ಪಿಎಂ ಕಿಸಾನ್ ಪಟ್ಟಿಯಿಂದ ಲಕ್ಷಾಂತರ ಲಾಭಾರ್ಥಿಗಳ ಹೆಸರು ಮಾಯ. ! ನಿಮ್ಮ ಹೆಸರನ್ನೊಮ್ಮೆ ಪರಿಶೀಲಿಸಿ ನೋಡಿ

ಅನೇಕ ಫಲಾನುಭವಿಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ ಸರ್ಕಾರ ಫಲಾನುಭವಿಗಳಿಗೆ ಇ-ಕೆವೈಸಿ ಮಾಡುವಂತೆ ಕೇಳಿದೆ.

Written by - Ranjitha R K | Last Updated : Aug 25, 2022, 01:41 PM IST
  • ಪಿಎಂ ಕಿಸಾನ್ 12 ನೇ ಕಂತಿನ ನಿರೀಕ್ಷೆಯಲ್ಲಿ ರೈತರು
  • ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ಆಗಸ್ಟ್ 31
  • 12 ನೇ ಕಂತು ಸೆಪ್ಟೆಂಬರ್ 15 ರೊಳಗೆ ವರ್ಗಾವಣೆಯಾಗುವ ನಿರೀಕ್ಷ
ಪಿಎಂ ಕಿಸಾನ್ ಪಟ್ಟಿಯಿಂದ ಲಕ್ಷಾಂತರ  ಲಾಭಾರ್ಥಿಗಳ ಹೆಸರು ಮಾಯ. ! ನಿಮ್ಮ ಹೆಸರನ್ನೊಮ್ಮೆ ಪರಿಶೀಲಿಸಿ ನೋಡಿ  title=
PM Kisan Scheme (file photo)

ಬೆಂಗಳೂರು : ಪಿಎಂ ಕಿಸಾನ್ ಯೋಜನೆಯಲ್ಲಿ ನೋಂದಾಯಿಸಿಕೊಂಡಿರುವ ಕೋಟಿಗಟ್ಟಲೆ ಫಲಾನುಭವಿಗಳು 12ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಯೋಜನೆಯಲ್ಲಿ ಯಾವುದೇ ರೀತಿಯ ಅಡಚಣೆಗಳು ಆಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಇ-ಕೆವೈಸಿ ದಿನಾಂಕವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ. ಸರ್ಕಾರ ಜಾರಿಗೆ ತರುತ್ತಿರುವ ಕಟ್ಟುನಿಟ್ಟಿನ ಕ್ರಮದ ಪರಿಣಾಮ,   ಕಳೆದೆರಡು ಕಂತುಗಳನ್ನು ಪಡೆದ ರೈತರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.

ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ಆಗಸ್ಟ್ 31 :
ಅನೇಕ ಫಲಾನುಭವಿಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ ಸರ್ಕಾರ ಫಲಾನುಭವಿಗಳಿಗೆ ಇ-ಕೆವೈಸಿ ಮಾಡುವಂತೆ ಕೇಳಿದೆ. ಈ ಕೆವೈಸಿ ಮಾಡಿಸಳು ನೀಡಿರುವ ಕೊನೆಯ ದಿನಾಂಕದ ಗಡುವನ್ನು ಮೂರು ಬಾರಿ ವಿಸ್ತರಿಸಿದೆ. ಇ-ಕೆವೈಸಿ ಮಾಡಿಸಲು  ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಇನ್ನು ಮುಂದೆ ಈ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟವಾಗಿ ಹೇಳಿದೆ.  

ಇದನ್ನೂ ಓದಿ : Arecanut Today Price: ಶಿವಮೊಗ್ಗದಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ

11.15 ಕೋಟಿ ರೈತರು 10 ನೇ ಕಂತು ಪಡೆದಿದ್ದಾರೆ. ಯೋಜನೆಯ ಲಾಭ ಪಡೆಯಬೇಕಾದರೆ  ಇ-ಕೆವೈಸಿ ಮಾಡಿಸುವುದು ಅಗತ್ಯ ಎಂಬ ಕ್ರಮವನ್ನು ಜಾರಿಗೆ ತಂದ ನಂತರ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆಗಸ್ಟ್ ಮತ್ತು ನವೆಂಬರ್ 2021 ರ ನಡುವೆ 9 ನೇ ಕಂತಿನ ಹಣವನ್ನು 11.19 ಕೋಟಿ ರೈತರು ಸ್ವೀಕರಿಸಿದ್ದಾರೆ. ಇದರ ನಂತರ, ಸುಮಾರು 11.15 ಕೋಟಿ ರೈತರು ಡಿಸೆಂಬರ್ 2021 ಮತ್ತು ಮಾರ್ಚ್ 2022 ರ ನಡುವೆ 10 ನೇ ಕಂತು ಪಡೆದಿದ್ದಾರೆ. 

12 ನೇ ಕಂತು ಸೆಪ್ಟೆಂಬರ್ 15 ರೊಳಗೆ  ವರ್ಗಾವಣೆಯಾಗುವ ನಿರೀಕ್ಷೆ : 
ಏಪ್ರಿಲ್ ಮತ್ತು ಜುಲೈ 2022 ರ ನಡುವೆ ಸ್ವೀಕರಿಸಿರುವ 11 ನೇ ಕಂತಿನ ವೇಳೆ ಫಲಾನುಭವಿಗಳ ಸಂಖ್ಯೆಯಲ್ಲಿ ದೊಡ್ಡ ಕುಸಿತವನ್ನು ಕಂಡಿದೆ. ಈ ಬಾರಿ ಈ ಸಂಖ್ಯೆ 10.92 ಕೋಟಿಗೆ ಇಳಿದಿದೆ. ಈಗ ಆಗಸ್ಟ್ ಮತ್ತು ನವೆಂಬರ್ 2022 ರ ನಡುವಿನ 12 ನೇ ಕಂತಿನಲ್ಲಿ ಫಲಾನುಭವಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಈ ಕಂತು ಸೆಪ್ಟೆಂಬರ್ 15ರೊಳಗೆ ರೈತರ ಖಾತೆಗೆ ಸೇರುವ ನಿರೀಕ್ಷೆ ಇದೆ.

ಇದನ್ನೂ ಓದಿ : Petrol Price Today: ಕಚ್ಚಾ ತೈಲದ ಕುದುರೆ ಓಟ, 110 ರೂ.ಗೆ ತಲುಪಿದ ಲೀಟರ್ ಪೆಟ್ರೋಲ್ ದರ!

ಕೊನೆಯ ಮೂರು ಕಂತುಗಳು ಮತ್ತು ಅವುಗಳ ಫಲಾನುಭವಿ
1. 11ನೇ ಕಂತು - ಏಪ್ರಿಲ್ ನಿಂದ ಜುಲೈ 2022: 10,92,23,183
2. 10ನೇ ಕಂತು - ಡಿಸೆಂಬರ್ 2021 ರಿಂದ ಮಾರ್ಚ್ 2022: 11,14,92,273
3. 9ನೇ ಕಂತು - ಆಗಸ್ಟ್ ನಿಂದ ನವೆಂಬರ್ 2021 : 11,19 ,25,347

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News