ಕುಳಿತಲ್ಲೇ ಆಧಾರ್ ರೇಶನ್ ಕಾರ್ಡ್ ಲಿಂಕ್ ಮಾಡಿ ಈ ಅದ್ಬುತ ಪ್ರಯೋಜನ ಪಡೆಯಿರಿ .!

Aadhaar-Ration Link:ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡುವ ಮೂಲಕ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. 

Written by - Ranjitha R K | Last Updated : Nov 9, 2022, 02:29 PM IST
  • ಉಚಿತ ಪಡಿತರ ಪಡೆಯುವ ಗಡುವನ್ನು ಸರ್ಕಾರ ಡಿಸೆಂಬರ್ ವರೆಗೆ ವಿಸ್ತರಿಸಿದೆ.
  • ಕೇಂದ್ರ ಸರ್ಕಾರ ‘ಒನ್ ನೇಷನ್ ಒನ್ ಪಡಿತರ ಚೀಟಿ’ಯೋಜನೆ ಆರಂಭಿಸಿದೆ.
  • ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡುವುದು ಅಗತ್ಯ
ಕುಳಿತಲ್ಲೇ ಆಧಾರ್ ರೇಶನ್ ಕಾರ್ಡ್ ಲಿಂಕ್ ಮಾಡಿ ಈ ಅದ್ಬುತ ಪ್ರಯೋಜನ ಪಡೆಯಿರಿ .! title=
Aadhaar-Ration Link (file photo)

Aadhaar-Ration Link : ಉಚಿತ ಪಡಿತರ ಪಡೆಯುವ ಗಡುವನ್ನು ಸರ್ಕಾರ ಡಿಸೆಂಬರ್ ವರೆಗೆ ವಿಸ್ತರಿಸಿದೆ. ಪಡಿತರ ಚೀಟಿ ಇದ್ದರೆ ಕಡಿಮೆ ಬೆಲೆಗೆ ಪಡಿತರ ಪಡೆಯುವುದರ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದಕ್ಕಾಗಿಯೇ ಕೇಂದ್ರ ಸರ್ಕಾರ ‘ಒನ್ ನೇಷನ್ ಒನ್ ಪಡಿತರ ಚೀಟಿ’ಯೋಜನೆ ಆರಂಭಿಸಿದೆ.

ಈ ಯೋಜನೆಯಡಿ ದೇಶದ ಲಕ್ಷಾಂತರ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಪಡಿತರ ಚೀಟಿಯಡಿ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುವುದಲ್ಲದೆ, ಇನ್ನೂ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು.  ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡುವ ಮೂಲಕ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಇದರೊಂದಿಗೆ ನೀವು ದೇಶದ ಯಾವುದೇ ರಾಜ್ಯದ ಪಡಿತರ ಚೀಟಿ ಅಂಗಡಿಯಿಂದ ಪಡಿತರವನ್ನು ಪಡೆಯುವುದು ಸಾಧ್ಯವಾಗುವುದು. 

ಇದನ್ನೂ ಓದಿ : Indian Railways: ರೈಲು ಟಿಕೆಟ್‌ನಲ್ಲಿ WL, RSWL, PQWL, GNWL ನ ಅರ್ಥವೇನು? ಇಲ್ಲಿದೆ ಮಾಹಿತಿ

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಈ ರೀತಿ ಲಿಂಕ್ ಮಾಡಿ :
1. ಇದಕ್ಕಾಗಿ, ಮೊದಲು ಅಧಿಕೃತ ವೆಬ್‌ಸೈಟ್ uidai.gov.in ಗೆ ಹೋಗಿ.
2. ಈಗ ನೀವು 'Start Now' ಮೇಲೆ ಕ್ಲಿಕ್ ಮಾಡಿ.
3. ಈಗ ಇಲ್ಲಿ ನೀವು ನಿಮ್ಮ ವಿಳಾಸವನ್ನು  ತುಂಬಬೇಕು .
4. ಇದರ ನಂತರ 'Ration Card Benefit' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
5. ಈಗ ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಭರ್ತಿ ಮಾಡಿ. 
6. ಅದನ್ನು ಭರ್ತಿ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
7. ಇಲ್ಲಿ OTP ಅನ್ನು ಭರ್ತಿ ಮಾಡಿದ ನಂತರ, ನಿಮ್ಮ  ಸ್ಕ್ರೀನ್ ಮೇಲೆ ಪ್ರಕ್ರಿಯೆ ಪೂರ್ಣಗೊಂಡ  ಮೆಸೇಜ್ ಕಾಣಿಸುತ್ತದೆ. 
8. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ತಕ್ಷಣ, ನಿಮ್ಮ ಆಧಾರ್ ಅನ್ನು ಪರಿಶೀಲಿಸಿ, ನಿಮ್ಮ ಆಧಾರ್ ಅನ್ನು ನಿಮ್ಮ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲಾಗುತ್ತದೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಬಂಪರ್ : ಡಿಎ ಶೇ.4ರಷ್ಟು ಹೆಚ್ಚಳ, 2 ಕಂತುಗಳಲ್ಲಿ ಕೈ ಸೇರುವುದು ಅರಿಯರ್ಸ್

ನೀವು ಆಫ್‌ಲೈನ್‌ನಲ್ಲಿಯೂ ಲಿಂಕ್ ಮಾಡಬಹುದು :
ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು, ಅಗತ್ಯವಿರುವ ದಾಖಲೆಗಳಲ್ಲಿ ಆಧಾರ್ ಕಾರ್ಡ್‌ನ ಪ್ರತಿ, ಪಡಿತರ ಚೀಟಿಯ ಪ್ರತಿ ಮತ್ತು ಪಡಿತರ ಚೀಟಿದಾರರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಪಡಿತರ ಕೇಂದ್ರದಲ್ಲಿ ಸಲ್ಲಿಸಬೇಕು. ಇದಲ್ಲದೆ, ನಿಮ್ಮ ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಡೇಟಾ ಪರಿಶೀಲನೆಯನ್ನು ಸಹ ಪಡಿತರ ಕೇಂದ್ರದಲ್ಲಿ ಮಾಡಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News