ಬೆಂಗಳೂರು : New Wage Code : ದೇಶದಲ್ಲಿ ಶೀಘ್ರದಲ್ಲಿಯೇ ನಾಲ್ಕು ಕಾರ್ಮಿಕ ಸಂಹಿತೆ ಯೋಜನೆ ಜಾರಿಗೆ ಬರಲಿದೆ. ಇದರ ನಂತರ ನೀವು ಪ್ರತಿ ವಾರ ಮೂರು ರಜೆಯನ್ನು ಪಡೆಯುವುದು ಸಾಧ್ಯವಾಗುತ್ತದೆ. 90 ಪ್ರತಿಶತದಷ್ಟು ರಾಜ್ಯಗಳು ಕಾರ್ಮಿಕ ಸಂಹಿತೆಯ ಕರಡನ್ನು ರಚಿಸಿದ್ದು, ಶೀಘ್ರದಲ್ಲೇ ಅವುಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಂಬಳದಿಂದ ಕಚೇರಿಯ ಸಮಯದವರೆಗೂ ಬದಲಾವಣೆ :
ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ. ನಾಲ್ಕು ಕಾರ್ಮಿಕ ಸಂಹಿತೆಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ ಎಂದು ಯಾದವ್ ಭರವಸೆ ವ್ಯಕ್ತಪಡಿಸಿದ್ದಾರೆ. ಹೊಸ ವೇತನ ಸಂಹಿತೆ ಜಾರಿಯಾದ ನಂತರ ವೇತನ, ಕಚೇರಿ ಸಮಯ, ಪಿಎಫ್ , ನಿವೃತ್ತಿ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಕಾರ್ಮಿಕ ವಲಯದಲ್ಲಿ ಬದಲಾಗುತ್ತಿರುವ ಕೆಲಸ ಮಾಡುವ ವಿಧಾನಗಳು ಮತ್ತು ಕನಿಷ್ಠ ವೇತನದ ಅಗತ್ಯತೆಗೆ ಅನುಗುಣವಾಗಿ ಹೊಸ ಕಾನೂನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : FD ಮಾಡುವವರಿಗೆ ಸಿಹಿ ಸುದ್ದಿ : ಈ ಬ್ಯಾಂಕ್ ನೀಡುತ್ತಿದೆ ಅತೀ ಹೆಚ್ಚು ಬಡ್ಡಿ!
ಅಸಂಘಟಿತ ವಲಯದಲ್ಲಿ ಸುಮಾರು 38 ಕೋಟಿ ಕಾರ್ಮಿಕರು :
ಕಾರ್ಮಿಕ ಕಾನೂನಿನ ನಾಲ್ಕು ಸಂಹಿತೆಗಳ ಕರಡು ನಿಯಮಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಹೊರಡಿಸಿದೆ. ದೇಶದಲ್ಲಿನ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಅದಕ್ಕಾಗಿಯೇ ಇ-ಶ್ರಮ್ ಪೋರ್ಟಲ್ ಅಥವಾ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಅನ್ನು ರಚಿಸಲಾಗುತ್ತಿದೆ. ಸರ್ಕಾರದ ಅಂದಾಜಿನ ಪ್ರಕಾರ, ದೇಶದಲ್ಲಿ ಅಸಂಘಟಿತ ವಲಯದಲ್ಲಿ ಸುಮಾರು 38 ಕೋಟಿ ಕಾರ್ಮಿಕರಿದ್ದಾರೆ.
ಹೊಸ ವೇತನ ನೀತಿಯಿಂದ ಏನೆಲ್ಲಾ ಬದಲಾವಣೆಯಾಗಲಿದೆ :
ಕೆಲಸದ ಸಮಯ :
ಹೊಸ ವೇತನ ಸಂಹಿತೆಯಲ್ಲಿ ಗರಿಷ್ಠ ಕೆಲಸದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗುತ್ತದೆ. ಇದನ್ನು 4-3 ಅನುಪಾತದಲ್ಲಿ ವಿಂಗಡಿಸಲಾಗಿದೆ. ಅಂದರೆ, 4 ದಿನ ಕಚೇರಿ, 3 ದಿನ ವಾರದ ರಜೆ. ಪ್ರತಿ 5 ಗಂಟೆಗಳ ನಂತರ ಉದ್ಯೋಗಿಗೆ 30 ನಿಮಿಷಗಳ ವಿರಾಮವನ್ನು ನೀಡಲು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ : ಕಳೆದು ಹೋದ PAN Card ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
30 ನಿಮಿಷಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಅದು ಓವರ್ ಟೈಮ್ :
ಹೊಸ ವೇತನ ಸಂಹಿತೆಯಲ್ಲಿ, 15 ರಿಂದ 30 ನಿಮಿಷಗಳವರೆಗೆ ಹೆಚ್ಚುವರಿ ಕೆಲಸವನ್ನು ಮಾಡಿದರೆ ಅದನ್ನು ಓವರ್ ಟೈಮ್ ನಲ್ಲಿ ಸೇರಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ, 30 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ಓವರ್ ಟೈಮ್ ಎಂದು ಪರಿಗಣಿಸಲಾಗುವುದಿಲ್ಲ.
ಸ್ಯಾಲರಿ ಸ್ಟ್ರಕ್ಚರ್ ಬದಲಾಗುತ್ತದೆ :
ಹೊಸ ವೇಜ್ ಕೋಡ್ ಆಕ್ಟ್ ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ 50 ಪ್ರತಿಶತಕ್ಕಿಂತ ಕಡಿಮೆ ಇರುವಂತಿಲ್ಲ. ವೇತನ ಸಂಹಿತೆ ಜಾರಿಯಾದ ನಂತರ ನೌಕರರ ಟೇಕ್ ಹೋಮ್ ಸಂಬಳ ಕಡಿಮೆಯಾಗಲಿದೆ.
ನಿವೃತ್ತಿಯ ನಂತರ ಹೆಚ್ಚಿನ ಹಣ ಕೈ ಸೇರುತ್ತದೆ :
ಪಿಎಫ್ ಹೆಚ್ಚಳದೊಂದಿಗೆ, ಗ್ರಾಚ್ಯುಟಿಯ ಮೇಲಿನ ಕೊಡುಗೆಯೂ ಹೆಚ್ಚಾಗುತ್ತದೆ. ಅಂದರೆ, ಟೇಕ್ ಹೋಮ್ ಸಂಬಳದ ಕಡಿತದ ಪ್ರಯೋಜನವು ಪಿಎಫ್ ಮತ್ತು ನಿವೃತ್ತಿಯ ಮೇಲೆ ಲಭ್ಯವಿರುತ್ತದೆ. ಸಂಬಳ ಮತ್ತು ಬೋನಸ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.