LPG Price Cut: LPG ಗ್ರಾಹಕರಿಗೆ ಗುಡ್ ನ್ಯೂಸ್, ಸಿಲಿಂಡರ್‌ನ ಬೆಲೆ 122 ರೂ.ವರೆಗೆ ಕಡಿತ

LPG Price Cut: ಎಲ್‌ಪಿಜಿ ಗ್ರಾಹಕರಿಗೆ ದೊಡ್ಡ ಪರಿಹಾರದ ಸುದ್ದಿ ಇದೆ. ಐಒಸಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದೆ. ಆದರೆ, ದೇಶೀಯ ಎಲ್‌ಪಿಜಿಯ ಬೆಲೆಯಲ್ಲಿ 14.2 ಕೆಜಿ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.  

Written by - Yashaswini V | Last Updated : Jun 1, 2021, 10:32 AM IST
  • ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಇಳಿಕೆ
  • ಐಒಸಿ ವೆಬ್‌ಸೈಟ್‌ನ ಪ್ರಕಾರ ಜೂನ್ 1 ರಿಂದ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಬದಲಾಗಲಿದೆ
  • ಎಲ್‌ಪಿಜಿ ಸಿಲಿಂಡರ್ ದರ 2021 ರಲ್ಲಿ 115 ರೂ. ಏರಿಕೆ ಕಂಡಿದೆ
LPG Price Cut: LPG ಗ್ರಾಹಕರಿಗೆ ಗುಡ್ ನ್ಯೂಸ್, ಸಿಲಿಂಡರ್‌ನ ಬೆಲೆ 122 ರೂ.ವರೆಗೆ ಕಡಿತ title=
LPG Price Cut

ನವದೆಹಲಿ: LPG Price Cut: ಎಲ್‌ಪಿಜಿ ಗ್ರಾಹಕರಿಗೆ ದೊಡ್ಡ ಪರಿಹಾರದ ಸುದ್ದಿ ಇದೆ. ಐಒಸಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದೆ. ಆದರೆ, ದೇಶೀಯ ಎಲ್‌ಪಿಜಿಯ ಬೆಲೆಯಲ್ಲಿ ಅಂದರೆ 14.2 ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದಕ್ಕೂ ಮೊದಲು ಮೇ ತಿಂಗಳ ಮೊದಲು 19 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿತ್ತು.

19 ಕೆಜಿ ಸಿಲಿಂಡರ್ ಅಗ್ಗವಾಯಿತು:
ಐಒಸಿ ವೆಬ್‌ಸೈಟ್‌ನ ಪ್ರಕಾರ, ಜೂನ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ (Commercial Cylinder) ಬೆಲೆ ಪ್ರತಿ ಸಿಲಿಂಡರ್‌ಗೆ 1473.50 ರೂ., ಈ ಮೊದಲು ಅದರ ಬೆಲೆ 1595.50 ರೂ. ಇತ್ತು. ಅಂದರೆ, ಸಿಲಿಂಡರ್ ಬೆಲೆಯನ್ನು 122 ರೂ.ಗಳಷ್ಟು  ಕಡಿತಗೊಳಿಸಲಾಗಿದೆ. ಸರ್ಕಾರಿ ಪೆಟ್ರೋಲಿಯಂ ಕಂಪನಿಗಳು ಮೇ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 45.50 ರೂ.ವರೆಗೆ ಕಡಿಮೆ ಮಾಡಿದ್ದವು. ಆಗ ಅದರ ಬೆಲೆ 1641 ರೂ.ನಿಂದ 1595.5 ರೂ.ಗೆ ಇಳಿದಿತ್ತು.

ಇದನ್ನೂ ಓದಿ- LPG Subsidy ಬರುತ್ತಿಲ್ಲವೇ? ಸಬ್ಸಿಡಿ ಪಡೆಯಲು ಇದು ಸುಲಭ ಮಾರ್ಗ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 122 ರೂ. ಇಳಿಕೆ:
ಐಒಸಿ ವೆಬ್‌ಸೈಟ್ ಪ್ರಕಾರ, ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್‌ನ (Gas Cylinder) ಹೊಸ ಬೆಲೆ ಈಗ 1595.50 ಬದಲಿಗೆ 1473.5 ರೂ. ಆಗಿದೆ. ಹೊಸ ಬೆಲೆ ಮುಂಬೈನಲ್ಲಿ 1545 ರೂ.ಗೆ ಬದಲಾಗಿ 1422.5 ರೂ., ಕೋಲ್ಕತ್ತಾದಲ್ಲಿ 1667.50 ರೂ.ಗೆ ಬದಲಾಗಿ 1544.5 ರೂ. ಮತ್ತು ಚೆನ್ನೈನಲ್ಲಿ 1725.50 ರೂ.ಗಳ ಬದಲು 1603 ರೂ. ಆಗಿದೆ.

ಜೂನ್‌ನಲ್ಲಿ ಎಲ್‌ಪಿಜಿ ಬೆಲೆ 19 ಕೆ.ಜಿ.
ನಗರ ಜೂನ್ ಮೇ
ದೆಹಲಿ 1473.5 1595.50
ಮುಂಬೈ 1422.5 1545.00
ಕೋಲ್ಕತಾ 1544.5 1667.50
ಚೆನ್ನೈ 1603.0 1725.50

ಇದನ್ನೂ ಓದಿ- Aadhaar: ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲವೇ? ಈ ರೀತಿ ಪರಿಶೀಲಿಸಿ

ಎಲ್‌ಪಿಜಿ ಸಿಲಿಂಡರ್ ದರ 2021 ರಲ್ಲಿ 115 ರೂ. ಏರಿಕೆ ಕಂಡಿದೆ;
ಆದಾಗ್ಯೂ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂದಿಗೂ ದೆಹಲಿಯ ದೇಶೀಯ ಎಲ್‌ಪಿಜಿಯ ಬೆಲೆ ಪ್ರತಿ ಸಿಲಿಂಡರ್‌ಗೆ 809 ರೂ. ಏಪ್ರಿಲ್‌ನಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 10 ರೂ.ಗಳಿಂದ ಕಡಿತಗೊಳಿಸಲಾಗಿದ್ದು, ಅದರ ಬೆಲೆ ನೇರವಾಗಿ 819 ರೂ.ಗಳಿಂದ 809 ರೂ.ಗೆ ಇಳಿದಿದೆ. ಈ ವರ್ಷದ ಜನವರಿಯಲ್ಲಿ ದೆಹಲಿಯಲ್ಲಿ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ 694 ರೂ. ಇತ್ತು. ಇದನ್ನು ಫೆಬ್ರವರಿಯಲ್ಲಿ ಪ್ರತಿ ಸಿಲಿಂಡರ್‌ಗೆ 719 ರೂ.ಗೆ ಹೆಚ್ಚಿಸಲಾಯಿತು. ಫೆಬ್ರವರಿ 15 ರಂದು ಮತ್ತೆ ಬೆಲೆಯನ್ನು 769 ರೂ.ಗೆ ಹೆಚ್ಚಿಸಲಾಯಿತು. ನಂತರ ಫೆಬ್ರವರಿ 25 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 794 ರೂ.ಗೆ ಏರಿಸಲಾಯಿತು. ಮಾರ್ಚ್‌ನಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 819 ರೂ.ಗೆ ಏರಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News