LPG Cylinder : LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಬಿಗ್ ನ್ಯೂಸ್!

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಸಿಹಿ ಸುದ್ದಿಯೊಂದು ಸರ್ಕಾರ ನೀಡಿದೆ. ಇದರಿಂದ ಗ್ರಾಹಕರಿಗೆ ಸಾಕಷ್ಟು ಪ್ರಯೋಜನವನ್ನೂ ಪಡೆಯಬಹುದು. ಇದು ಮನೆಯಲ್ಲಿ ಸಿಲಿಂಡರ್‌ಗಳ ಸುರಕ್ಷತೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

Written by - Channabasava A Kashinakunti | Last Updated : Nov 19, 2022, 04:48 PM IST
  • ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಸಿಹಿ ಸುದ್ದಿ
  • ಪ್ರತಿ ಮನೆಯಲ್ಲೂ ಅಡುಗೆಗೆ ಬಳಸಲಾಗುತ್ತಿದೆ ಎಲ್‌ಪಿಜಿ ಗ್ಯಾಸ್
  • QR ಕೋಡ್ ಆಧಾರಿತ ಸಿಲಿಂಡರ್‌
LPG Cylinder : LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಬಿಗ್ ನ್ಯೂಸ್! title=

LPG Cylinder Price : ಪ್ರಸ್ತುತ ಎಲ್‌ಪಿಜಿ ಗ್ಯಾಸ್ ಅನ್ನು ಪ್ರತಿ ಮನೆಯಲ್ಲೂ ಅಡುಗೆಗೆ ಬಳಸಲಾಗುತ್ತಿದೆ. ಕೆಲವೆಡೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಿದರೆ, ಇನ್ನುಳಿದ ಕಡೆ ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್ ಮೂಲಕ ಮನೆಗಳಿಗೆ ಗ್ಯಾಸ್ ತಲುಪಿಸಲಾಗುತ್ತದೆ. ಹೀಗಾಗಿ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಸಿಹಿ ಸುದ್ದಿಯೊಂದು ಸರ್ಕಾರ ನೀಡಿದೆ. ಇದರಿಂದ ಗ್ರಾಹಕರಿಗೆ ಸಾಕಷ್ಟು ಪ್ರಯೋಜನವನ್ನೂ ಪಡೆಯಬಹುದು. ಇದು ಮನೆಯಲ್ಲಿ ಸಿಲಿಂಡರ್‌ಗಳ ಸುರಕ್ಷತೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಇದರೊಂದಿಗೆ, ಕಳ್ಳತನಕ್ಕೆ ಸಂಬಂಧಿಸಿದ ಘಟನೆಗಳನ್ನು ತಡೆಯಲು ಸಹ ಇದು ಸಹಾಯಕವಾಗಲಿದೆ. ಅದಕ್ಕಾಗಿ ಕ್ಯೂಆರ್ ಕೋಡ್ ಆಧಾರಿತ ಸಿಲೆಂಡರ್ ಜರಿ ಮಾಡಲಿ ಸರ್ಕಾರ ಮುಂದಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

QR ಕೋಡ್ ಆಧಾರಿತ ಸಿಲಿಂಡರ್‌

ಇತ್ತೀಚೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳು ಶೀಘ್ರದಲ್ಲೇ ಕ್ಯೂಆರ್ ಕೋಡ್‌ಗಳೊಂದಿಗೆ ಬರಲಿವೆ, ಇದು ದೇಶೀಯ ಸಿಲಿಂಡರ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೋಡ್-ಆಧಾರಿತ ಟ್ರ್ಯಾಕ್ ಮತ್ತು ಟ್ರೇಸ್ ಉಪಕ್ರಮವು ಕಳ್ಳತನದ ಸಮಸ್ಯೆಗಳನ್ನು ಪರಿಹರಿಸಲು ಉತ್ತೇಜನವನ್ನು ನೀಡುತ್ತದೆ. ಅವುಗಳನ್ನು ಪತ್ತೆಹಚ್ಚುವ ಮೂಲಕ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ : Arecanut Today Price: ಅಡಿಕೆ ಧಾರಣೆ, ಇಂದು ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ?

QR ಎಂದರೇನು?

QR (ಕ್ವಿಕ್ ರೆಸ್ಪಾನ್ಸ್) ಕೋಡ್ ಡಿಜಿಟಲ್ ಪರಿಹಾರವಾಗಿದೆ. ಇವುಗಳು ಯಂತ್ರ-ಓದಬಲ್ಲ ಆಪ್ಟಿಕಲ್ ಲೇಬಲ್‌ಗಳಾಗಿದ್ದು ಅವುಗಳು ಲಗತ್ತಿಸಲಾದ ವಸ್ತುವಿನ ಬಗ್ಗೆ ವಿವರಗಳನ್ನು ಹೊಂದಿರುತ್ತವೆ. ಹೀಗಾಗಿ, ಕ್ಯೂಆರ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸಿಲಿಂಡರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಹಾಗೆ, ಯಾವುದೇ ವಂಚನೆಯನ್ನು ಸಹ ತಪ್ಪಿಸಬಹುದು. ಕ್ಯೂಆರ್ ಕೋಡ್ ಅನ್ನು ನಿಮ್ಮ ಮೊಬೈಲ್ ಸಹಾಯದಿಂದ ಸ್ಕ್ಯಾನ್ ಮಾಡಬಹುದು ಮತ್ತು ಮಾಹಿತಿಯನ್ನು ತಕ್ಷಣವೇ ಪಡೆಯಬಹುದು.

ನೀವು ಪಡೆಯಲಿದ್ದೀರಿ ಈ ಪ್ರಯೋಜನಗಳನ್ನು

ಈ ಉಪಕ್ರಮವು ಕಳ್ಳತನದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಈ ಕ್ಯೂಆರ್ ಕೋಡ್ ಸಿಲಿಂಡರ್‌ಗಳಿಗೆ ಭದ್ರತೆಯನ್ನು ಒದಗಿಸುವ ಬಗ್ಗೆ, ಅವುಗಳ ಭದ್ರತಾ ಪರೀಕ್ಷೆಗಳ ಬಗ್ಗೆ ಮಾಹಿತಿ ಮತ್ತು ಗ್ರಾಹಕರ ಸೇವೆಯನ್ನು ಹೆಚ್ಚಿಸುವ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : Vegetable Price Today: ಭಾರೀ ಏರಿಳಿತವಾಗಿದೆ ತರಕಾರಿ ಬೆಲೆ: ಇಲ್ಲಿದೆ ನೋಡಿ ಸಂಪೂರ್ಣ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News