುದರಲ್ಲಿ ಭಾರತ ಮುಂದಿನ ಕೆಲ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಹೊಂದಿರುವ ದೇಶಗಳ ಕ್ಲಬ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಲಿದೆ. ಭಾರತ ತನ್ನ ಆರ್ಥಿಕ ಪ್ರಗತಿಯ ಕ್ಷಮತೆಯ ಕಾರಣ ಏಷ್ಯಾದ ಸುಪರ್ ಪಾವರ್ ಆಗುವ ಸಾಧ್ಯತೆ ಇದೆ. ಹಾಗೂ ಇದರಿಂದ ಭಾರತದಲ್ಲಿ ವೇಗವಾಗಿ ಬೆಳೆಯುವ ಕ್ಷೇತ್ರದಲ್ಲಿ ವ್ಯವಸ್ಥೆ ನಿರ್ಮಾಣವಾಗುವ ಸಾಧ್ಯತೆ ಇದೆ. ಹೊಸ ಆರ್ಥಿಕ ಅವಕಾಶಗಳ ಸಹಾಯದಿಂದ ಸಂಪತ್ತು ನಿರ್ಮಾಣಗೊಳ್ಳುವ ಆಕರ್ಷಕ ಅವಸರಗಳು ಸೃಷ್ಟಿಯಾಗಲಿವೆ. ಅವುಗಳ ಸಹಾಯದಿಂದ ಭಾರತದ ಅತಿ ಹೆಚ್ಚು ಧಣಿಗಳ ಕ್ಲಬ್ ನಲ್ಲಿ ಹೊಸ ಜನರ ಪ್ರವೇಶವಾಗಲಿದೆ ಎಂದು ವರದಿ (UHNWI Report 2021) ಹೇಳಿದೆ.

ಈ ದೇಶಗಳಲ್ಲಿ ವೇಗವಾಗಿ ಹೆಚ್ಚಾಗಲಿದೆ ಅತಿ ಧನಿಕರ ಸಂಖ್ಯೆ

ಮುಂಬೈ, ದೆಹಲಿ ಹಾಗೂ ಬೆಂಗಳೂರು ನೆಚ್ಚಿನ ನಗರಗಳಾಗಿವೆ

ವರದಿಯ ಪ್ರಕಾರ, ಭಾರತವನ್ನು ನಗರಗಳ ಆಧಾರದ ಮೇಲೆ ವಿಂಗಡಿಸುವುದಾದರೆ,  ಮುಂಬೈ, ದೆಹಲಿ ಮತ್ತು ಬೆಂಗಳೂರು ಕ್ರಮವಾಗಿ 920, 375 ಮತ್ತು 238 ಅತ್ಯಂತ ಶ್ರೀಮಂತ ಜನರಿಗೆ ನೆಲೆಯಾಗಲಿವೆ. ವೆಲ್ತ್ ರಿಪೋರ್ಟ್ ಆಟಿಟ್ಯೂಡ್ಸ್ ಸಮೀಕ್ಷೆಯ ಸಂಪತ್ತು ವರದಿಯು 2021 ರಲ್ಲಿ ಭಾರತದ ಶೇ. 91 ರಷ್ಟು ಶ್ರೀಮಂತರ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತದಲ್ಲಿ ಶ್ರೀಮಂತರ ಸಂಖ್ಯೆಯಲ್ಲಿನ ಹೆಚ್ಚಳವು ಜಾಗತಿಕ ಸರಾಸರಿ ಶೇ. 27 ಮತ್ತು ಏಷ್ಯಾದ ಸರಾಸರಿ ಶೇ. 39 ಕ್ಕಿಂತ ಹೆಚ್ಚಾಗಿದೆ.

ಅತಿ ಹೆಚ್ಚು ಧಣಿಗಳನ್ನು ಹೊಂದಿದವರ ಪಟ್ಟಿಯಲ್ಲಿ ಭಾರತ 13ನೇ ಸ್ಥಾನದಲ್ಲಿದೆ

ಬಿಲಿಯನೇರ್ ಗಳ ಸಂಖ್ಯೆಯೂ ಕೂಡ ಹೆಚ್ಚಾಗಲಿದೆ
Knight Frank Wealth Report 2021 ವರದಿಯ ಪ್ರಕಾರ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆಯೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ವರದಿಯ ಪ್ರಕಾರ 2020ರಲ್ಲಿದ್ದ 113 ಬಿಲಿಯನೇರ್ (Billionires In India 2021) ಗಳ ಸಂಖ್ಯೆ  2025ರಲ್ಲಿ ಶೇ. 43 ರಷ್ಟು ಹೆಚ್ಚಾಗಿ 162 ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಬಿಲಿಯನೇರ್ ಗಳ ಸಂಖ್ಯೆಯಲ್ಲಿನ ಈ ಹೆಚ್ಚಳ ಜಾಗತಿಕ ಶೇ.24ಕ್ಕಿಂತ ಹಾಗೂ ಏಷಿಯಾದ ಶೇ.38ಕ್ಕಿಂತ ಅಧಿಕವಾಗಿದೆ ಎಂದು ವರದಿ (KFW Report On UHNWI 2021) ಹೇಳಿದೆ.

ಇದನ್ನೂ ಓದಿ-ಮಾರ್ಚ್ 1 ರಿಂದ Corona Vaccination ಎರಡನೇ ಹಂತ ಆರಂಭ, ಯಾರಿಗೆ ಸಿಗಲಿದೆ ಲಸಿಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News